..
kruti by Nidaguruki Jeevubai
ಯದುಕುವರನು ಹರಿ ಮದನ ಮೋಹನ ಕೃಷ್ಣ
ಉದಧಿ ಶಯನ ಹರಿ ಮಾಧವನ ಪ
ಮದಗಜಗಮನೆ ಶ್ರೀ ಪದುಮಲೋಚನೆ ಪ್ರಿಯ
ಅದ್ಭುತ ಮಹಿಮ ಶ್ರೀ ಅಚ್ಚುತನ ಅ.ಪ
ಇಂದಿರೆ ರಮಣ ಗೋವಿಂದನ ಮಹಿಮೆಯ
ಒಂದೆ ಮನದಿ ಸ್ತುತಿಸುವ ಜನರ
ಕುಂದೆಣಿಸದೆ ಮುಚುಕುಂದ ವರದ
ಹೃನ್ಮಂದಿರದಲಿ ನಲಿದಾಡುವನು 1
ಗೋಕುಲಪತಿ ಜಗದ್ವ್ಯಾಪಕ ಹರಿ ಎಂದ-
ನೇಕ ವಿಧದಿ ಸ್ತುತಿಸುವ ಜನರ
ಶೋಕಗಳಳಿದು ಏಕಾಂತ ಭಕ್ತರೊಳಿಟ್ಟು
ತೋಕನಂದದಿ ಪರಿಪಾಲಿಸುವ 2
ಪದ್ಮನಾಭನ ಪಾದಪದ್ಮವ ಸ್ಮರಿಸುತ
ಶುದ್ಧಮನದಿ ಪಾಡಿ ಪೊಗಳುವರಾ
ಸಿದ್ಧಾರ್ಥನಾಮ ವತ್ಸರದಲಿ ಸುಜನರ
ಹೃದ್ರೋಗವಳಿಯುತ ಸಲಹುವನೂ 3
ಚಿಂತೆ ಎಲ್ಲವ ಬಿಟ್ಟೀ ವತ್ಸರದಲಿ ಲಕ್ಷ್ಮೀ-
ಕಾಂತನನೇಕ ವಿಧದಿ ಸ್ಮರಿಸೆ
ದಂತಿವರದ ಅನಂತ ಮಹಿಮ ತನ್ನ
ಕಾಂತೆ ಸಹಿತ ಒಲಯುವನವರ್ಗೆ4
ಕಮಲಸಂಭವಪಿತ ನಮಿಸಿ ಸ್ತುತಿಸುವೆನು
ಕಮಲ ಪತ್ರಾಕ್ಷಹರಿ ಕರುಣಾನಿಧೆ
ಕಮಲನಾಭ ವಿಠ್ಠಲ ವಿಠ್ಠಲ ರಕ್ಷಿಸೆನೆ ಹೃ-
ತ್ಕಮಲದಿ ಪೊಳೆಯುವ ಸುಜನರಿಗೆ5
***
No comments:
Post a Comment