ಏನು ಪೇಳಲಿ ಗೋಪಿ ಇಂಥಾ ಬುದ್ಧಿಯ
ನೋಡಮ್ಮಾ ಗೋಪೆಮ್ಮಾ ಪ.
ಗಡಿಗೆಯ ಒಡೆದಾನು
ಕೊಡಹಾಲು ಕುಡಿದಾನು
ಹುಡುಗರ ಬಡಿದು ಓಡಿ ಪೋದಾನು
ನಿಮ್ಮ ಹುಡುಗಾ ಸಿಕ್ಕಿದ ಮೇಲೆ
ಭಿಡಿಯಾವಿಲ್ಲದೆ ಗಿಡದಾ
ನೆರಳಿಗೆ ಕಟ್ಟುವೆನು ಬೆನ್ನಟ್ಟುವೆನು 1
ನೆಲವಿನಲ್ಲಿದ್ದ ಪಾಲುಮೊಸರು
ಬೆಣ್ಣೆ ಕದ್ದಾನು ಬಾಲಕರೊದ್ದನು
ಮುದ್ದು ಹೆಣ್ಣು ಬಾಲೆಯರಿಗೆ
ಕಣ್ಣುಸನ್ನೆ ಮಾಡಲಿ ಬಂದಾನು
ಭಂಡು ಮಾಡಿದಾನು ದುಂಡ ಕುಚವ
ಕರದಿ ಪಿಡಿದಾ ಓಡಿ ಪೋದಾ 2
ಹೆಡೆಯ ಸರ್ಪಾವ ಕರದೊಳು ಹಿಡಿದು
ಸಂಜೀಯ ಹೊತ್ತಿಲಿ ತಂದಾನು
ನಮ್ಮನ್ನಂಜಿಸಲು ಬಂದಾನು
ನಾಗಕನ್ನಿಕೆಯರಿಂದ ಸ್ತೋತ್ರ
ಮಾಡಿಸಿಕೊಂಡಾನು ಕಾಲಿಮರ್ಧನಕೃಷ್ಣಾನು 3
****
No comments:
Post a Comment