RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ಕರೆತಾರೆ ನೀ ಮನದಾ ಮೋಹನನಾ ಸುಜ್ಞಾನೇ ಪ
ಸ್ಮರನ ಬಾಣಕ ಶಿಲ್ಕಿ ಬಲಿಯೊಳಗಾದೆ | ಹರಿಯಾ ನಗಲಿ ಅಸುವಿಡಿಯೇ ನಿನ್ನಾಣೆ 1
ಮರುಳು ಮಾನಿನಿಯಳ ಮಾನ್ಯಳ ಮಾಡೀ | ಕೊರತೆ ನೋಡುವದಿನ್ನು ಉಚಿತವೇ ಜಾಣೆ 2
ಗುರುವರ ಮಹಿಪತಿ ನಂದನ ಸ್ವಾಮಿ | ಕರುಣಾ ಸಾಗರನೆಂಬಾ ಬಿರುದ ಕಿದೇನೆ 3
***
No comments:
Post a Comment