..
ಭಾರತೀದೇವಿಯ ಸ್ತೋತ್ರ
ಮಾರುತನ್ನ ಜಾಯೆ - ಮೊರೆಯ ಹೊಕ್ಕೆನು ಕಾಯೆ ಪ
ಮಾರಾಂತಕ ಶಂಬರಾರಿ ಭಿದುರಧರತಾರೇಶ ಶರವಿನುತೇ ಅಮ್ಮಯ್ಯ ಅ.ಪ.
ಭ್ರಮರ ಕುಂತಳೆ ಜಾಣೆ ಅಮರ ವಂದಿತ ಚರಣೆಸುಮನಸೇಶನ ಪದಕಮಲ ಪೂಜಿಪುದಕೆವಿಮಲಮತಿಯನೀಯೇ ಅಮ್ಮಯ್ಯ 1
ಶೃತಿದೇವಿಯಲ್ಲಿ ಸುತೆಯಾಗಿ ಜನಿಸಿದೆಸತತ ಎನ್ನಯ ದುರ್ಮತಿ ಖಂಡಿಸಿ ಸು-ಮತಿವಂತನ ಮಾಡೇ ಅಮ್ಮಯ್ಯ 2
ಎರಡೇಳು ಭುವನ ಜಠರದೊಳಗಿಂಬಿಟ್ಟಪರಿಪೂರ್ಣ ಕಾಮ ಶ್ರೀ ಮೋಹನ ವಿಠ್ಠಲನಚರಣ ಭಕುತಿಯನೀಯೇ ಅಮ್ಮಯ್ಯ 3
***
No comments:
Post a Comment