ಶ್ರೀಮದಕ್ಷೋಭ್ಯ ತೀರ್ಥರ ದಿವ್ಯ ಚರಿತಂ
ಕಾಮಿತ ಪ್ರದವಹುದು ಶೃಣ್ವತಾಂ ಸತತಂ ||pa||
ಈ ಮಹಿಯೊಳವತರಿಸಿ ಭೂಮಿಜಾಸಹಿತ ಶ್ರೀ
ರಾಮನಂಘ್ರಿದ್ವಯವ ಪೂಜಿಸುತಲಿ
ನಿರ್ಜರ ಜನಸ್ತೋಮ ವಂದಿತರಾಗಿ
ವ್ಯೋಮ ಕೇಶಾಂಶರೆಂದೆನಿಸಿ ಮೆರೆವಂಥ ||1||
ಮೋದತೀರ್ಥರ ಮತ ಮಹೋದಧಿಗೆ ಪೂರ್ಣಹಿಮ
ದೀದಿತಿಯರೆಂದೆನಿಸಿ ದಿಗ್ವಲಯದಿ
ಭೇದ ಬೋಧಕ ಸೂತ್ರವಾದದಿಂದಲಿ ಮಹಾ
ವಾದಿ ವಿದ್ಯಾರಣ್ಯ ಯತಿವರನ ಜಯಿಸಿದ ||2||
ವಿಟ್ಠಲನ ಪದಪದುಮ ಷಟ್ಟದರೆಂದೆನಿಸಿ
ಸ್ವಪ್ನಸೂಚಿತ ಚಂದ್ರಭಾಗತಟದಿ
ಶ್ರೇಷ್ಠ ಕುದುರೆಯನೇರಿ ನದಿಯ ಜಲಕುಡಿದವರ
ಇಷ್ಟರೆನ್ನುತ ಕರೆದು ಕೊಟ್ಟರಾಶ್ರಮವ ||3||
ಸೃಷ್ಟಿಯೊಳು ಮಧ್ವಮತ ಪುಷ್ಠಿಗೈಸುವರೆಂಬ
ದೃಷ್ಟಿಯಿಂದಿವರಿಗೆ ಸುಮುಹೂರ್ತದಿ
ಪಟ್ಟಗಟ್ಟಿದರು ಜಯತೀರ್ಥ ನಾಮವನಿಡುತ
ಕೊಟ್ಟರಾಜ್ಞೆಯನು ದಿಗ್ವಿಜಯ ಮಾಡಿರಿ ಎಂದು ||4||
ದೇಶದೇಶದಿ ಬರುವ ಭೂಸುರೋತ್ತಮರ ಅಭಿ
ಲಾಷೆಗಳನೆಲ್ಲ ಪೂರೈಸಿ ಪೊರೆವ
ಶ್ರೀಶಕಾರ್ಪರ ಕ್ಷೇತ್ರವಾಸ ಅಶ್ವತ್ಥನರ
ಕೇಸರಿಯ ನೊಲಿಸಿದ ಯತೀಶರಿವರೆಂದು ||5||
*******
ಕಾಮಿತ ಪ್ರದವಹುದು ಶೃಣ್ವತಾಂ ಸತತಂ ||pa||
ಈ ಮಹಿಯೊಳವತರಿಸಿ ಭೂಮಿಜಾಸಹಿತ ಶ್ರೀ
ರಾಮನಂಘ್ರಿದ್ವಯವ ಪೂಜಿಸುತಲಿ
ನಿರ್ಜರ ಜನಸ್ತೋಮ ವಂದಿತರಾಗಿ
ವ್ಯೋಮ ಕೇಶಾಂಶರೆಂದೆನಿಸಿ ಮೆರೆವಂಥ ||1||
ಮೋದತೀರ್ಥರ ಮತ ಮಹೋದಧಿಗೆ ಪೂರ್ಣಹಿಮ
ದೀದಿತಿಯರೆಂದೆನಿಸಿ ದಿಗ್ವಲಯದಿ
ಭೇದ ಬೋಧಕ ಸೂತ್ರವಾದದಿಂದಲಿ ಮಹಾ
ವಾದಿ ವಿದ್ಯಾರಣ್ಯ ಯತಿವರನ ಜಯಿಸಿದ ||2||
ವಿಟ್ಠಲನ ಪದಪದುಮ ಷಟ್ಟದರೆಂದೆನಿಸಿ
ಸ್ವಪ್ನಸೂಚಿತ ಚಂದ್ರಭಾಗತಟದಿ
ಶ್ರೇಷ್ಠ ಕುದುರೆಯನೇರಿ ನದಿಯ ಜಲಕುಡಿದವರ
ಇಷ್ಟರೆನ್ನುತ ಕರೆದು ಕೊಟ್ಟರಾಶ್ರಮವ ||3||
ಸೃಷ್ಟಿಯೊಳು ಮಧ್ವಮತ ಪುಷ್ಠಿಗೈಸುವರೆಂಬ
ದೃಷ್ಟಿಯಿಂದಿವರಿಗೆ ಸುಮುಹೂರ್ತದಿ
ಪಟ್ಟಗಟ್ಟಿದರು ಜಯತೀರ್ಥ ನಾಮವನಿಡುತ
ಕೊಟ್ಟರಾಜ್ಞೆಯನು ದಿಗ್ವಿಜಯ ಮಾಡಿರಿ ಎಂದು ||4||
ದೇಶದೇಶದಿ ಬರುವ ಭೂಸುರೋತ್ತಮರ ಅಭಿ
ಲಾಷೆಗಳನೆಲ್ಲ ಪೂರೈಸಿ ಪೊರೆವ
ಶ್ರೀಶಕಾರ್ಪರ ಕ್ಷೇತ್ರವಾಸ ಅಶ್ವತ್ಥನರ
ಕೇಸರಿಯ ನೊಲಿಸಿದ ಯತೀಶರಿವರೆಂದು ||5||
*******
No comments:
Post a Comment