Sunday, 1 August 2021

ಗಾಡಿಯೆತ್ತಲಿಂದ ಬಂದುದೆ ಮಾತ ನಾಡಲರಿಯದಿಪ್ಪ ಹೊಚ್ಚ ಹೊಸ ಹರೆಯದ ಮುಗುದೆಗೀ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಗಾಡಿಯೆತ್ತಲಿಂದ ಬಂದುದೆ ಮಾತ

ನಾಡಲರಿಯದಿಪ್ಪ ಹೊಚ್ಚ ಹೊಸ ಹರೆಯದ ಮುಗುದೆಗೀ ಪ


ಬಳುಕೆ ಸಿಂಹಮಧ್ಯ ಬಟ್ಟಮೊಲೆಗಳು ಮರೆ ತೋರವಾದ

ಬಳವಿ ಮುಡಿಯೊಳಲರು ಹೊಯ್ಯನಿಳೆಯಲುದುರಲು

ಜಲಜಮುಖದಿ ಬೆಮರುದೋರೆ ವಲಯಹಾರ ಉರದಿ

ಘಲಿರು ಘಲಿರೆನೆ ಆವಕಡೆಯು ಕುಲುಕಿ ಕುಲುಕಿ ನಡೆವ ಈ 1


ಮಿಸುಪ ಮಂದಹಾಸ ಮುಖದಿ ಮಸಗಿದಂತ ಕಾಂತಲಜ್ಜೆ

ಮುಸುಕೆ ಮಿಸುಪ ಕದಪಿನಲ್ಲಿ ಎಸೆವ ಓಲೆ ಢಾಳಿಸಿ

ಸಸಿನೆ ತಿದ್ದಿ ಉರದಿ ಜರಿಯ ವಸನವನ್ನು ಸಂತವಿಸುತ

ಕುಸುರಿಲಂಗ ದಂದವನ್ನು ಎಸಸಿ ಬಿಡುವ ನಡೆವ 2


ಕರವನೊಯ್ಯಗೊಲಿದು ಉರಗಗಿರಿಯ ಮೇಲೆ ಬಾಲಚಂದ್ರ

ನಿರಲು ಸೆರಗ ಮರೆಯಮಾಡಿ ಮರಳಿ ಮರಳಿ ನೋಡುತಾ

ಸ್ಮರನತಾತ ಸುರನಗರದೆರೆಯ ವೈಕುಂಠಲಕ್ಷ್ಮಿಯರಸನೊಡನೆ

ನೆರೆದ ಪರಿಯ ಸಿರಿಯ ಗರುವ ಗಮನದಾ 3

***


No comments:

Post a Comment