ಕಾಖಂಡಕಿ ಶ್ರೀ ಕೃಷ್ಣದಾಸರು
ನಂದಕಂದನ ನೋಡಿರೇ| ಅಂದದಿ ಛಂದದಿ ಪಾಡಿರೇ ಪ
ದುಡುದುಡುಕೆಂದು ಕಡೆಯಲು ಗೋಪಿ| ಒಡನೊಡನಾಲಿಸಿ ಶಬ್ದವಾ|| ದುಡುದುಡು ಬಂದ ಕಡಗೋಲ ಪಿಡಿದು ಬಿಡದೆವೆ ಬೆಣ್ಣೆಯ ಬೇಡುವಾ1
ಅಂದುಗೆ ಗೆಜ್ಜೆಗಳಾ| ಘಿಲು ಘಿಲುಕೆಂದು ನುಡಿಸುವಾ| ಎಳೆಯಳೆಗೆಳೆರ ಮೇಳದಲಾಡಿ| ನಲಿನಲಿದಾಡುತಲೊಪ್ಪುವಾ 2
ಅಚ್ಚರಿ ಬಗೆಯಲಿ ಗುರುಮಹಿಪತಿ ಪ್ರಭು ಸಚ್ಚರಿತಾಮೃತ ಬೀರುವಾ|| ಪಟ್ಟದ ಬೊಂಬೆಯ ನಿಚ್ಚಳ ಭಾಸುವ| ಅಚ್ಯುತನಾಕೃತಿ ದೋರುವಾ 3
***
No comments:
Post a Comment