Wednesday, 1 September 2021

ಇಂದಿಗೆ ಇರುತಿಹ ಮಂದನ ಶ್ರಮ ಬಹು ಬಂಧನ ಬಿಡಿಸೊ ಗೋವಿಂದ ಎನ್ನನು ಕಾಯೊ ಮುಕುಂದ ankita gurujagannatha vittala

 ..

ಇಂದಿಗೆ ಇರುತಿಹ ಮಂದನ ಶ್ರಮ ಬಹು ಬಂಧನ ಬಿಡಿಸೊ ಗೋವಿಂದ ಎನ್ನನು ಕಾಯೊ ಮುಕುಂದ ಪ 


ಹಿಂದಿನ ಕಾಲದೊಳಾದ ಪ್ರತೀಕಾರ ದಿಂದ ಬಾಧಿಪನಿವನೆನ್ನ ಕಾಯ ಬೇಕೈಯ್ಯಾ ನೀ ಎನ್ನ 1 


ನಿಂದ್ರಾದೆ ಗ್ರಾಮದಿ ಪೊಂದಾದೆ ಜನರನ್ನು ಕುಂದುತ ಬಂದೆನಾರಣ್ಯ ವಾಸವಮಾಡುತ ಇನ್ನಾ 2 


ಇಂದಿರಪತಿಪಾದದ್ವಂದ್ವವು ಮನ್ಮನ ಮಂದಿರದಲಿ ತೋರಿನ್ನಾ ಐದುವೆ ನಿಜಸುಖವನ್ನಾ 3 


ಪೊಂದಿಸು ನಿನ್ನಯ ವಂದಿಸುವಾ ಜನ ಸಂದಣಿಯೊಳು ಮುಂದೆನ್ನಾ ಐದುವೆ ನಾ ನಿನ್ನಾ 4 


ಇಷ್ಟುಶ್ರಮವ ನಾ ತಪ್ಟಿಸಿ ಪೇಳಿದೆ ಧಿಟ್ಟಗುರುಜಗನ್ನಾಥಾ ವಿಠ್ಠಲ ನಿಜಜನಪ್ರೀತಾ 5

***


No comments:

Post a Comment