Wednesday, 4 December 2019

ಏಕೆ ದೇಹವನು ದಂಡಿಸುವೆ ವೃಥಾ purandara vittala

ಪುರಂದರದಾಸರು
ಏಕೆ ದೇಹವನು ದಂಡಿಸುವೆ ವೃಥಾ - ಬಿಡ - |ದೇಕ ಚಿತ್ತದಿ ಲಕ್ಷ್ಮೀಕಾಂತಹರಿಎನ್ನದೆ ಪ.

ಸ್ನಾನವನು ಮಾಡಿ ಧ್ಯಾನಿಸುವೆನೆನುತಲತಿ - |ಮೌನವನು ಪಿಡಿದು ಬಕಪಕ್ಷಿಯಂತೆ |ಹೀನ ಬುಧ್ಧಿಗಳ ಯೋಚಿಸಿ ಕುಳಿತು ಫಲವೇನು ||ದಾನವಾಂತಕನ ನಾಮಕೆ ಮೌನವುಂಟೆ ? 1

ಜಪವ ಮಾಡುವೆನೆನುತ ಕಪಟಬುದ್ಧಿಯ ಬಿಡದೆ |ಗುಪಿತದಿಂದಲಿ ನೀನು ಕುಳಿತು ಫಲವೇನು ||ಅಪರಿಮಿತಮಹಿಮ ಶ್ರೀ ನಾರಾಯಣನೆಂದರೆ ||ಸಫಲವಲ್ಲದೆ ಬೇರೆ ಗತಿಯುಂಟೆ ಮರುಳೆ 2

ಅಂದಜಾಮಿಳಗೆ ಸ್ಮರಣೆಯ ಮಾತ್ರದಲಿ ಮುಕುತಿ |ಹಿಂದೆ ಶ್ರೀಹರಿಯು ತಾ ಕೊಡಲಿಲ್ಲವೇ ? |ಸಂದೇಹವೇಕೆ ನೀನೊಂದು ಕ್ಷಣವಗಲದೆ |ತಂದೆ ಶ್ರೀ ಪುರಂದರವಿಠಲ ನೆನೆಮನವೆ 3
******

No comments:

Post a Comment