Friday, 6 December 2019

ಮಾವನ ಮನೆಯೊಳಗೆ ಕೋವಿದರಿರಬಹುದೆ purandara vittala

ಪುರಂದರದಾಸರು
ಮಾವನ ಮನೆಯೊಳಗೆ ಕೋವಿದರಿರಬಹುದೆ ? ಪ.

ಹಾವ ಹಿಡಿಯಲು ಬಹುದುಹರಣ ನೀಡಲು ಬಹುದು |ಬೇವ ಕಿಚ್ಚನು ಹಿಡಿದು ನುಂಗಬಹುದು ||ಭಾವೆಯ ತಂದ ಮನೆಯಲಿ ಜೀವಿಪುದಕಿಂತಸಾವುದೇ ಲೇಸು ಅಭಿಮಾನಿಗಳಿಗೆ 1

ಪರರ ಸೇರಲುಬಹುದು ಪತಿತರಲ್ಲಿರಬಹುದು |ಕೊರಳ ಘಾತಕರಲ್ಲಿ ಸೆರಗೊಡ್ಡಬಹುದು ||ತರುಣಿಯ ತಂದೆಯ ಮನೆಯವಾಸಕ್ಕಿಂತ |ತರುಗಿರಿಗುಹೆಗಳಲಿ ಇದ್ದು ಜೀವಿಸಬಹುದು 2

ಮಾವ - ಅತ್ತೆಯ ನೊಂದು ಅತ್ತಿಗೆಯು ತಾ ಜರೆದು |ಹೇವವನಿಕ್ಕಿ ಚೂರ್ಣವ ಮಾಡಲು ||ಆವಾಗ ನೋಡಿದರೂ ಎನಗೆ ಹಿತರಿಲ್ಲೆಂದುಮಾವ ಹೊರಗಾಡುವನು ಚಿಕ್ಕ ನುಡಿಗಳನು 3

ಒಂದೊಂದು ತೆಂಗಳೂಳು ಬಹುಮಾನ ನಡತೆಗಳು |ಒಂದೆರಡು ತಿಂಗಳೊಳಗೆ ಹಿತವಾದವು ||ಒಂದೊಂದಭದ್ರ ನುಡಿ ಒಳಗೊಳಗೆ ಹುಟ್ಟಿದುವು |ಸಂದೇಹವೇಕೆ ಸಂಸಾರಿಗೂ 4

ಈ ಪರಿಯಲುಂಬಂಥ ಅಳಿಯ ಭೋಜನದಿಂದ |ಗೋಪಾಳ ಲೇಸು ಅಭಿಮಾನಿಗಳಿಗೆ ||ಶ್ರೀಪತಿ ನಮ್ಮ ಪುರಂದರವಿಠಲನಈಪರಿಭಜಿಸಿ ಸುಖಿಯಾಗೊ ಮನವೆ* 5
********

No comments:

Post a Comment