ಕೊಡುವೆ ತಾಂಬೂಲವ ಪಿಡಿಯೊ ಪಿಡಿಯೊ ದೇವಾ
ಅಡಿಗಳಿಗೆರಗುವೆನಾ ಪ
ಕಡುಹರುಷದಿ ವಿಪ್ರ ಮಡದಿಯರನ್ನವ
ಕೊಡಲು ಭುಂಜಿಸಿದ ಪಾಲ್ಗಡÀಲ ಶಯನ ಕೃಷ್ಣ ಅ.ಪ
ಮಡದಿಯ ನುಡಿಕೇಳಿ ಕಡುಭಕುತಿಯಲವ
ಪಿಡಿಯವಲಕ್ಕಿಯನು ಕೊಡಲು ಭುಂಜಿಸಿಮಿತ್ರ
ಬಡವ ಸುದಾಮನಿಗೆ ಕೆಡದ ಸಂಪದವನ್ನು
ಗಡನೆ ನೀಡಿದ ದೇವಾ1
ಕುಬ್ಜೆಗಂಧಕೆ ಒಲಿದು ಕಬರಿಯ ಪಿಡಿದೆತ್ತಿ
ಸುಭಗರೂಪಳ ಮಾಡಿದ ಅಬ್ಜನಾಭನೆ ತ್ವತ್ಪಾ-
ದಬ್ಜಕರ್ಪಿಸಿದಂಥ ಶಬರಿಯ ಫಲಮೆದ್ದ
ಪ್ರಭು ಶ್ರೀರಾಮನೆ ನಿನಗೆ 2
ಲಲನೆ ದ್ರೌಪದಾದೇವಿ ಗೊಲಿದಕ್ಷಯಾಂಬರ-
ಗಳನೆ ಪಾಲಿಸಿಪೊರೆದ ಬಲುವಿಧ ಭಕುತರ
ಬಳಗವ ಸಲಹಲು ಇಳೆಯೊಳು ಕಾರ್ಪರ
ನಿಲಯ ಶ್ರೀ ನರಹರಿಯೇ3
****
No comments:
Post a Comment