Friday 6 August 2021

ನಿನ್ಹೊರತು ಇನ್ನಿಲ್ಲ ಹನುಮಾ ಜಯ ಭೀಮಾ ಗುರುಮಧ್ವರಾಯಾ ankita hasanmukha vittala

 ..

kruti by hasanmukha vittalaru


ನಿನ್ಹೊರತು ಇನ್ನಿಲ್ಲ ಹನುಮಾ

ಜಯ ಭೀಮಾ ಗುರುಮಧ್ವರಾಯಾ ಪ


ಅನ್ನವಸ್ತ್ರವ ಕೊಟ್ಟು ಅನ್ಯರಿಗೆ ಬೇಡಿಸದೆ

ಅನುಗಾಲವೂ ಕಾಯೋ ಅನುಪಮ ಚಿಂತನ 1


ಬಂದ ಬಂದ ಕಂಟಕವನ್ನು ಬಂದು ಬಂದೂ ಬಯಲು ಮಾಡಿ

ಎಂದೆಂದಿಗೂ ಕಾಯೋ ಸುಂದರ ಮೂರುತಿಯೇ 2


ಕದರೂರು ಹನುಮೇಶ ಹಸನ್ಮುಖವಿಠಲನ

ಮುದದಿಂದಲಿ ಒಲಿಸಿದ ಚದುರ ಮೂರುತಿಯೆ 3

***


No comments:

Post a Comment