ಕಾಖಂಡಕಿ ಶ್ರೀ ಕೃಷ್ಣದಾಸರು
ಕೇಳೆಲೋ ಪ್ರಾಣಿ ನಂಬಿ ಪೂಜಿಸು ಹರಿಯ ಪಾದಾ | ಪಾಲಿಸುವಾ ಗರದು ಅನುಭವ ಬೋಧಾ ಪ
ಗುರುವಿನಾ ಬಲಗೊಂಡು ಬಲಿಯೋ ಸ್ವಸುಖ ಪಡಕೋ | ಹರಿಯದೇ ನಾನಾ ಮಾರ್ಗವ ಕಂಡು 1
ಕಂಡ ದೈವಕ ಹಲ್ಲಾ ದೆರೆದು ಬಾಗುವದಲ್ಲಾ | ಮಂಡೆ ದಡವಲ್ಲದೇ ಮತ್ತೇನಿಲ್ಲಾ 2
ಇರಲು ಮನಿಲಿ ಧರಿಲುಳ್ಳಾ ಬಯಸಿದವಟಗಳೆಲ್ಲಾ | ತಿರುಕವ ಬೇಡಿ ಉಂಬುದು ಸಲ್ಲಾ 3
ನೀರಡಿಸಿ ಬರಿಗೈಯ್ಯಾ ನೆಕ್ಕಿದರೇನು ಶ್ರಯಾ | ಗುರುವಿನ ಕೇಳು ಸ್ವಹಿತೋಪಾಯ 4
ಹತ್ತು ಕಟ್ಟುವಕಿಂತ ಮುತ್ತು ಕಟ್ಟಬೇಕೆಂದೇ | ಅರ್ತರೊಲುವನು ಮಹಿಪತಿಸುತಂದೇ 5
***
No comments:
Post a Comment