Saturday, 9 January 2021

ಶ್ರೀ ವಿವೇಕಾನಂದ ಗುರುವರ others rss

 RSS song  


ಶ್ರೀ ವಿವೇಕಾನಂದ ಗುರುವರ ನವಯುಗಾಚಾರ್ಯ

ರಾಮಕೃಷ್ಣರ ಭೀಮಶಿಷ್ಯನೆ ವೀರವೇದಾಂತಿ

ಭಾರತಾಂಬೆಯ ಧೀರಪುತ್ರನೆ ಸಾಧುಭೈರವನೇ

ಸ್ಥೈರ್ಯದಚಲನೆ ಧೈರ್ಯದಂಬುದಿ ಜಯತು ಜಯ ಜಯತು   ||ಪ||


ಮೊರೆದು ಗರ್ಜಿಪ ಕಡಲವಾಣಿಯು ನಿನ್ನ ವರವಾಣಿ

ತಾರಮಿಂಚನು ನಗುವ ತೇಜವು ನಿನ್ನ ಮೈಕಾಂತಿ

ಆಳವಂಬುಧಿ ಆಳಮೇರೆಯು ನಭದ ವಿಸ್ತಾರ

ಮಂದರಾಗ್ನಿಯ ಮೀರದಚಲನು ನೀನು ಯೋಗೀಂದ್ರ            ||೧||


ನಿನ್ನ ಹೆಸರದೆ ಶಕ್ತಿಯೀಯುವ ದಿವ್ಯತರ ಮಂತ್ರ

ನಿನ್ನ ಮಾರ್ಗವೆ ಮುಕ್ತಿದಾಯಕವಾದ ವರಮಾರ್ಗ

ನಮ್ಮ ಹೃದಯಕೆ ಹೃದಯ ನೀಡೈ ಶಕ್ತಿಸಾಗರನೇ

ಯಮನ ನುಂಗಿದ ರಾಜಯೋಗಿಯೆ ರುದ್ರಸನ್ಯಾಸಿ                ||೨||


ನಿನ್ನ ಧೈರ್ಯ ಸ್ಥೈರ್ಯ ದೃಢತೆಯು ನಿನ್ನ ಸವಿಶಕ್ತಿ

ಭಾರತೀಯರಿಗಿಂದು ಬೇಕಾಗಿಹುದು ದಿವ್ಯಾತ್ಮ

ರುದ್ರ ನರ್ತನವೆಸಗು ಹೃದಯದಿ ಬುದ್ಧಿ ಭೈರವನೇ

ರುದ್ರಭೂಮಿಗಳಾಗಲೆಮ್ಮೀ ಕ್ಷುದ್ರ ಹೃದಯಗಳು                    ||೩||


ಬ್ರಹ್ಮವಿದ್ಯೆಯ ದಿವ್ಯ ದೀಪ್ತಿಯ ದೇಶದೇಶದಲಿ

ಹರಡಿ ಆಭಯವನೀಯುತಮೃತ ಸುರಿದು ಪಾಲಿಸಿದೆ

ಗಗನಕೆತ್ತಿದೆ ಭಾರತಾಂಬೆಯ ಕೀರ್ತಿಚೇತನವ

ಓಜೆ ತುಂಬಿಹುದಾರ್ಯಮಾತೆಯ ಶ್ರೀನಿಕೇತನವ                ||೪||

***


SrI vivEkAnaMda guruvara navayugAcArya

rAmakRuShNara BImaSiShyane vIravEdAMti

BAratAMbeya dhIraputrane sAdhuBairavanE

sthairyadacalane dhairyadaMbudi jayatu jaya jayatu      ||pa||


moredu garjipa kaDalavANiyu ninna varavANi

tAramiMcanu naguva tEjavu ninna maikAMti

ALavaMbudhi ALamEreyu naBada vistAra

maMdarAgniya mIradacalanu nInu yOgIMdra                ||1||


ninna hesarade SaktiyIyuva divyatara maMtra

ninna mArgave muktidAyakavAda varamArga

namma hRudayake hRudaya nIDai SaktisAgaranE

yamana nuMgida rAjayOgiye rudrasanyAsi                    ||2||


ninna dhairya sthairya dRuDhateyu ninna saviSakti

BaaratIyarigiMdu bEkAgihudu divyAtma

rudra nartanavesagu hRudayadi buddhi BairavanE

rudraBUmigaLAgalemmI kShudra hRudayagaLu           ||3||


brahmavidyeya divya dIptiya dESadESadali

haraDi ABayavanIyutamRuta suridu pAliside

gaganakettide BAratAMbeya kIrticEtanava

Oje tuMbihudAryamAteya SrInikEtanava                       ||4||

***


No comments:

Post a Comment