Sunday, 1 August 2021

ಎಂದೆನ್ನ ಪೊರೆವೆ ಶ್ರೀರಂಗಧಾಮ ಎಂದೆನ್ನ ಪೊರೆವೆ ankita gopalakrishna vittala

ಎಂದೆನ್ನ ಪೊರೆವೆ ಶ್ರೀರಂಗಧಾಮ

ಎಂದೆನ್ನ ಪೊರೆವೆ ಪ.


ಎಂದೆನ್ನ ಪೊರೆವೆ ಎಂದೆನ್ನ ಕರೆವೆ

ಮಂದಹಾಸ ಮುಖನೆ ಎಂದೆನ್ನನೀಕ್ಷಿಸುವೆ ಅ.ಪ.


ಶ್ರೀಶ ವೈಕುಂಠದಿ ಸಾಸಿರ ಫಣೆಯುಳ್ಳ

ಶೇಷಶಯನ ಎನ್ನ ಘಾಸಿಗೊಳಿಸಿದೆ 1

ಅರವಿಂದನಯನನೆ ಅರವಿಂದ ದಳ ಪೋಲ್ವ

ವರಹಸ್ತವನೆ ಎನ್ನ ಶಿರದ ಮೇಲಿಡುತಲಿ 2

ಬಳಲಬೇಡೆಂತೆಂದು ನಳಿತೋಳಿನಿಂದೆತ್ತಿ

ನಳಿನನಾಭನೆ ಎನ್ನ ಬಳಲಿಕೆ ಬಿಡಿಸುತ್ತ 3

ಮುಕ್ತರ ಸಂಗಡ ಮುಕ್ತೇಶ ಎನ್ನಲ್ಪ

ಶಕ್ತಿ ಸೇವೆಯ ಕೊಳುತ ಮುಕ್ತಾರ್ಥದಾಯಕ4

ವ್ಯಾಪಕ ಶ್ರೀಗುರು ಸ್ಥಾಪಕ ಮನದಲ್ಲಿ

ಗೋಪಾಲಕೃಷ್ಣವಿಠ್ಠಲ ಈ ಪರಿ ದಯೆಗೈದು 5

****


No comments:

Post a Comment