ಭಕ್ತ ಪ್ರಹ್ಲಾದಗೆ ಆರುತಿ ಮಾಡುವೆನಾ ಪ
ಆರುತಿ ಮಾಡುವೆ ನಾರಿಯ ಗರ್ಭದಿ
ನಾರದ ಮುನಿಯಿಂದ ನಾರವ ಪಡೆದಗೆ ಅ.ಪ
ಶಾಲೆಯೊಳಗೆ ದೈತ್ಯ ಬಾಲಕರಿಗೆ ಸಿರಿ
ಲÉೂೀಲನೆ ಪರನೆಂದು ಪೇಳಿದ ಬಾಲಕಗೆ 1
ನಂದತೀರ್ಥರ ಮತಸಿಂಧುವಿಗೆ ಪೂರ್ಣ
ಚಂದ್ರನೆಂದೆನಿಸಿದ ಚಂದ್ರಿಕಾರ್ಯರಿಗೆ 2
ವಂದಾರು ಜನರಿಗೆ ಮಂದಾರನೆನಿಸಿದ
ನಂದದಾಯಕ ಸುಧೀಂದ್ರಕುಮಾರಗೆ 3
ವೃಂದಾವನದೊಳಗೆ ನಿಂದು ಶೇವಕಜನ
ವೃಂದಾಪಾಲಕ ರಾಘವೇಂದ್ರಯತೀಂದ್ರಗೆ 4
ಧರೆಯೊಳು ಶರಣರ ಪೊರೆವ ಕಾರ್ಪರ
ನರಹರಿ ಯ ನೊಲಿಸಿದಂಥ ಪರಿಮಳಾಚಾರ್ಯರಿಗೆ5
****
No comments:
Post a Comment