Sunday, 5 December 2021

ನಾರಾಯಣ ಎನ್ನಿರೊ ಶ್ರೀ ನರಹರಿ ಪಾರಾಯಣ ಮಾಡಿರೋ purandara vittala NARAYANA ENNIRO SRI NARAHARI PAARAAYANA MAADIRO

Audio by Sri. Madhava Rao



ನಾರಾಯಣ ಎನ್ನಿರೋ, 
ಶ್ರೀ ನರಹರಿ ಪಾರಾಯಣ ಮಾಡಿರೋ || ಪಲ್ಲವಿ ||

ನಾರಾಯಣನೆಂದು ಅಜಮಿಳನು ಕೈವಲ್ಯ
ಸೇರಿದನೆಂಬೊ ಸುದ್ದಿಯ ಕೇಳಿ ಅರಿಯಿರಾ || ಅನು ಪಲ್ಲವಿ ||

ಕಾಶಿಗೆ ಹೋಗಲೇಕೆ, ಕಾವಡಿ ಪೊತ್ತು
ಬೇಸತ್ತು ತಿರುಗಲೇಕೆ
ವಾಸುದೇವನ ನಾಮ ಬಾಯ್ತುಂಬ ನೆನೆದರೆ
ಕ್ಲೇಶಗಳೆಂಬುದನು ಲೇಶ ಮಾತ್ರವಿಲ್ಲದೆ || ೧ ||

ಚೋರರ ಭಯವಿಲ್ಲವೊ, ಹರಿನಾಮಕ್ಕೆ
ಯಾರ ಅಂಕೆಯಿಲ್ಲವೊ
ಊರನಾಳುವ ದೊರೆ ನೀತಿ ಭೀತಿಗಳಿಲ್ಲ
ಘೊರಪಾತಕವೆಲ್ಲ ದೂರ ಮಾಡುವುದಿಕ್ಕೆ || ೨ ||

ಸ್ನಾನವ ಮಾಡಲೇಕೆ, ಮಾನವರಿಗೆ
ಮೌನ ಮಂತ್ರಗಳೇಕೆ
ದೀನಪಾಲಕ ನಮ್ಮ ಬೆಟ್ಟದೊಡೆಯನ
ಧ್ಯಾನಕೆ ಸರಿಯುಂಟೆ ಪುರಂದರವಿಠಲನ || ೩ ||
****

ರಾಗ ಕಮಾಚ್/ಅಟ್ಟ ತಾಳ (raga, taala may differ in audio)

pallavi

nArAyaNa ennirO shrI narahari pArAyaNa mADirO

anupallavi

nArAyaNanendu ajamiLana kaivalya sEridanembo suddiya kELi ariyirE

caraNam 1

kAshige hOgalEke kAvaDi pottu bEsattu tirugalEke vAsudEvana
nAma bAitumba nenedare klEshagaLembudu lEsha mAtravilla

caraNam 2

cOrara bhayavillavO hari nAmakke yAra anjikeyillavO
UranALuva dore nIti bhItigaLilla ghOra pAtakavella dUra mADuvudakke

caraNam 3

snAnava mADalEke manavarige mauna mantragaLEke dIna pAlaka
namma beTTa doDeyanna dhyAnake sariyuNTe purandara viTTalana
***

ನಾರಾಯಣ ಎನ್ನಿರೊ ಶ್ರೀ ನರಹರಿ |
ನಾರಾಯಣ ಎನ್ನಿರೊ ಪ.

ನಾರಾಯಣನೆಂದು ಅಜಮಿಳಕೈವಲ್ಯ |
ಸೂರೆಗೊಂಡನೆಂಬ ಸುದ್ದಿಯನರಿಯಿರಾ ? ಅಪ

ಚೋರರ ಭಯ ಎಲ್ಲವೊ - ಇದಕೆ ನೋಡೈ - |
ದಾರರಂಜಿಕೆ ಇಲ್ಲವೊ ||
ಊರನಾಳುವ ದೊರೆಯ ಭೀತಿ ಇನಿತಿಲ್ಲವೊ ||
ಘೋರ ಪಾತಕವೆಲ್ಲ ಹಾರಬಿಡುವುದಿದು 1

ಕಾಶಿಗೆ ಹೋಗಲೇಕೆ - ಕಾವಡಿ ಹೊತ್ತು - |
ಬೇಸತ್ತು ತಿರುಗಲೇಕೆ |
ವಾಸುದೇವನ ನಾಮ ವರ್ಣಿಸಿದವರಿಗೆ |
ಕ್ಲೇಶವೆಂಬುವುದಿದು ಲೇಶಮಾತ್ರವು ಇಲ್ಲ 2

ಸ್ನಾನವ ಮಾಡಲೇಕೆ - ಸಂಧ್ಯಾವಂದನೆ - |
ಮೌನ ಮಂತ್ರಗಳೇತಕೆ ||
ದೀನರಕ್ಷಕ ಬೆಟ್ಟದೊಡೆಯನಾದವನ |
ಧ್ಯಾನಕೆ ಸಮವುಂಟೆ ಪುರಂದರವಿಠಲನ 3
****

just scroll down for other devaranama 



No comments:

Post a Comment