ಪಾವಮಾನಿಯೇ ಪಾಲಿಸೋ ಕರಪಿಡಿದುದ್ಧರಿಸೋ
ಸೇವಕರೊಳಗಾಡಿಸೋ ಪ
ಶೇವಿಸುವವರಿಗೆ ದೇವತರುವೆನಿಸಿ
ಭೂವಲಯದಿ ಶು¨sಛಾವಣಿ ನಿಲಯ ಅ.ಪ
ಜೀವೋತ್ತುಮಾನೀನೆನ್ನುತ ಹೇ ಪ್ರಾಣನಾಥ
ಭಾವಿಸುವೆನೊ ಸಂತತ
ಪಾವನ ಚರಿತ ಕೃಪಾವಲೋಕನದಿ
ಪಾವನ ಮಾಡೈ ಭಾವಿ ವಿಧಾತ 1
ತುಂಗತರಂಗದುದಧಿ ಲಂಘಿಸುತ ಮುದದಿ
ಅಂಗನೆ ಸೀತೆ ಕರದಿ
ಉಂಗುರವ ಕೊಡುತ ಮಂಗಳಾಂಗ ರಘು
ಪುಂಗವಗೆರಗಿ ಸುಸಂಗತಿ ತಿಳಿಸಿದ 2
ಇಂದು ಕುಲದಿ ಜನಿಸಿ ರಿಪುವೃಂದವ ಮಥಿüಸಿ
ಇಂದ್ರಜನಣ್ಣನೆನಿಸಿ
ಅಂದು ರಣದಿ ಕುರು ವೃಂದವ ಮಥಿಶ್ಯಾ
ನಂದ ಕಂದ ಮುಕ್ಕುಂದನ ನೊಲಿಸಿದ 3
ಮೇದಿನಿಯೊಳು ಜನಿಸಿ ಮೋದಮುನಿಯೆನಿಸಿ
ಭೇದಮತವ ಸ್ಥಾಪಿಸಿ
ವಾದಿಗಳನು ನಿರ್ವಾದಗೈಸುತಲಿ
ಸಾಧು ಜನಕೆ ಬಲು ಮೋದವಗರೆದ 4
ಪುರಮರ್ದನಾದಿ ಸುರವರ ನಿರುತ ಸೇವಿಪರ
ದುರಿತ ತಿಮಿರ ಭಾಸ್ಕರ
ಶರಣು ಜನಕೆ ಸುರತರುವೆಂದೆನಿಸಿದ
ಸಿರಿ ಕಾರ್ಪರ ನರಹರಿ ಗತಿಪ್ರೀಯ 5
****
No comments:
Post a Comment