ರಾಗ - : ತಾಳ -
ಕಾಯೊ ಕರುಣಾನಿಧೆ l ಶ್ರೀ ಹರಿ l
ಖಗವರ ಗಮನಾ ll ಪ ll
ಘೋರ ಸಂಸಾರದ ತಾಪದಿ ನೊಂದೆ l
ವಾರಿ ಭವ ಭಯ ಅಘಕುಲ ಶಮನಾ ll 1 ll
ಜ್ಞಾನ ಧ್ಯಾನದ ನಿಜ ಸಾಧನವರಿಯೆ l
ನೀನೆ ಗತಿಯೆನುತ ಮಾಡುವೆ ನಮನಾ ll 2 ll
ಗುರು ಮಹಿಪತಿ ಪ್ರಭು ಅನಾಥ ಬಂಧು l
ಚರಣದ ಭಜನೆಯ ಲಿರಿಸೆನ್ನ ಮನ ll 3 ll
***
ಕಾಯೋ ಕರುಣಾನಿಧೆ ಶ್ರೀ ಹರಿ l
ಖಗವರ ಗಮನಾ ll ಧ್ರುವ ll
ಘೋರ ಸಂಸಾರದ ತಾಪದಿ ನೊಂದೆ l
ವಾರಿ ಭವ ಭಯ ಅಘಕುಲ ಶಮನಾ ll 1 ll
ಜ್ಞಾನ ಧ್ಯಾನದ ನಿಜ ಸಾಧನವರಿಯೆ l
ನೀನೆ ಗತಿಯೆನುತ ಮಾಡುವೆ ನಮನಾ ll 2 ll
ಗುರು ಮಹಿಪತಿ ಪ್ರಭು ಅನಾಥ ಬಂಧು l
ಚರಣದ ಭಜನೆಯ ಲಿರಿಸೆನ್ನ ಮನ ll 3 ll
***
No comments:
Post a Comment