by gopalaryaru
ವೃತ್ತ||
ಏಳಾ ಯತೀಂದ್ರ ಯೋಗಶಯನ ಸ್ಥಿತಿುಂ ಭಜಕಾಳಿಯಮ್ಮಹಾಶೀಲದಿ ಪಾಲಿಸಲ್ ಪರಿಕರಾರುಣ ತೋರಿದನಿಲ್ಲಿ ಚಿತ್ತದೊಳ್ಮೇಳದಿ ಬೋಧ ಭಾನು ಬರುತೈದನೆ ನಾದ ವಿನೋದವೆಂಬ ಈಕೋಳಿಯು ಕೂಗುತೈತವರನೀಕ್ಷಿಸೆ ಸತ್ಕರುಣಾ ಕಟಾಕ್ಷದಿಂಏಳಯ್ಯ ಗುರುವರ್ಯ ಏಳಯ್ಯ ಗುರುವರ್ಯ ಯತಿಜನಾಲಂಕಾರಪಏಳು ಭಕ್ತಾಧಾರ ಯಮನಿಯಮ ಸಂಚಾರಏಳು ವಿದ್ವದ್ವರ್ಯ ಪರಮಹಂಸಾಚಾರ್ಯ ಏಳು ಗೋಪಾಲ ಯತಿವರ್ಯಾ ಸ್ವಾಮಿಅ.ಪಆಧಾರ ಮಣಿಪೂರ ಹೃದಯ ಕಮಲಗಳಲ್ಲಿನಾದ ಬಿಂದು ಕಲೆಗಳೆಂಬರುಣನುದುಸಿದಬೋಧೆಯೆಂಬರ್ಕನಾವಿರ್ಭವಿಸಿದನು ಸಹಸ್ರಾರ ಕಮಲದ ತುದಿಯಲಿವೇದವೇದ್ಯಾನಂತಮಹಿಮ ಚಿನ್ಮಯರೂಪನಾದಸೌಖ್ಯಾಕಾರ ಕಲಿ ಕಲ್ಮಷವಿದೂರಆದಿಮಧ್ಯಾಂತರಹಿತಾನಂದ ನಿತ್ಯನಿಜಬೋಧನೊಲಿದುಪ್ಪವಡಿಸಾ ಸ್ವಾಮೀ1
ನಿತ್ಯವೆ ನಿಮ್ಮ ಪದವೆಂದಜಾಂಡವನಿದನನಿತ್ಯವೆಂದಖಿಳ ವಿಷಯಗಳಲಿ ವಿರತರಾಗಿಅತ್ಯಂತ ಶಮ ದಮಾದಿಗಳೆಂಬ ಸಾಧನದಿ ಮುಕ್ತಿ ಸುಖವನು ಬಯಸುತಾಪ್ರತ್ಯಕ್ಷರ ಬ್ರಹ್ಮರೈಕ್ಯವರಿಯದೆ ವಿದುಗಳತ್ಯಂತ ತ್ವರೆುಂದ ನಿಮ್ಮ ಮುಖಕಮಲದಿಂತತ್ವಮಸಿ ವಾಕ್ಯದರ್ಥವ ತಿಳಿಯಬೇಕೆಂದು ನೃತ್ಯವನು ಮಾಡುತಿಹರೂ ಸ್ವಾಮಿ 2
ದೇಹೇಂದ್ರಿಯಾಂತರಂಗವನೇತಿಗಳಿದು ಸಂದೇಹದಲಿ ಕೂಟಸ್ಥ ನೀನೆಂಬುದರಿಯದೆಮಹಾ ವಿಚಾರಿಸಿ ಭಕ್ತ ಸುಲಭನೆ ದಾಟಿಸೈ ಮೋಹಸಾಗರವನೆನುತಾಪಾಹಿ ನೊಂದೆವು ಸಂಸ್ಕøತಿಯ ಬಂಧದಲಿ ನಮ್ಮಬೇಹುದೈಪಾಲಿಸಲು ಯೋಗನಿದ್ರೆಯ ಬಿಟ್ಟುದಾಹರಿಸು ವೇದಾಂತಗೋಪ್ಯವನೆನುತ ನತಸಮೂಹ ಕಾದಿದೆ ಕೃಪಾಳು ಸ್ವಾಮಿ 3
ಕೇಳಿ ಭಕುತರ ದೈನ್ಯ ಸಲ್ಲಾಪಗಳನಿಂತುಲೀಲಾವತಾರ ಗುರುರಾಯನೊಲಿದೆದ್ದವರಲಾಲಿಸುತ ಧನ್ಯರಾದಿರಿ ಸನ್ಮತಿಯೊಳಿಂತು ಮೇಳಾಪವಾುತೆನುತಾಬಾಲರಿರ ನಿಮ್ಮನಂತಃಕರಣದ ಧ್ಯಾನಜಾಲಸುತ್ತಿರಲಾಗಿ ನಿಮ್ಮ ನಿಜವನು ಮರೆದುಕಾಲಕರ್ಮಾಧೀನವಾಗಿ ನೊಂದಿರಸತ್ಯವೀ ಲೋಕವೆಂದರಿಯದೆ ಎನಲು ಗುರುವೇ 4
ಜೀವೇಶ್ವರರ ವಾಚ್ಯ ಲಕ್ಷ್ಯಾರ್ಥವನು ನಿಚ್ಚ ಭಾವಿಸುತ ಬ್ರಹ್ಮ ಕೂಟಸ್ಥರೆಂದವರಿಗೆ ಸ್ವಭಾವದಿಂ ಭೇದವಿಲ್ಲೌಪಾಧಿಕವಿದೆಂದು ಸಾವಧಾನದಲಿ ತಿಳಿದೂನಾವೆ ಪರಿಪೂರ್ಣಾತ್ಮರೆಂದು ಬೋಧಾಮೃತವಸೇವಿಸಿದಡನುದಿನಂ ಕೃತಕೃತ್ಯರಹಿರೆನಲ್ದೇವ ಕೃತಕೃತ್ಯರಾದೆವು ನಮೋ ಎನುತ ಸ್ವಭಾವ ಪದದಲಿನಿಂದರೂ ಸ್ವಾಮೀ 5
***
No comments:
Post a Comment