ಆರತಿ ಬೆಳಗೋಣ ಬಾರೆ ಶ್ರೀ ಹರಿಗೆ
ಪಲ್ಲವಿ
ಆರತಿ ಬೆಳಗೋಣ ಬಾರೆ ಶ್ರೀ ಹರಿಗೆ
ಆರತಿ ಬೆಳಗೋಣ ವಾರಿಜನಾಭಗೆ
ಅನುಪಲ್ಲವಿ
ನಾರಿಯರೆಲ್ಲರು ತೀವ್ರದಿಂದಲೇ
ಮುತ್ತಿನಾರತಿ ಬೆಳಗೋಣ ಬಾರೆ ಶ್ರೀ ಹರಿಗೆ
ಚರಣ ೧
ಮತ್ಸ್ಯ ಕೂರ್ಮನಿಗೆ ಸ್ವಚ್ಛ ವರಾಹನಿಗೆ
ವತ್ಸ ಪ್ರಹ್ಲಾದನ ಸಲಹಿದ ನರಹರಿಗೆ
ಚರಣ ೨
ಪುಟ್ಟ ವಾಮನನಿಗೆ ದಿಟ್ಟ ಭಾರ್ಗವನಿಗೆ
ಮೆಟ್ಟಿ ಶಿಲೆಯನುದ್ಧರಿಸಿದ ಶ್ರೀ ರಾಮಚಂದ್ರಗೆ
ಚರಣ ೩
ಉದ್ಧವಗೊಳಿದಂಥ ಮುದ್ದು ಶ್ರೀ ಕೃಷ್ಣನಿಗೆ
ಬೌದ್ಧಾವತಾರ ಕಲ್ಕಿ ಮುದ್ದು ಹಯವದನನಿಗೆ
***
pallavi
Arati beLagONa bAre shrI harige Arati beLagONa vArijanAbhage
anupallavi
nAriyarellaru tIvradindalE muttinArati beLagONa bAre shrI harige
caraNam 1
matsya kUrmanige svacca varahanige vatsa prahlAdana salahida naraharige
caraNam 2
puTTa vAmananige diTTa bhArgavanige meTTi shileyanuddharisida shrI rAmacandrage
caraNam 3
uddhavagolidantha muddu shrI kruSNanige bauddhAvatAra kalki muddu hayavadananige
***
No comments:
Post a Comment