ಕಾಖಂಡಕಿ ಶ್ರೀ ಕೃಷ್ಣದಾಸರು
ಕೇಳು ಒಳ್ಳೆವರ ಕೂಡಾ ನಿನ್ನ ಹಿತವ ಪ್ರಾಣೀ | ತಾಳಿ ನರದೇಹದಿಂದ ಮಾಡುವರೇ ಹಾನಿ ಪ
ಮುತ್ತಿನಂಥಾ ದಿನವಿದು | ಸಿಕ್ಕದಣ್ಣಾ ಮುಂದ | ಚಿತ್ತ ಸ್ಥಿರವಾ ಮಾಡಿ ಹರಿಯ ನೆನೆಯಬೇಕು ಇಂದ 1
ಬಾಲನಾಗಿ ಕೆಲವು | ದಿನದಿಂದ ಯೌವನದಿ | ಮ್ಯಾಲ ಯೆಚ್ಚರವ ಬಿಟ್ಟು | ಹರಿಗೆ ವಿಮುಖನಾದಿ 2
ಜರೆಯು ಬಂದ ಕಾಲದಲ್ಲಿ | ತನುವು ತನ್ನದಲ್ಲಾ | ಸರಕು ಮನೆಯೊಳಿಲ್ಲಾ 3
ಈಗಳವೆ ಯಚ್ಚರಿತು | ಹರಿಯಾ ಬಲಗೊಂಡು | ಹಿಂಡು 4
ಶರಣು ಹೋಗುವಾ | ಭಾವಭಕ್ತಿಯಲ್ಲಿ ದಾವಪ್ರೇಮಿ | ತಾರಿಸುವಾ ಗುರು ಮಹಿಪತಿಸುತ ಸ್ವಾಮಿ 5
***
No comments:
Post a Comment