Friday, 21 May 2021

ರಘುರಾಮಗೆ ಬೆಳಗಿರೆ ಬೇಗ ಆರತಿ ankita srinivasa

 ರಾಗ - : ತಾಳ -


ರಘುರಾಮಗೆ ಬೆಳಗಿರೆ ಬೇಗ ಆರತಿ ll ಪ ll


ದಶರಥಪುತ್ರಗೆ ಪಶುಪತಿ ಮಿತ್ರಗೆ

ಋಷಿಗಳ್ಯಾಗವ ಕಾಯ್ದವಗೆ

ಶಶಿಮುಖಿ ಅಹಲ್ಯೆ ಶಾಪವ ಕಳೆದ

ಅತುಳ ಮಹಿಮ ಶ್ರೀಹರಿಗೆ ll 1 ll


ಶಿವನ ಧನುವ ಮುರಿದವನಿಜೆಯಳ ತಂದು

ಜವದಿ ಪರಶುರಾಮನಿಗೆ

ತವಕದಿ ಗರ್ವವ ಮುರಿದವನೀಶಗೆ

ಕಮಲಾಕ್ಷಿಯರೀಗ ಬೇಗ ll 2 ll


ಅನುಜನವಡಗೂಡಿ ವನಿತೆ ಸಹಿತಲೀ

ವನಕೆ ಪೊರಟು ಅಂಜನೆಯ 

ತನುಜನಗೂಡಿ ದನುಜನ ಮುರಿದ

ಘನದ ಶ್ರೀ ಶ್ರೀನಿವಾಸಗೆ ll 3 ll

***


No comments:

Post a Comment