ಆರುತಿ ಮಾಡಿದೆವೆ ನಾರಿಯಮಣಿಯರು ಪ
ಆರುತಿ ಮಾಳ್ಪೆವು ಚಾರು ಪುಸ್ತಕದಿಭೂರಿ ಶೋಭಿಪ ಪರಾಶರ ತನುಜಗೆ ಅ.ಪ.
ಚಿತ್ರ ಮಂಟಪದೊಳು ಮುತ್ತಿನಂದದಿ ಕೂತುಭಕ್ತ ಪೂಜಿತನಾಗಿ ಭಾಗ್ಯವ ತತ್ವ ಪೇಳಿದವಗೆ 1
ಹರಿಯೇ ಸರ್ವೋತ್ತಮ ನರರು ತದ್ಧಾಸರುಹಿಂಗರುಹಿ ಶಾಸ್ತ್ರವ ಅಖಿಳ ದುರ್ವಾದಿ ವಿಜಯಗೆ2
ಭಾರತ ಮುಖ ಬಹುಸಾರ ಶಾಸ್ತ್ರವ ಮಾಡಿಧಾರುಣಿಯೊಳು ಮುಕ್ತಿದಾರಿ ತೋರಿದವಗೆ 3
ನಾರದ ಶುಕಪೈ ಸೇರಿ ವೈಶಂಪಾಯನದ್ವಾರಪಾಲಕರಿಂದ ನಿರುತ ಪೂಜಿತಗೆ 4
ವಾಸವೀ ತನುಜಾ ವ್ಯಾಸನ ಸ್ತುತಿಸಿದಾಭಾಷಿ ಭಾಷಿಗೆ ಇಂದಿರೇಶ ಪಾಲಿಸುವನು 5
****
No comments:
Post a Comment