ಶ್ರೀ ಗಣೇಶ
ಕಾತ್ಯಾಯನಿ ವರಸುತನೇ ಸತತ ಶುಭದಾಯಕನೇ
ಮಂಗಳವನು ಕೊಡು ನಮಿಸುವೆನೊ ನಾನು ಪ
ಸಿದ್ಧಿವಿನಾಯಕ ವಿದ್ಯಾಪ್ರದಾಯಕ
ಸದ್ಬುದ್ಧಿಯ ಕೊಡೋ ಹರನ ಮುದ್ದುತನಯನೆ 1
ಮೂಷಕವಾಹನನೇ ದೋಷವಿದೂರನೇ
ಶ್ರೀಶ ಹನುಮೇಶ ವಿಠಲೋಪಾಸಕನೇ 2
ಗೌರೀಸುತ ಗಜಾನನಾ ನಮೋ ನಮೋ
ಪಾರ್ವತೀ ಪತಿಯ ಪ್ರಾಣಪದಕನೇ ನಮೊ 3
ಏಕದಂತಾನೇಕ ಚರಿತನೇ ನಮೋ
ನೀ ಕೃಪಾದಿ ನೋಡೋ ವಕ್ರತುಂಡನೆ ನಮೋ 4
ಬಟ್ಟಮುತ್ತಿನ್ಹಾರ ಪದಕಧಾರನೇ ನಮೋ
ಧಿಟ್ಟ ಶ್ರೀ ಹನುಮೇಶವಿಠಲ ಪ್ರಿಯನೇ ನಮೋ 5
****
No comments:
Post a Comment