Wednesday, 1 September 2021

ಬೇಟೆಯ ನಾಡಿದನೇ ಶ್ರೀ ಗುರು ಬೇಟೆಯ ನಾಡಿದನೇ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಬೇಟೆಯ ನಾಡಿದನೇ | ಶ್ರೀ ಗುರು | ಬೇಟೆಯ ನಾಡಿದನೇ | ಭವದ ಮ | ಮಹಾಟವಿಯೊಳಗಿದ್ದ ಮನವೆಂಬ ಮೃಗದಾ ಪ 


ಬೋಧ ಕೊಳಲವ | ಸ್ವಾನಂದದಲಿ ಸುಸ್ವರದಲಿ | ತಾನೂದಿ ನಾದವ ಕಿವಿಯೊಳೂಡಿಸಿ ಸು | ಮ್ಮಾನದೀ ನಿಲುವಂತೆ ಮರುಳು ಮಾಡಿದ ಗುರು 1 

ಪರಿ ಸಾಧನದಿಂದಲಿ ನವವಿಧ | ಪರಿಯಾದ ಭಕ್ತಿಯ ಪಾಶವನು | ಕೊರಳಿಗೆ ಸಂದಿಸಿ ದೃಢದಿಂದ ಪುನರಪಿ | ಹರಿದಾಡದಂದದಿ ನೆಲೆಗೊಳಿಸಿ ಗುರು 2 

ಭಯದಿಂದ ಬೆದರಿ ಭಜ್ಜರಿಕೆಯ ಹಿಡಿದಿರೆ | ಶ್ರಯ ಸುಖದಾಯಕ ನಿಜ ಕರದೀ | ದಯದಿಂದ ಅಭಯವನಿತ್ತು ಬೋಳೈಸಿ ನಿ| ರ್ಭಯ ಮಾಡಿ ಭ್ರಾಂತಿಯ ಚಿಂತಿ ಹರಿಸಿ ಗುರು3 

ಸವಿ ಸವಿ ನಾಮಾಮೃತ ಆಹಾರವನಿಕ್ಕಿ | ಜವದಿಂದ ಹೃದಯ ಭೂ ವನದೊಳಗೆ | ತವಕದಿ ವಿಶ್ರಾಂತಿ ಸ್ಥಳದಲಿ ನಿಲ್ಲಿಸಿ | ಅವನಿಲಿ ಸತ್ವ ಚರನ ಬಳಿಯಲ್ಲಿಟ್ಟು ಗುರು4 

ಜನವನ ವಿಜನದೊಳಗ ತಾನೇ ತಾನಾಗಿ | ಅನುಮಾನ ಕಳೆಸಿದಾ ಅಂಜುವನಾ | ಅನುದಿನ ಸುಖದೊಳಿಪ್ಪಂತೆ ಮಾಡಿ | ದನು ನಂದನ ನಿಜ ಸಹಕಾರಿ ಮಹಿಪತಿ ಘನಗುರು5

***


No comments:

Post a Comment