..
ಸರ್ವೇಶ ಸುಲಭತಮ ಶೌರಿ ನೀನು
ಸರ್ವ ಶ್ರುತಿ ಪಾದ್ಯ ಸರ್ವಾತ್ಮ ಶುಕ ಬಿಂಬ ಪ
ನಿತ್ಯ ವಸ್ತುವು ನೀನು ನಿತ್ಯರಲಿ ನೀ ನಿತ್ಯ
ನಿತ್ಯಸುಖ ಪರಿಪೂರ್ಣ ಸತ್ಯ ಕೃತ್ಯ
ಭೃತ್ಯಪಾಲಕರಲ್ಲಿ ಸಮರಿಲ್ಲ ನಿನಗಿನ್ನು
ಭಕ್ತವತ್ಸಲ ಎನ್ನ ಯುಕ್ತಿಯಲಿ ಕೈಪಿಡಿಯೊ 1
ಕರ್ಮದಾಧೀನದಲಿ ಅಹಂಮಮ ಕರ ಪೊಂದಿ
ದುಮ್ಮನವ ಬೆಳೆಸಿದೆನೊ ಅವಶನಾಗಿ
ನಿರ್ಮಮರದೇವ | ತ್ವದಾಸ್ಯ ಪಾಲಿಸು ಎನಗೆ
ಕರ್ಮನಾಮಕ ನೀನೆ ಸದ್ಧರ್ಮಕಾರಕನೆ 2
ಎನ್ನಲ್ಲಿ ನಿನ್ನ ಕ್ರಿಯ ಅನುಭವದಿ ತಿಳಿಸೆನಗೆ
ಅನ್ಯುಪಾಯವು ಇಲ್ಲ ಅಭಯಪದಕೆ
ಪೂರ್ಣಪ್ರಜ್ಞರ ಗುರುವೆ ಜಯೇಶವಿಠಲ
ಎನ್ನ ಮನ ಒಡಲಲ್ಲಿ ನಿನ್ನ ಮೂರ್ತಿಯ ತೋರೊ 3
***
No comments:
Post a Comment