Monday, 2 August 2021

ವಿಧಿನಿಷೇಧ ನಿನ್ನವರಿಗೆಂತೊ ಹರಿಯೆ ankita kosalapura

 ಕೋಸಲ ಪುರೀಶರ ತಾತ್ವಿಕ ಕೃತಿ


ವಿಧಿನಿಷೇಧ ನಿನ್ನವರಿಗೆಂತೊ ಹರಿಯೆ

ನಾನಾವಿಧ ನರರಿವರಿಗೆ ಸರಿಯೆ ಪ


ವಿಧಿನಿನ್ನ ಸ್ಮರಣೇವಿನಾನಿಷೇಧ ವಿಸ್ಮøತಿಯೆಂಬ

ವಿಧಿಯನೊಂದನೆಬಲ್ಲರಲ್ಲದೆ ಮತ್ತೊಂದು ಅ.ಪ


ನಡೆಯಲ್ಪಡುವುದೆಲ್ಲವು ಲಕ್ಷಪ್ರದಕ್ಷಣೆ

ನುಡಿವುದೆಲ್ಲ ಗಾಯಿತ್ರಿಮಂತ್ರಗಳು

ಕೊಂಡುದೆಲ್ಲವು ವಿಷಯೇಂದ್ರಿಯಜ್ಞ ಹೋಮ

ದೃಢ ಪ್ರಾಜ್ಞರೇನ ಮಾಡಿದರದೆ ಮರಿಯಾದೆ 1


ಕಂಡಕಂಡದ್ದೆಲ್ಲ ನಿನ್ನ ಮೂರ್ತಿಗಳು ಭೂ

ಮಂಡಲಶಯನವೇ ನಮಸ್ಕಾರ

ಕಂಡಕಂಡಸುಕ್ರಿಯೆಯೆ ಯಜ್ಞಹೋಮ

ಮಂಡಿಯಾಗಿ ಬಿದ್ದುದೆ ಬಲಯುತರಿಗೆ 2


ಮಿಂದುದೆ ಗಂಗಾದಿ ತೀರ್ಥಗಳು

ಬಂದುದೆ ಪುಣ್ಯಕಾಲ ಸುಜನರು

ನಿಂದುದೆ ಗಯೆ ವಾರಣಾಸಿ ಕುರುಕ್ಷೇತ್ರ

ಸಂದೇಹವೇಕೆ ಮದ್ದಾನೆ ಹೊದ್ದುದೆ ಬೀದಿ 3

***


No comments:

Post a Comment