..
kruti by ಲಕ್ಷ್ಮೀನಾರಯಣರಾಯರು Lakshminarayanaru
ಆರತಿಯನೆತ್ತಿರೆ ನಾರೇರೆಲ್ಲರು ಪ
ಕಾರುಣ್ಯ ಪಾಂಗಳಿಗೆ ಗೌರಿದೇವಿಗೆ ಅ.ಪ.
ದೇವರಾಜ ಸೇವ್ಯಮಾನ ಪಾವನಾಂಘ್ರಿಗೆ
ಜೀವಕೋಟಿಗನ್ನವಿತ್ತು ಕಾವ ದೇವಿಗೆ 1
ಸರ್ವ ಸೌಭಾಗ್ಯವೀವ ಶರ್ವಜಾಯೆಗೆ
ಪರ್ವತೇಶ ತನಯಳಿಗೆ ಗರ್ವರಹಿತೆಗೆ 2
ರಕ್ಷೌಘ ಧ್ವಂಸಿನಿಗೆ ದಕ್ಷ ಕನ್ಯೆಗೆ
ಲಕ್ಷ್ಮೀಕಾಂತನ ಭಗಿನಿ ಲಕ್ಷಣಾಂಗಿಗೆ 3
***
No comments:
Post a Comment