ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುತ ಕೇಳುವ ಬನ್ನಿ ಗುರುವಿನ ಕೈಯ ಅರವ್ಹಿಸಿ ಕೊಡುವ ಸದ್ಗುರು ನಮ್ಮಯ್ಯ ಪ
ಕೇಳದೆ ಹೇಳುವ ಕೇಳದ ಮಾತು ತಿಳಿದುಕೊಳ್ಳಿರೊ ನಿಜ ಗೂಢವರಿತು 1
ತಿಳಿದೇನಂದರ ತಿಳಿಯದು ಯೋಗ ಹೂಳೆಯುತಲ್ಯದ ಮನದೊಳು ಅತಿಬ್ಯಾಗ 2
ಗುರ್ತು ಹೇಳಿದ ಮಹಿಪತಿ ಗುರುಮೂರ್ತಿ ಆರ್ಥಿಯಾಗದ ಯೋಗದ ಮನಮೂರ್ತಿ 3
***
No comments:
Post a Comment