Friday, 6 August 2021

ಮಂಗಳಾ ವರಯೋಗಿ ರಾಯಗೆ ಮಂಗಳಾ ಪರಮ ಅವಧೂತಗೆ ankita bheemashankara

 ..

 kruti by ಭೀಮಾಶಂಕರರು ದಾಸರು bheemashankara


ಮಂಗಳಾ ವರಯೋಗಿ ರಾಯಗೆ | ಮಂಗಳಾ ಪರಮ ಅವಧೂತಗೆ |ಮಂಗಳಾ ಪರಮಾತ್ಮ ಶ್ರೀ ಗುರು ಸಿದ್ಧ ಬಸವಂಗೆ | ಜಯ ಜಯ ಮಂಗಳಾ ಪ


ಆದಿ ಮಧ್ಯಾವಸಾನವಿಲ್ಲದ ನಾದ ಬಿಂದು ಕಲಾ ಶೂನ್ಯಗೆ |ಸಾಧಿಸುವ ಸಿದ್ಧಾಂತ ಅಗಣಿತವಾದ ಬ್ರಹ್ಮವನು | ವೇದ ವೇದಾಂತವ ವಿಚಾರಿಸಿ ನಾದ ಋಷಿ ಅಪಾರ ಚಿಂತ್ಯನು | ಮೇದಿನಿಯ ಭಕ್ತರನುಗ್ರಹಕಿತ್ತ ಬಂದ ಬಸವರಾಜಯೋಗದಲಿ 1


ಆಗಳಾ ಕ್ಷೀರಾಬ್ಧಿ ಶಯನಗೆ ಯೋಗ ನಿದ್ರೆಯಲಿರಲು ಸುರಗಣಬೇಗದಿಂದಲಿ ಬಂದು ಪೊಗಳಲು ಬ್ರಹ್ಮನನು ಕೂಡೆ |ಭೋಗಿಶಯನಲಿ ದೇವದೇವರು ಜಾಗೃತಿ ಅವಸ್ಥೆಯಲಿ ನಿಂತನುರಾಗದಿಂದಲಿ ಮತ್ಸ್ಯ ಕೂರ್ಮ ವರಾಹನಾದ ಮಾಧವಗೆ 2


ಇಲ್ಲಿಯ ಕತ್ತಲೆ ನಿವಾರಿಪನು ಜಲಜಮಿತ್ರನು ಇಳೆಗೆ ತೋರುವಅಳಿಯಲಾರದೇ ಕೃಷ್ಣನಾಮವು ದೋಷರಾಶಿಯನು |ತಿಳಿದು ನೋಡಲು ಯೋಗ ಧ್ರುವತರಳರೆಲ್ಲರು ಬಲ್ಲರು ಆದಿ ಮಾಧವ ಕಲಿಯೊಳಗವತರಿಸಿದ ಬಳಿಕಾ ಬಾಲಕೃಷ್ಣಂಗೆ 3


ನೋಡಿದರೆ ದುರಿತವನು ಕೆಡುವನು, ಬೇಡಿದರೆ ಸಾಯೋಜ್ಯನೀವನು ಮಾಡಿ ಪಾದದ ತೀರ್ಥಕೊಂಡಡೆ ಮರಳಿ ಪುಟ್ಟಗಡ | ಖೇಡನಾಗದೆ ನಾಮಕೀರ್ತಿಯ ಮಾಡು ಮರುಳೆ ಆದಿಪುರುಷನರೂಢಿಯೊಳು ಈಡ್ಯಾಡಿ ಮೆರೆದ ಬಸವರಾಜಯೋಗದಲಿ 4


ಇಂತು ಭಕ್ತರ ಭಕ್ತಿಗೋಸುಗ ಅಚಿಂತ್ಯ ಮಹಿಮನು ಶರೀರವತಾ- ನಂತು ಧರಿಸಿಹನಿಲ್ಲದಿದ್ದಡೆ ದೇಹ ತಾನೇ ತಾ |ಕಂತು ಹರನವತಾರವಲ್ಲದೆ ಭ್ರಾಂತಿ ಬಿಡಿಸಿದ ಕೊಳಕೂರದಲಿಸಂತತವೆ ನೆಲೆಸಿಹನು ಬಸವರಾಜಯೋಗದಲಿ 5

***


No comments:

Post a Comment