Wednesday, 11 December 2019

ಮರೆಯಬೇಡವೋ ಹರಿಯಮರೆಯಬೇಡವೋ ankita rangavittala

ಮರೆಯಬೇಡವೋ ಹರಿಯಮರೆಯಬೇಡವೋ ಪ

ಮರೆಯಬೇಡ ಹರಿಯನಾಮ ಮರೆತು ನೀನು ನಡೆಯಬೇಡದುರುಳಯಮನ ಪುರದಬಾಧೆ ಬರುವುದೆಂದು ಅರಿತು ಅರಿತು ೧

ದುರ್ಮನುಜರ ಸಂಗದಿಸುಕರ್ಮ ರಹಿತನಾದರೆ ಮನುಕರ್ಮನಿಷ್ಠೆಯಿಂದ ನಿನ್ನಚರ್ಮ ಸುಲಿಸುವನೋ ಮನುಜ ೨

ಗಾಳಿಗಿಕ್ಕಿದ ದೀಪದಂತೆನಾಳೆ ನಾಡಿದ್ದು ಎನಲಿಬೇಡಕಾಲಕಾಲಕೀಗ ನಾಮ ನಾಲಿಗಿಂದ ನೆನೆಯೊ ಕಂಡ್ಯ ೩

ಹಗಲು ಇರುಳು ಹಾಳು ಹರಟೆಬಗೆ ಬಗೆ ಉಲ್ಲಾಸತನದಿಸುಗುಣಿಯರೊಡನೆ ಸುರತ ಸುಖದಿನಗುತ ಕಾಲ ಕಳೆಯಬೇಡ ೪

ಅಂಗಜನ ಜನಕಮರಡಿ |
ರಂಗವಿಠಲರಾಯ ನಾಮ ಮಂಗಳ ಸುಸ್ಮರಣೆಯಿಂದ ಅಂತ |
ರಂಗದಿನೆನೆಯೋಕಂಡ್ಯ ೫
**********

No comments:

Post a Comment