Wednesday, 1 September 2021

ಯಾಕೆ ಮೈಮರೆದೆ ನೀನು ankita hayavadana

 ..

ಯಾಕೆ ಮೈಮರೆದೆ ನೀನು ಪ.


ಯಾಕೆ ಮೈಮರೆದೆ ಶ್ರೀ ಹಯವದನನ ಪಾದವನುಬೇಕೆಂದು ಬಿಡದೆ ಭಜಿಸೊ ನಿನ್ನಕಾಕು ವ್ಯಸನಗಳ ತ್ಯಜಿಸೊ ಈ ದೇಹತಾ ಕಂಡ ಕನಸೋ ಸ್ಥಿರವಲ್ಲ ಇನ್ನುನೀ ಕೇಳದಿರೆ ನಿನ್ನ ಮನಸೋ ಪ್ರಾಣಿ ಅ.ಪ.


ಪರಹೆಣ್ಣುಗಳ ನೋಡಿ ಪಾತಕಿಗಳ ನೀಡಾಡಿಹರಿದೆದ್ದು ಕಡೆಗೆ ಕರೆವೆ ಎಲೆಮರುಳೆ ಹರುಷದಿಂದವಳ ನೆರೆವೆ ಅಕಟಕಟದುರುಳ ಜೀವನೆ ನಿನಗೆ ತರವೆ ಮತ್ತೊ-ಬ್ಬರಿಗೆ ಬರಿದೆ ನೀ ಹೇಳುವೆಲ್ಲೊ ಶಾಸ್ತ್ರಗಳನೊರದೊರದು ಕೇಳ್ವೆಯಲ್ಲೊ ನೀ ಹೋಗಿನರಕದೊಳು ಬೀಳ್ವೆಯಲ್ಲೊ ಪ್ರಾಣಿ 1


ಧನವ ಕೂಡಿಸಿಕೊಂಡು ದಾನ ಧರ್ಮವ ಮಾಡ-ದೆನಗಾರು ಸಾಟಿಯೆಂಬೆ ಇಷ್ಟಜನರ ಬಿಟ್ಟೊಬ್ಬನುಂಬೆ ಎಲೊ ಎಲೊಮುನಿದು ಸಕಲರ ಮುನಿಯಗೊಂಬೆ ಆಧನವು ಮನಶುದ್ಧವಾಗಿ ಇಹುದೆ ಅದು ಸಾವದಿನದೆ ಸಂಗಡ ಬಾಹುದೆ ಕುಬೇರನಬಿಟ್ಟು ಕಡೆಗೆ ಹೋಹುದೆ ಪ್ರಾಣಿ 2


ಅಳೆವ ಕೊಳಗದ ಮಾಟ ಆತ್ಮನಿನ್ನೋಡಾಟ ಸರ-ಕಳೆದ ಬಳಿಕ ನೋಡೊ ದೇಹ ತಾ-ನುಳಿಯದು ಹಮ್ಮು ಮಾಣೊ ಎಲೆ ಮರುಳೆಗಳಿಸಿರೋ ಧರ್ಮಗಳ ವ್ಯರ್ಥ ಕೆಡಬ್ಯಾಡೊ ದಿನಮಾನಗಳ ಕಳೆಯದಿರು ನಿತ್ಯವಲ್ಲ ಇದಕೆಉಳಿದರ್ಥ ಕೆಲಸಕಿಲ್ಲ ಹಿಂದೆಉಳಿದವರೊಬ್ಬರಿಲ್ಲ ಪ್ರಾಣಿ 3


ಕೊಲೆ ದೋಷವೆಂದರಿಯೆ ಕೊಸರು ಒಬ್ಬನ ಜರೆವೆಇಳೆಯೊಳದಾವನೀತ ನಿನಗೆ ನೀತಿಳಿದುಕೊ ನಿನ್ನಮಾತ ನೀಖಿಲಗೊಳಬೇಡ ಆಭಾಸ ಸೂಚಿಸಿ ಜರೆವರೆಕೊಲೆಗೆ ಗುರಿಯಾದೆ ಕಾಣೊ ಈ ಕೋಪಹೊಲೆಗೆ ಸರಿಯಲ್ಲವೇನೊ ನಿನ್ನಹುಳುಕು ಬುದ್ಧಿಯನು ಮಾಣೊ ಪ್ರಾಣಿ 4


ಮರೆದು ಕಳೆ ಕ್ರೋಧವನು ಮಾಡದಿರು ಲೋಭವನುಗುರುಹಿರಿಯರಾದವರಿಗೆರಗೂ ಅನಾ-ಥರಿಗೆ ಚೆನ್ನಾಗಿ ಮರುಗೊ ಇದೆಪರಮಗತಿಯ ಸೆರಗೊ ಭಕ್ತರಿಗೆಸಿರಿಯರಸ ಹಯವದನನೊಡೆಯ ಲೋಕಪರನಿಂದಕರಿಂಮುಕ್ತಿಪಡೆಯೊ ಭಜಿಸಿದುರಿತ ಸಂಕಲೆಯ ಕಡಿಯೊ ಪ್ರಾಣಿ 5

***


No comments:

Post a Comment