Wednesday, 1 September 2021

ಸರಸಿಜನಯನಗೆ ಸಾಗರಶಯನಗೆ ನಿರುತ ಸುಖಾನಂದಭರಿತನಾದವಗೆ ankita bheemesha krishna

 ..

ಸರಸಿಜನಯನಗೆ ಸಾಗರಶಯನಗೆ

ನಿರುತ ಸುಖಾನಂದಭರಿತನಾದವಗೆ

ಬರೆಸಿ ಉತ್ತರವ ಕಳುಹಿ ಹರುಷದಿ ತಂದ ಸತಿಯ-

ರರಸಿ ರುಕ್ಮಿಣಿ ಸಹಿತ

ಹರುಷದಿ ಕುಳಿತ ಹರಿಗೆ

ಸರಸದಾರತಿಯ ಬೆಳಗಿರೆ ಪ


ನಿಂದ್ಯ ಪರಿಹರಿಸಲು ಬಂದು ಯುದ್ಧವ ಮಾಡಿ

ಸಿಂಧುಗಟ್ಟಿದ ರಾಮಚಂದ್ರಗ್ವೊಂದಿಸುತ

ತಂದು ಮಗಳ ಧಾರೆ ಮಂದರೋದ್ಧ್ಧರಗೆರೆಯೆ

ಜಾಂಬುವಂತ್ಯೇರ ಸಹಿತಾನಂದದಿ ಕುಳಿತ ಹರಿಗೆ 1


ಮಿತ್ರೆ ಕಾಳಿಂದಿ ಭದ್ರಾ ಅಚ್ಚುತನೆಡಬಲ

ಲಕ್ಷಣ ನೀಲ ನಕ್ಷತ್ರದಂದದÀಲಿ

ಒಪ್ಪುವÀ ಚಂದ್ರನಂಥ ವಾರಿಜಾಕ್ಷನು ಇರಲು

ಅಷ್ಟಭಾರ್ಯೇರ ಸಹಿತ ನಕ್ಕು ಕುಳಿತ ಹರಿಗೆ 2


ನಾಶವಾಗಲಿ ನರ್ಕಾಸುರನ ಮಂದಿರ ಪೊಕ್ಕು

ಏಸುಜನ್ಮದ ಪುಣ್ಯ ಒದಗಿ ಶ್ರೀಹರಿಯು

ಶ್ರೀಶನ್ವೊಲಿದ ಭೀಮೇಶಕೃಷ್ಣನು ಸೋಳ-

ಸಾಸಿರ ಸತಿಯರಿಂದ್ವಿಲಾಸದಿ ಕುಳಿತ ಹರಿಗೆ 3

***


No comments:

Post a Comment