ಮಂಗಳ ಮುಖ್ಯಪ್ರಾಣೇಶಗೆ ಜಯ
ಮಂಗಳ ಮೂಜಗವಂದಿತಗೆ ಪ.
ಅಂಜನೆತನಯಂಗೆ ಮಾಪ್ರತಿ ಮಹಿಮಂಗೆ
ಕಂಜನಾಭನ ಕಾರ್ಯದನುಕೂಲಗೆ
ಸಂಜೀವನ ತಂದ ಸಾಹಸವಂತಗೆ ಶ್ರೀ
ರಂಜಿಪ ಹನುಮಗೆ ಮಂಗಳ 1
ಆ ಮಹಗಡಲ ಲಂಘಿಸಿ ಹೋಗಿ ಲಂಕೆಯ
ಧಮಧುಮ ಮಾಡಿ ವನವ ಕಿತ್ತು
ರಾಮ ಮುದ್ರಿಕೆ ಜಾನಕಿಗೆ ತಂದಿತ್ತÀ
ಹೇಮಾದ್ರಿ ಹನುಮಗೆ ಮಂಗಳ 2
ಸುತ್ತ ಸಾಗರ ಮಧÀ್ಯದಲ್ಲಿ ಲಂಕೆಯ
ಮುತ್ತಿ ವನಜಾಕ್ಷಿಯ ಮುಂದೆ ಬಂದು
ಹತ್ತು ತಲೆಯ ರಾವಣನೈಶ್ವರ್ಯವನಳಿದಗೆ
ಖ್ಯಾತ ಹನುಮಗೆ ಮಂಗಳ 3
ಜಾತಿ ಬಂಧುಗಳ ಒಡಗೊಂಡು ಸಮುದ್ರದ
ಸೇತುವ ಕಟ್ಟಿ ಸಾಹಸದಿಂದಲಿ
ಸೀತಾಪತಿಯ ಬಲವ ನಡೆಸಿದ ಪ್ರ
ಖ್ಯಾತ ಹನುಮಗೆ ಮಂಗಳ 4
ಈ ಕಾಡಕಪಿಯಲ್ಲ ನಿಮ್ಮ ಸೇವಕನೆಂದು
ಬೇಡವೆಂದು ಸೀತೆಯ ಭಯಬಿಡಿಸಿ
ಚೂಡಾರತ್ನ ಶ್ರೀ ರಾಮರಿಗಿತ್ತ ಬಂಟ
ಕೊಂಡಾಡಿಸಿಕೊಂಬಗೆ ಮಂಗಳ 5
ಬಲ್ಲಿದ ರಾವಣೇಶ್ವರನ ಮಾರ್ಬಲವನು
ಕಲ್ಲು ಮರದೊಳಿಟ್ಟು ಕೆಡಹಿದಗೆ
ಜಲ್ಲುಕ ದೈತ್ಯರಿಗೆಲ್ಲ ಎದೆಯ ಶೂಲವಗಿದ
ಧಲ್ಲ ಹನುಮಗೆ ಮಂಗಳ 6
ಬಲು ದೈತ್ಯರನೆಲ್ಲ ಗೆಲಿದು ಮುದ್ದೇನಹಳ್ಳಿಲಿ
ಸ್ಥಿರವಾಗಿ ನಿಂದು ಭಕ್ತರ ಹೊರೆವ
ಹೆಳವನಕಟ್ಟೆ ವೆಂಕಟೇಶನ ದೂತ
ಚಲದಂಗ ಹನುಮಗೆ ಮಂಗಳ 7
****
No comments:
Post a Comment