ಪುರಂದರದಾಸರು
ಏನ ಮಾಡಲಿ ಮಗನೆ ಏಕೆ ಬೆಳಗಾಯಿತು |ಮಾನಿನಿಯರು ಬಂದುಮಾನಕಳೆಯುವರು ಪ
ಹಾಲು, ಮೊಸರು, ಬೆಣ್ಣೆ, ಕದ್ದನೆಂತೆಂಬುವರು |ಮೇಲಿಟ್ಟ ಕೆನೆಯನು ಮೆದ್ದನೆಂಬುವರು ||ಬಾಲರನೆಲ್ಲರ ಬಡಿದನೆಂಬರು ಎಂಥ |ಕಾಳು ಹೆಂಗಸು ಇವನ ಹಡೆದಳೆಂಬುವರೊ 1
ಕಟ್ಟಿದ ಕರುಗಳ ಬಿಟ್ಟನೆಂತೆಂಬರೊ |ಮೆಟ್ಟಿ ಸರ್ಪನ ಮೇಲೆ ತುಳಿದನೆಂಬುವರೊ ||ಪುಟ್ಟ ಬಾಲೆಯರ ಮೋಹಿಸಿದನೆಂಬುವರೊ ಎಂಥ |ಕೆಟ್ಟ ಹೆಂಗಸು ಇವನ ಹಡೆದಳೆಂಬುವರೊ 2
ಗಂಗಾಜನಕನಿನ್ನ ಜಾರನೆಂತೆಂಬರೊ |ಶೃಂಗಾರ ಮುಖ ನಿನ್ನ ಬರಿದೆ ದೂರುವರೊ ||ಮಂಗಳಮಹಿಮ ಶ್ರೀ ಪುರಂದರವಿಠಲ |ಹಿಂಗದೆ ಎಮ್ಮನು ಸಲಹೆಂತೆಂಬುವರೊ 3
*******

No comments:
Post a Comment