ಕರುಣಿಸಿಕೊಡು ಜೀಯಾ ಹರಿವಾಯುಗಳಲಿ
ದೃಢತರದ ಭಕುತಿಯಾ
ತವದ್ವಾರದಿಂದಲಿ ದೊರಕುವುದು ನಿಶ್ಚಯಾ ತರಿ ಎನ್ನ ಮಾಯಾ
ಪರಿಹರಿಸೋ ಈ ಭವತಾಪವ ಪರಿಹರಿಸದಲೇ ಭರದಿ ಬಂದೆನು
ಪರಮ ಪಾವನ ಸತ್ಯe್ಞÁನ ಶ್ರೀ ಗುರುವರನೇ ತವ ಚರಣಕೆರಗುವೆ ಪ
ಮಂದಭಾಗ್ಯನು ನಾನು ವ್ರತನೇಮ
ಕರ್ಮಗಳೊಂದು ನಾನರಿಯೇ
ಮುಂದಿನ ಪಥವನು ತೋರ್ವ ತಂದೆಯು ನೀನು
ನಿನ್ನಯ ಪಾಲಿಗೆ
ಬಂದ ದಾಸನು ನಾನು ಪಾಲಿಸುವುದಿನ್ನು ಇಂದು ತವ
ಚರಣಗಳ ದ್ವಂದ್ವಕೆ
ವಂದಿಸುವೆ ದಯಾಸಿಂಧು ಎನ್ನನು ಸಂದೇಹ
ಮಾಡದಲೆ ಸಲಹೋ
ಆನಂದತೀರ್ಥರ ಪೀಠಪೂಜನೇ 1
ಭ್ರಷ್ಟನಾದವ ನಾನು ಸೃಷ್ಟಿಸಿದ ಹರಿಯನು ಮರೆತು ದಿನಗಳೆದನು
ಪೊಟ್ಟೆಗೋಸುಗ ದುಷ್ಟರಿಗೆ ಬೇಡ್ದೆನು ಕಂಗೆಟ್ಟು
ಪಡ್ಡೆರಧೊಟ್ಟಿ(ಪಡ್ಡೆರದು+ಹೊಟ್ಟಿ) ಹೊರಕೊಂಡೆನು
ಪಾಪಿಷ್ಟ ನಾನು ಇಷ್ಟದಾಯಕ ಮುಟ್ಟಿ ಭಜಿಸುವೆ
ಸುದೃಷ್ಟಿಯಲಿ ನೋಡಿ ಎನ್ನಯ ಕೆಟ್ಟ ಮನವನು ಕಳೆದು e್ಞÁನದ
ದೃಷ್ಟಿ ಕೊಡುವುದು ಶ್ರೇಷ್ಠ ಮಹಿಮನೆ 2
ದಾನಧರ್ಮಗಳನ್ನು ಈ ಕರಗಳಿಂದಲಿ ಮಾಡಲಿಲ್ಲವೊ ನಾನು
ಹನುಮೇಶವಿಠಲನ ಸ್ಮರಣೆ ಎಂಬುವುದನ್ನು
ಧನವನಿತೆಸುತರಾ ಮೋಹದೊಳು ಮರೆತೆನು ಗುರುವರನೆ ನೀನು
e್ಞÁನವಿಲ್ಲದ ದೀನದಾಸನ ಹೀನಗುಣ ಎಣಿಸದಲೆ ಪಾಲಿಸೊ
ದೀನಜನ ಮಂದಾರನಿಲಯನೆ ಕಾಮಿತಾರ್ಥವನೀವ ದಾತನೇ 3
****
No comments:
Post a Comment