Wednesday, 1 September 2021

ಶ್ರೀಲತಾಂಗಿಯ ವಲ್ಲಭಾ ಎನ್ನ ಪಾಲಿಸೋ ಭಕ್ತರ ಸುಲಭಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಶ್ರೀ ಲತಾಂಗಿಯ ವಲ್ಲಭಾ|ಎನ್ನ| ಪಾಲಿಸೋ ಭಕ್ತರ ಸುಲಭಾ ಪ 


ಇಂದೀವರದಳ ನಯನಾ ಮು| ಕುಂದ ಉರಗರಾಜ ಶಯನಾ| ಮಂದರೋದ್ಧರ ಪಾಪ ಶಮನಾ|ಗೋ| ವಿಂದ ಖಗೇಶ್ವರ ಗಮನಾ 1 

ಶರಣ ಜನರಾಭರಣಾ|ಮುರ| ಹರ ಜಗದೀಶನೇ ಕರುಣಾ| ಪರಮಾನಂದ ಜೀತ-ದೂಷಣಾ|ಮ| ಕರಕುಂಡಲ ಸುಭೂಷಣಾ 2 

ಸರಸಿಜ ಭವನುತ ಸ್ವಾಮಿನ್ನಾ|ಶ್ರೀ| ಹರಿ ಪೂರಿತ ಮನೋಕಾಮನ| ಶರಧಿ ಕೀಲನಾ|ಗುರು| ವರ ಮಹಿಪತಿ ಸುತ ಪಾಲನಾ 3

***


No comments:

Post a Comment