Friday, 27 December 2019

ಶ್ರೀರಘೂತ್ತಮರಂಘ್ರಿ ರಾಜೀವಯುಗ್ಮದಲಿ ankita prasannashreenivasa raghuttama teertha stutih

..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ರಘೂತ್ತಮ ತೀರ್ಥರ ಚರಿತ್ರೆ


ಶ್ರೀ ರಘೂತ್ತಮರಂಘ್ರಿ ರಾಜೀವಯುಗ್ಮದಲಿ

ಶಿರಬಾಗಿ ಶರಣಾದೆ ಧನ್ಯನಾದೆ

ಶ್ರೀರಾಮಚಂದ್ರನ ಪೂರ್ಣಾನುಗ್ರಹ ಪೂರ್ಣ

ಪಾತ್ರರು ಎಮ್ಮ ಪಾಲಿಸುವ ಕರುಣಾಳು ಪ


ಶ್ರೀ ಹಂಸ ಲಕ್ಷ್ಮೀಶ ಪರಮಾತ್ಮ ಸರ್ವೇಶ

ಬ್ರಹ್ಮ ಸನಕಾದಿಗಳ ಗುರುಪರಂಪರೆಯ

ಬ್ರಹ್ಮಪದ ಐದುವ ಶ್ರೀ ಆನಂದತೀರ್ಥರ

ನೀರ್ರುಹ ಚರಣಂಗಳಲ್ಲಿ ಶರಣಾದೆ 1

ಪಂಕೇರುಹನಾಭ ನರಹರಿಮಾಧವ

ಅಕ್ಷೋಭ್ಯ ಜಯತೀರ್ಥ ವಿದ್ಯಾಧಿರಾಜ

ವಾಗ್ವಜ್ರ ರಾಜೇಂದ್ರ ಕವಿವರ ಕವೀಂದ್ರ

ವಾಗೀಶ ಶ್ರೀ ರಾಮಚಂದ್ರರಿಗೆ ಶರಣು 2

ಶ್ರೀ ರಾಮಚಂದ್ರರ ಕರಜರು ಈರ್ವರಿಗೂ

ಎರಡನೇಯವರು ವಿದ್ಯಾನಿಧಿಯ ಹಸ್ತ

ಅರವಿಂದೋತ್ಪನ್ನ ರಘುನಾಥರಿಗೆ ನಮೋ ಎಂಬೆ

ಸೂರಿವರ ರಘುವರ್ಯರಲ್ಲಿ ಶರಣಾದೆ 3

ರಘುವರ್ಯ ಗುರುರಾಜ ಕರಕಮಲ ಸಂಜಾತ

ರಘೂತ್ತಮ ತೀರ್ಥರ ಚರಣಕಾನಮಿಪೆ

ಅಗಣಿತ ಗುಣಾಂಬುಧಿ ಅಘದೂರ ರಘುಪತಿಯ

ಹೃದ್ಗುಹಾ ಒಳಹೊರಗೆ ಕಾಂಬುವಧೀರ 4

ರಾಮಚಂದ್ರಾಚಾರ್ಯ ನಾಮ ಬಾಲಕನು

ಬ್ರಹ್ಮಚಾರಿಯು ಧೃಢÀವ್ರತನು ಹರಿಭಕ್ತ

ಸುಮನೋಹರಮೂರ್ತೇ ಗುಣಗುಣಾಲಂಕೃತನು

ಈ ಮಹಾವೇದಾಂತ ಪೀಠಕ್ಕೆ ಅರ್ಹ 5

ತಮ್ಮ ಮಠ ಶಿಷ್ಯರಲು ಮಾಧ್ವ ಸಜ್ಜನರಲ್ಲೂ

ಸುಮಹಾಪಂಡಿತರು ಇರುತಿದ್ದರೂನು

ಈ ಮಹಾ ಪುರುಷ ಬಾಲನೇ ತಕ್ಕವನೆಂದು

ನೇಮಿಸಿದರು ಪೀಠಕ್ಕೆ ರಘುವರ್ಯ ಗುರುವು 6

ರಘೂತ್ತಮತೀರ್ಥ ನಾಮದಿ ತುರೀಯಾಶ್ರಮ

ರಘುವರ್ಯರೀ ರಾಮಚಂದ್ರಗೆ ಇತ್ತು

ರಾಘವನ ಪೂಜಾದಿ ಸಂಸ್ಥಾನ ಅಧಿಕಾರ

ನಿಗಮಾಂತ ಗುರುಗಳು ನಿಯಮನ ಮಾಡಿದರು 8

ವೇದವೇದಾಂತ ಸಚ್ಛಾಸ್ತ್ರ ಪಂಡಿತನು

ವಿದ್ಯಾರ್ಥಿ ಬಹುಮಂದಿಗೆ ಪಾಠ ಪೇಳುವ

ವಿದ್ವಾಂಸ ಓರ್ವನ್ನ ರಘುವರ್ಯ ತೀರ್ಥರು

ವಿದ್ಯೆ ಕಲಿಸಲು ಏರ್ಪಾಡು ಮಾಡಿದರು 9

ಶೇಷಪ್ಪನಾಯಕರ ಮಕ್ಕಳು ಈರ್ವರಲಿ

ಜ್ಯೇಷ್ಠ ಪುತ್ರನು ವಿದ್ವಾಂಸರಲಿ ಪ್ರಮುಖ

ಶಿಷ್ಯರೂ ಬಹು ಜನರು ಈತನಿಗೆ ಉಂಟು

ಭೂಷಣವೆಂದೆನಿಸಿದನು ಮಾಧ್ವ ಸಮೂಹಕ್ಕೆ 10

ಸಾವಿರದ ನಾನ್ನೂರು ಎಪ್ಪತ್ತ ಒಂಭತ್ತು

ಸಂವತ್ಸರದಲಿ ಶಾಲಿವಾಹನದಿ

ದಿವಸ ತದಿಗೆ ಕೃಷ್ಣ ಜ್ಯೇಷ್ಠ ಪಿಂಗಳದಿ

ಶ್ರೀವರನಪುರಕೆ ತೆರಳಿದರು ರಘುವರ್ಯರು 11

ದಯಾಳು ರಘುವರ್ಯರು ಸಮಾಧಿಸ್ಥರಾಗಲು

ಬಾಲ್ಯಾವಸ್ಥೆಯಲಿ ಇದ್ದ ರಘೂತ್ತಮರು

ವಿದ್ಯಾವ್ಯಾಸಂಗ ಗುರು ನಿಯಮನದಂತೇಯೆ

ಗೈಯಲಿ ಪೋದರು ಆ ವಿದ್ವಾಂಸನಲ್ಲಿ 12

ಮಣೂರು ಎಂದ್ಹೆಸರು ಉಳ್ಳ ಆ ಊರಲ್ಲಿ

ಘನ ವಿದ್ವನ್ಮಣಿಯಲ್ಲಿ ಕಲಿಯುವಾಗ

ಧನವಂತ ಊರು ನಾಯಕ ರಘೂತ್ತಮರಲ್ಲಿ

ಬಿನ್ನೈಸಿದ ಭೋಜನಕೆ ಬರಬೇಕೆಂದು 13

ಸ್ವಾಮಿಗಳಿಗೆ ಪಾಠ ಹೇಳುವ ವಿಪ್ರನೂ

ಆ ಮನೆಯಲಿ ಊಟಕ್ಕೆ ಬಂದಿದ್ದ

ನೇಮ ಆಹ್ನೀಕ ಮುಗಿಸಿ ಬರಲಿಕ್ಕೇ

ತಾಮಸವು ಆಯಿತು ವಿಲಂಬವು ಸ್ವಲ್ಪ 14

ಸ್ವಾಮಿಗಳ ಬಾಲ್ಯತ್ವ ವಿದ್ಯಾರ್ಥಿತ್ವವು

ಆ ಮನೆಯಲಿ ಗೃಹಸ್ಥನನ್ನೂ ವಿಪ್ರನನ್ನೂ ಮೋಹಿಸಿತು

ತಮ್ಮ ಯೋಗ್ಯತೆ ಸ್ಥಾನ ಮರೆತು ಗರ್ವದಿ ವಿಪ್ರ

ಸ್ವಾಮಿಗಳ ಲೆಕ್ಕಿಸದೆ ಕುಳಿತನು ಭೋಜನಕೆ 15

ಅಂದು ರಾತ್ರಿಸ್ವಪ್ನದಲಿ ರಘುವರ್ಯ ಗುರುಗಳು

ಬಂದು ಪೇಳಿದರ್ತಮ್ಮ ಪ್ರೇಮಿಶಿಷ್ಯರಿಗೆ

ಇಂದಿನಾರಭ್ಯ ಪಾಠವ ನಿಲಿಸು ವಿಪ್ರನಲಿ

ಕುಂದು ಇಲ್ಲದೆ ಹೇಳುವೆ ನೀನೇವೆ 16

ಈ ರೀತಿ ಸ್ವಪ್ನವು ಆಗೇ ರಘೂತ್ತಮರು

ವಿಪ್ರನಲಿ ಪಾಠಕ್ಕೆ ಪೋಗುವುದು ತೊರೆದು

ಆ ಪಂಡಿತವರ್ಯರಿಗಿಂತ ಉತ್ತಮ ರೀತಿ

ತಾಪೇಳಿದರು ಪಾಠ ಮಠದಿ ಶಿಷ್ಯರಿಗೆ 17

ಗುರುಗಳಲಿ ಹರಿ ಇಷ್ಟ ಗುರುದ್ವಾರ ಒಲಿವನು

ಗುರು ಅನುಗ್ರಹ ಇದ್ದರೇ ಹರಿ ಅನುಗ್ರಹ

ಗುರು ಪ್ರಸಾದವ ಪಡೆದ ಶ್ರೀ ರಘೂತ್ತಮರಿಗೆ

ಶಾಸ್ತ್ರ ಜ್ಞಾನವು ಪ್ರಜ್ವಲಿಸಿತು ಪೂರ್ಣದಲಿ 18

ಜಾತಾಪರೋಕ್ಷಿಗಳು ದೇವತಾಂಶರಿಗೇವೆ

ಜ್ಞಾತವಾಗುವ ಪದ ವಾಕ್ಯದ ತಾತ್ಪರ್ಯ

ಈ ದೇವತಾಂಶ ಶ್ರೀ ರಘೂತ್ತಮ ಗುರುವರರು

ಸಂದೇಹವಿಲ್ಲದೆ ತಿಳಿದು ಬೋಧಿಸಿದರು 19

ತನ್ನಲ್ಲಿ ವ್ಯಾಸಂಗ ಪೂರೈಸದ ಬಾಲ

ಏನು ಪಾಠವ ಹೇಳೇ ಶಕ್ತನೆಂದರಿಯೆ

ಕಾಣದೆ ಮರೆಯಾಗಿ ನಿಂತು ಆ ವಿಪ್ರ

ಶ್ರವಣ ಮಾಡಿದ ಗುರುಗಳು ಬೋಧಿಸುವುದು 20

ಸಂದಿಗ್ಧÀ್ದವಾಗಿ ತನಗಿದ್ದ ವಿಷಯಗಳನ್ನೂ

ಅದ್ಭ್ಬುತ ರೀತಿಯಲಿ ಅನಾಯಾಸವಾಗಿ

ಅತಿವಿಶದದಿ ರಘೂತ್ತಮರು ಪೇಳಲು ಕೇಳಿ

ಬಂದು ಮುಂದೆ ನಿಂತು ನಮಿಸಿದನು ವಿಪ್ರ 21

ತಾನು ಮಾಡಿದ ಉದಾಸೀನ ಅಪರಾಧಗಳ

ಘನ ದಯದಿ ಕ್ಷಮಿಸಬೇಕೆಂದು ಬೇಡುತ್ತ

ತನು ದಂಡವತ್ ಭುವಿಯಲಿ ಬಿದ್ದು ನಮಿಸಿದನು

ದೀನದಯಾಳು ಗುರು ಅಭಯ ನೀಡಿದರು 22

ದಿಗ್ವಿಜಯ ಮಾಡುತ್ತ ಅಲ್ಲಲ್ಲಿ ದುರ್ಮತ

ದುರ್ವಾದಿಗಳನ್ನು ಖಂಡಿಸಿ ಸಿದ್ಧಾಂತ

ತತ್ವಬೋಧಿಸಿ ಜಗತ್ ಪ್ರಖ್ಯಾತರಾದರು

ಶಾಶ್ವತ ನಿಜಸುಖ ಮಾರ್ಗದರ್ಶಕರು 23

ರಘುವರ್ಯ ಗುರುಗಳು ನೇರಲ್ಲು ಸ್ವಪ್ನದಲು

ರಘೂತ್ತಸಮರಿಗೆ ಪೇಳಿದ ಪ್ರಕಾರ

ದಿಗ್ವಿಜಯ ಸಮಯದಿ ಸಂಸ್ಥಾನಕ್ಕೆ ಭೂಷಣ

ಬಗೆಬಗೆ ವಸ್ತು ಪರಿವಾರ ಸೇರಿಸಿದರು 24

ವೇದಾಂತ ಸಾಮ್ರಾಜ್ಯ ರಾಜಗುರುರಾಜರು

ಹಸ್ತಿ ಘೋಟಕ ಕೊಂಬು ವಾದ್ಯಮೇಳಗಳು

ಸುತ್ತಲೂ ವಿದ್ವಜ್ಜನ ವೇದಘೋಷದ ಮಧ್ಯ

ಮುತ್ತು ಪಲ್ಲಕ್ಕಿಯೊಳು ಕುಳಿತರು ದೇವರ ಸಹ 25

ಪೋದ ಕಡೆಗಳಲಿ ದಿಗ್ವಿಜಯ ರಾಮಾರ್ಚನೆ

ವಿದ್ವಜ್ಜನ ಸಭೆ ವಾಕ್ಯಾರ್ಥ ಪಾಠ

ಸಿದ್ಧಾಂತ ಸ್ಥಾಪನೆ ದುರ್ಮತ ನಿರಾಸವು

ಸಾಧು ಸಜ್ಜನರ ಉದ್ಧಾರ ಪ್ರತಿದಿನವು 26

ಬಾದರಾಯಣ ನಿರ್ಣೀತ ರೀತಿಯಲಿ

ಮಧ್ವರಾಯರು ಬರೆದ ಗ್ರಂಥಗಳಿಗೆ

ಅದ್ಬುತ ಟೀಕೆ ಜಯತೀರ್ಥರು ಮಾಡಿಹರು

ಸದ್ಭಾವ ಬೋಧವು ರಘೂತ್ತಮರ ರಚನೆ 27

ಟೀಕಾ ಭಾವಬೋಧರು ಎಂದು ಪ್ರಖ್ಯಾತ

ರಘೂತ್ತಮರ ಎಲ್ಲೆಲ್ಲೂ ವಿದ್ವಜ್ಜನರು

ನಗರ ಪಟ್ಟಣ ಗ್ರಾಮ ನಾಯಕರು ಪ್ರಮುಖರು

ಸ್ವಾಗತ ಅರ್ಪಿಸಿ ಪೂಜಿಸಿದರು ಮುದದಿ 28

ಪುಟ್ಟಿದಾರಭ್ಯ ಹರಿ ಪಾದ ಕಮಲದಿ ಮನ

ಇಟ್ಟು ರಘುವರ್ಯರು ಕೊಟ್ಟ ಸಂಸ್ಥಾನ

ಪಟ್ಟ ಆಳಿ ಸರ್ವೋತ್ತಮನನ್ನ ಸೇವಿಸಿ

ಶ್ರೇಷ್ಠತಮ ಸುಖಪ್ರದ ಮಾರ್ಗ ತೋರಿಹರು 29

ಹದಿನೈದು ನೂರು ಹದಿನೇಳು ಶಕ ಮನ್ಮಥ

ಶುದ್ಧ ಏಕಾದಶಿ ಪೌಷ್ಯದಲಿ ಹರಿಯ

ಪಾದಸೇರಿದರು ಸಂಸ್ಥಾನ ಆಡಳಿತ

ವೇದವ್ಯಾಸ ತೀರ್ಥರು ಮಾಡಲಿಕೆ ಬಿಟ್ಟು 30

ಮತ್ತೊಂದು ಅಂಶದಲಿ ವೃಂದಾವನದೊಳು

ಹತ್ತಾವತಾರ ಹರಿ ದ್ಯಾನಪರರಿಹರು

ಭಕ್ತರು ಅಲ್ಲಲ್ಲಿ ಅರ್ಚಿಸಿ ಸೇವಿಸುವ

ಮೃತ್ತಿಕೆಯಲ್ಲು ಸಹ ಇದ್ದು ಪಾಲಿಪರು 31

ವೃಂದಾವನ ತಿರುಕೋಯಿಲೂರ್ ಮಣಂಪೂಂಡಿ

ಎಂದು ಕರೆಯಲ್ಪಡುವ ಗ್ರಾಮದಲಿ ಇಹುದು

ಇಂದುಶೇಖರ ಚಾಪದಿಂದ ಉದಿಸಿದ ಪುಣ್ಯ

ನದಿಯು ಹರಿಯುತ್ತೆ ಮಜ್ಜನವು ಅಘಹರವು 32

ಮಂದಜಾಸನ ಮೊದಲಾದ ಸುರವೃಂದ

ವಂದಿತ ರಮಾಪತಿಯು ರಘೂತ್ತಮಾಂತಸ್ಥ

ವೃಂದಾವನದಿ ಗುರು ಹರಿಭಕ್ತಿ ಪೂರ್ವಕದಿ

ಬಂದು ಸೇವಿಪರಿಗೆ ವಾಂಛಿತÀಗಳೀವ 33

ಗಾಳಿ ಬಿಸಿಲು ಮಳೆ ಮಂಜುಗಳ ಲೆಕ್ಕಿಸದೆ

ಮಾಲೋಲನ ಧ್ಯಾನಿಸುತ ವೃಂದಾವನದೊಳು

ಕುಳಿತಿಹರು ಪರಮ ಕಾರುಣಿಕ ಈ ಗುರುಗಳು

ಪಾಲಿಸುತಿಹರು ಎಮ್ಮ ಅನುಗಾಲ ದಯದಿ 34

ವೃಂದಾವನ ದರ್ಶನ ತೀರ್ಥ ನಮಸ್ಕಾರ

ಪ್ರದಕ್ಷಿಣೆ ಅರ್ಚನೆ ಹಸ್ತೋದಕ

ವಂದನೆ ಸೇವಾದಿಗಳ ಮಾಳ್ಪ ಸಜ್ಜನರ

ಕುಂದು ಕೊರತೆಗಳಳಿವ ಇಷ್ಟಾರ್ಥ ಪ್ರದರು 35

ಪಿಲ್ಲಿ ಶೂನ್ಯಾದಿ ವಾಮಾಚಾರ ಪೀಡೆಗಳು

ಗಾಳಿದುಷ್ಟಗ್ರಹ ಪೈಶಾಚಾದಿಗಳು

ಕಳವಳಿಕೆ ಬುದ್ದಿಭ್ರಮೆ ವ್ಯಾಧಿದಾರಿದ್ರ್ಯಾದಿ

ಎಲ್ಲ ದೋಷಗಳನ್ನ ಪರಿಹರಿಸುವರು 36

ಸವೈರಾಗ್ಯ ಜ್ಞಾನವ ಭಕುತಿ ಅಪರೋಕ್ಷವ

ಸೇವಿಪ ಯೋಗ್ಯರಿಗೆ ಒದಗಿಸಿ ಉದ್ಧರಿಸಿ

ಸರ್ವವಿಧದಲು ಭಾಗ್ಯ ಆಯುಷ್ಯ ಆರೋಗ್ಯ

ಈವರು ಭಕ್ತಯಲಿ ಸ್ಮರಿಸಿ ವಂದಿಪರ್ಗೆ 37

ಉತ್ತಮ ತರಗತಿ ದೇವತಾಂಶರು ಇವರು

ಮಧ್ವಮತದುಗಾಬ್ಧಿ ಪೂರ್ಣಚಂದ್ರ

ಹತ್ತು ತಿಂಗಳು ಹೊತ್ತು ಹೆತ್ತ ಉತ್ತಮ ಸಾಧ್ವಿ

ಮಾತೆಯ ಭಾಗ್ಯ ಏನೆಂಬೆ ಇಂಥವರ 38

ಸೂರಿ ಸುರವರ ಶ್ರೀ ರಘೂತ್ತಮರ ಚರಣದಲಿ

ಶರಣಾದೆ ಎನ್ನಯ ಎನ್ನಸೇರಿದವರ

ಪರಿಪರಿ ಪೀಡೆಗಳ ಪಾಪಗಳ ಅಳಿದು

ಕಾರುಣ್ಯ ಔದರ್ಯದಿ ಪಾಲಿಸುವರು 39

ಸರಿದ್ವರ ಪಿನಾಕಿನಿಯಲಿ ಕೇಶವ ಜಗವ

ಈರಡಿಯಲಿ ಅಳೆವ ತ್ರಿವಿಕ್ರಮನು ಶಿರಿಯು

ಇರುತಿಹರು ಹನುಮ ಶಿವಸ್ಕಂಧ ತೀರಗಳಲಿ

ಶರಣೆಂಬೆ ಇವರೆಲ್ಲರ್ಗು ಶ್ರೀ ರಘೂತ್ತಮರಿಗೂ 40

ಕಮಲಭವಪಿತ `ಶ್ರೀ ಪ್ರಸನ್ನ ಶ್ರೀನಿವಾಸ '

ಕಮಲಾಯುತ ವಿಶ್ವ ರೂಪ ತ್ರಿವಿಕ್ರಮಗೂ

ಭೀಮ ಶಿವಸ್ಕಂಧರಿಗು ಪ್ರಿಯತಮ ರಘೂತ್ತಮರ

ಈ ಮಂಗಳ ಚರಿತ ಶ್ರೀ ಕೃಷ್ಣಾರ್ಪಿತವು 41 ಪ

|| ಇತಿ ಶ್ರೀ ರಘೂತ್ತಮ ತೀರ್ಥ ಚರಿತ್ರೆ ಸಂಪೂರ್ಣಂ ||

***

 ಪ್ರಸನ್ನ ಶ್ರೀನಿವಾಸದಾಸರು ಶ್ರೀ ಪ್ರಸನ್ನ ರಘೂತ್ತಮ ತೀರ್ಥರ ಚರಿತ್ರೆ

ಶ್ರೀ ರಘೂತ್ತಮರಂಘ್ರಿ ರಾಜೀವಯುಗ್ಮದಲಿಶಿರಬಾಗಿ ಶರಣಾದೆ ಧನ್ಯನಾದೆಶ್ರೀರಾಮಚಂದ್ರನ ಪೂರ್ಣಾನುಗ್ರಹ ಪೂರ್ಣಪಾತ್ರರು ಎಮ್ಮ ಪಾಲಿಸುವ ಕರುಣಾಳು ಪಶ್ರೀ ಹಂಸ ಲಕ್ಷ್ಮೀಶ ಪರಮಾತ್ಮ ಸರ್ವೇಶಬ್ರಹ್ಮ ಸನಕಾದಿಗಳ ಗುರುಪರಂಪರೆಯಬ್ರಹ್ಮಪದ ಐದುವ ಶ್ರೀ ಆನಂದತೀರ್ಥರನೀರ್ರುಹ ಚರಣಂಗಳಲ್ಲಿ ಶರಣಾದೆ 1

ಪಂಕೇರುಹನಾಭ ನರಹರಿಮಾಧವಅಕ್ಷೋಭ್ಯ ಜಯತೀರ್ಥ ವಿದ್ಯಾಧಿರಾಜವಾಗ್ವಜ್ರ ರಾಜೇಂದ್ರ ಕವಿವರ ಕವೀಂದ್ರವಾಗೀಶಶ್ರೀ ರಾಮಚಂದ್ರರಿಗೆ ಶರಣು2

ಶ್ರೀ ರಾಮಚಂದ್ರರ ಕರಜರು ಈರ್ವರಿಗೂಎರಡನೇಯವರು ವಿದ್ಯಾನಿಧಿಯಹಸ್ತಅರವಿಂದೋತ್ಪನ್ನ ರಘುನಾಥರಿಗೆ ನಮೋ ಎಂಬೆಸೂರಿವರ ರಘುವರ್ಯರಲ್ಲಿ ಶರಣಾದೆ 3

ರಘುವರ್ಯ ಗುರುರಾಜ ಕರಕಮಲ ಸಂಜಾತರಘೂತ್ತಮ ತೀರ್ಥರ ಚರಣಕಾನಮಿಪೆಅಗಣಿತಗುಣಾಂಬುಧಿ ಅಘದೂರ ರಘುಪತಿಯಹೃದ್ಗುಹಾ ಒಳಹೊರಗೆ ಕಾಂಬುವಧೀರ 4

ರಾಮಚಂದ್ರಾಚಾರ್ಯ ನಾಮ ಬಾಲಕನುಬ್ರಹ್ಮಚಾರಿಯು ಧೃಢÀವ್ರತನು ಹರಿಭಕ್ತಸುಮನೋಹರಮೂರ್ತೇ ಗುಣಗುಣಾಲಂಕೃತನುಈ ಮಹಾವೇದಾಂತ ಪೀಠಕ್ಕೆ ಅರ್ಹ 5

ತಮ್ಮ ಮಠ ಶಿಷ್ಯರಲು ಮಾಧ್ವ ಸಜ್ಜನರಲ್ಲೂಸುಮಹಾಪಂಡಿತರು ಇರುತಿದ್ದರೂನುಈ ಮಹಾ ಪುರುಷ ಬಾಲನೇ ತಕ್ಕವನೆಂದುನೇಮಿಸಿದರು ಪೀಠಕ್ಕೆ ರಘುವರ್ಯ ಗುರುವು 6

ರಘೂತ್ತಮತೀರ್ಥ ನಾಮದಿ ತುರೀಯಾಶ್ರಮರಘುವರ್ಯರೀ ರಾಮಚಂದ್ರಗೆ ಇತ್ತುರಾಘವನ ಪೂಜಾದಿ ಸಂಸ್ಥಾನ ಅಧಿಕಾರನಿಗಮಾಂತ ಗುರುಗಳು ನಿಯಮನ ಮಾಡಿದರು 8

ವೇದವೇದಾಂತ ಸಚ್ಛಾಸ್ತ್ರ ಪಂಡಿತನುವಿದ್ಯಾರ್ಥಿ ಬಹುಮಂದಿಗೆ ಪಾಠ ಪೇಳುವವಿದ್ವಾಂಸ ಓರ್ವನ್ನ ರಘುವರ್ಯ ತೀರ್ಥರುವಿದ್ಯೆಕಲಿಸಲು ಏರ್ಪಾಡು ಮಾಡಿದರು9

ಶೇಷಪ್ಪನಾಯಕರ ಮಕ್ಕಳು ಈರ್ವರಲಿಜ್ಯೇಷ್ಠ ಪುತ್ರನು ವಿದ್ವಾಂಸರಲಿ ಪ್ರಮುಖಶಿಷ್ಯರೂ ಬಹು ಜನರು ಈತನಿಗೆ ಉಂಟುಭೂಷಣವೆಂದೆನಿಸಿದನು ಮಾಧ್ವ ಸಮೂಹಕ್ಕೆ 10

ಸಾವಿರದ ನಾನ್ನೂರು ಎಪ್ಪತ್ತ ಒಂಭತ್ತುಸಂವತ್ಸರದಲಿ ಶಾಲಿವಾಹನದಿದಿವಸ ತದಿಗೆ ಕೃಷ್ಣ ಜ್ಯೇಷ್ಠ ಪಿಂಗಳದಿಶ್ರೀವರನಪುರಕೆ ತೆರಳಿದರು ರಘುವರ್ಯರು 11

ದಯಾಳು ರಘುವರ್ಯರು ಸಮಾಧಿಸ್ಥರಾಗಲುಬಾಲ್ಯಾವಸ್ಥೆಯಲಿ ಇದ್ದ ರಘೂತ್ತಮರುವಿದ್ಯಾವ್ಯಾಸಂಗಗುರುನಿಯಮನದಂತೇಯೆಗೈಯಲಿ ಪೋದರು ಆ ವಿದ್ವಾಂಸನಲ್ಲಿ 12

ಮಣೂರು ಎಂದ್ಹೆಸರುಉಳ್ಳಆ ಊರಲ್ಲಿಘನವಿದ್ವನ್ಮಣಿಯಲ್ಲಿ ಕಲಿಯುವಾಗಧನವಂತ ಊರುನಾಯಕರಘೂತ್ತಮರಲ್ಲಿಬಿನ್ನೈಸಿದ ಭೋಜನಕೆ ಬರಬೇಕೆಂದು 13

ಸ್ವಾಮಿಗಳಿಗೆ ಪಾಠ ಹೇಳುವ ವಿಪ್ರನೂಆ ಮನೆಯಲಿ ಊಟಕ್ಕೆ ಬಂದಿದ್ದನೇಮ ಆಹ್ನೀಕ ಮುಗಿಸಿ ಬರಲಿಕ್ಕೇತಾಮಸವು ಆಯಿತು ವಿಲಂಬವು ಸ್ವಲ್ಪ 14

ಸ್ವಾಮಿಗಳ ಬಾಲ್ಯತ್ವ ವಿದ್ಯಾರ್ಥಿತ್ವವುಆ ಮನೆಯಲಿ ಗೃಹಸ್ಥನನ್ನೂ ವಿಪ್ರನನ್ನೂ ಮೋಹಿಸಿತುತಮ್ಮ ಯೋಗ್ಯತೆ ಸ್ಥಾನ ಮರೆತು ಗರ್ವದಿವಿಪ್ರಸ್ವಾಮಿಗಳ ಲೆಕ್ಕಿಸದೆ ಕುಳಿತನು ಭೋಜನಕೆ 15

ಅಂದು ರಾತ್ರಿಸ್ವಪ್ನದಲಿ ರಘುವರ್ಯ ಗುರುಗಳುಬಂದು ಪೇಳಿದರ್ತಮ್ಮ ಪ್ರೇಮಿಶಿಷ್ಯರಿಗೆಇಂದಿನಾರಭ್ಯ ಪಾಠವ ನಿಲಿಸು ವಿಪ್ರನಲಿಕುಂದುಇಲ್ಲದೆ ಹೇಳುವೆ ನೀನೇವೆ16

ಈ ರೀತಿ ಸ್ವಪ್ನವು ಆಗೇ ರಘೂತ್ತಮರುವಿಪ್ರನಲಿ ಪಾಠಕ್ಕೆ ಪೋಗುವುದು ತೊರೆದುಆ ಪಂಡಿತವರ್ಯರಿಗಿಂತ ಉತ್ತಮ ರೀತಿತಾಪೇಳಿದರು ಪಾಠ ಮಠದಿ ಶಿಷ್ಯರಿಗೆ 17

ಗುರುಗಳಲಿಹರಿಇಷ್ಟ ಗುರುದ್ವಾರ ಒಲಿವನುಗುರುಅನುಗ್ರಹ ಇದ್ದರೇಹರಿಅನುಗ್ರಹಗುರುಪ್ರಸಾದವ ಪಡೆದ ಶ್ರೀ ರಘೂತ್ತಮರಿಗೆಶಾಸ್ತ್ರ ಜ್ಞಾನವು ಪ್ರಜ್ವಲಿಸಿತು ಪೂರ್ಣದಲಿ 18

ಜಾತಾಪರೋಕ್ಷಿಗಳು ದೇವತಾಂಶರಿಗೇವೆಜ್ಞಾತವಾಗುವ ಪದ ವಾಕ್ಯದ ತಾತ್ಪರ್ಯಈ ದೇವತಾಂಶ ಶ್ರೀ ರಘೂತ್ತಮ ಗುರುವರರುಸಂದೇಹವಿಲ್ಲದೆ ತಿಳಿದು ಬೋಧಿಸಿದರು 19

ತನ್ನಲ್ಲಿ ವ್ಯಾಸಂಗ ಪೂರೈಸದ ಬಾಲಏನು ಪಾಠವ ಹೇಳೇ ಶಕ್ತನೆಂದರಿಯೆಕಾಣದೆ ಮರೆಯಾಗಿ ನಿಂತು ಆವಿಪ್ರಶ್ರವಣ ಮಾಡಿದ ಗುರುಗಳು ಬೋಧಿಸುವುದು 20

ಸಂದಿಗ್ಧÀ್ದವಾಗಿ ತನಗಿದ್ದ ವಿಷಯಗಳನ್ನೂಅದ್ಭ್ಬುತ ರೀತಿಯಲಿ ಅನಾಯಾಸವಾಗಿಅತಿವಿಶದದಿ ರಘೂತ್ತಮರು ಪೇಳಲುಕೇಳಿಬಂದು ಮುಂದೆ ನಿಂತು ನಮಿಸಿದನುವಿಪ್ರ21

ತಾನು ಮಾಡಿದ ಉದಾಸೀನ ಅಪರಾಧಗಳಘನದಯದಿ ಕ್ಷಮಿಸಬೇಕೆಂದು ಬೇಡುತ್ತತನು ದಂಡವತ್ ಭುವಿಯಲಿ ಬಿದ್ದು ನಮಿಸಿದನುದೀನದಯಾಳುಗುರುಅಭಯನೀಡಿದರು22

ದಿಗ್ವಿಜಯ ಮಾಡುತ್ತ ಅಲ್ಲಲ್ಲಿ ದುರ್ಮತದುರ್ವಾದಿಗಳನ್ನು ಖಂಡಿಸಿ ಸಿದ್ಧಾಂತತತ್ವಬೋಧಿಸಿ ಜಗತ್ ಪ್ರಖ್ಯಾತರಾದರುಶಾಶ್ವತ ನಿಜಸುಖ ಮಾರ್ಗದರ್ಶಕರು 23

ರಘುವರ್ಯ ಗುರುಗಳು ನೇರಲ್ಲು ಸ್ವಪ್ನದಲುರಘೂತ್ತಸಮರಿಗೆ ಪೇಳಿದ ಪ್ರಕಾರದಿಗ್ವಿಜಯ ಸಮಯದಿ ಸಂಸ್ಥಾನಕ್ಕೆ ಭೂಷಣಬಗೆಬಗೆ ವಸ್ತು ಪರಿವಾರ ಸೇರಿಸಿದರು 24

ವೇದಾಂತ ಸಾಮ್ರಾಜ್ಯ ರಾಜಗುರುರಾಜರುಹಸ್ತಿಘೋಟಕ ಕೊಂಬು ವಾದ್ಯಮೇಳಗಳುಸುತ್ತಲೂ ವಿದ್ವಜ್ಜನ ವೇದಘೋಷದ ಮಧ್ಯಮುತ್ತು ಪಲ್ಲಕ್ಕಿಯೊಳು ಕುಳಿತರು ದೇವರ ಸಹ 25

ಪೋದ ಕಡೆಗಳಲಿ ದಿಗ್ವಿಜಯ ರಾಮಾರ್ಚನೆವಿದ್ವಜ್ಜನ ಸಭೆ ವಾಕ್ಯಾರ್ಥ ಪಾಠಸಿದ್ಧಾಂತ ಸ್ಥಾಪನೆ ದುರ್ಮತ ನಿರಾಸವುಸಾಧು ಸಜ್ಜನರ ಉದ್ಧಾರ ಪ್ರತಿದಿನವು 26

ಬಾದರಾಯಣನಿರ್ಣೀತ ರೀತಿಯಲಿಮಧ್ವರಾಯರು ಬರೆದ ಗ್ರಂಥಗಳಿಗೆಅದ್ಬುತ ಟೀಕೆ ಜಯತೀರ್ಥರು ಮಾಡಿಹರುಸದ್ಭಾವ ಬೋಧವು ರಘೂತ್ತಮರ ರಚನೆ 27

ಟೀಕಾ ಭಾವಬೋಧರು ಎಂದು ಪ್ರಖ್ಯಾತರಘೂತ್ತಮರ ಎಲ್ಲೆಲ್ಲೂ ವಿದ್ವಜ್ಜನರುನಗರಪಟ್ಟಣ ಗ್ರಾಮ ನಾಯಕರು ಪ್ರಮುಖರುಸ್ವಾಗತ ಅರ್ಪಿಸಿ ಪೂಜಿಸಿದರು ಮುದದಿ 28

ಪುಟ್ಟಿದಾರಭ್ಯಹರಿಪಾದಕಮಲದಿ ಮನಇಟ್ಟು ರಘುವರ್ಯರು ಕೊಟ್ಟ ಸಂಸ್ಥಾನಪಟ್ಟ ಆಳಿ ಸರ್ವೋತ್ತಮನನ್ನ ಸೇವಿಸಿಶ್ರೇಷ್ಠತಮ ಸುಖಪ್ರದಮಾರ್ಗತೋರಿಹರು29

ಹದಿನೈದು ನೂರು ಹದಿನೇಳು ಶಕ ಮನ್ಮಥಶುದ್ಧ ಏಕಾದಶಿ ಪೌಷ್ಯದಲಿ ಹರಿಯಪಾದಸೇರಿದರು ಸಂಸ್ಥಾನ ಆಡಳಿತವೇದವ್ಯಾಸ ತೀರ್ಥರು ಮಾಡಲಿಕೆ ಬಿಟ್ಟು 30

ಮತ್ತೊಂದು ಅಂಶದಲಿ ವೃಂದಾವನದೊಳುಹತ್ತಾವತಾರಹರಿದ್ಯಾನಪರರಿಹರುಭಕ್ತರು ಅಲ್ಲಲ್ಲಿ ಅರ್ಚಿಸಿ ಸೇವಿಸುವಮೃತ್ತಿಕೆಯಲ್ಲು ಸಹ ಇದ್ದು ಪಾಲಿಪರು 31

ವೃಂದಾವನ ತಿರುಕೋಯಿಲೂರ್ ಮಣಂಪೂಂಡಿಎಂದು ಕರೆಯಲ್ಪಡುವ ಗ್ರಾಮದಲಿ ಇಹುದುಇಂದುಶೇಖರ ಚಾಪದಿಂದ ಉದಿಸಿದ ಪುಣ್ಯನದಿಯು ಹರಿಯುತ್ತೆ ಮಜ್ಜನವು ಅಘಹರವು 32

ಮಂದಜಾಸನಮೊದಲಾದ ಸುರವೃಂದವಂದಿತ ರಮಾಪತಿಯು ರಘೂತ್ತಮಾಂತಸ್ಥವೃಂದಾವನದಿಗುರುಹರಿಭಕ್ತಿ ಪೂರ್ವಕದಿಬಂದು ಸೇವಿಪರಿಗೆ ವಾಂಛಿತÀಗಳೀವ 33

ಗಾಳಿ ಬಿಸಿಲು ಮಳೆ ಮಂಜುಗಳ ಲೆಕ್ಕಿಸದೆಮಾಲೋಲನ ಧ್ಯಾನಿಸುತ ವೃಂದಾವನದೊಳುಕುಳಿತಿಹರುಪರಮಕಾರುಣಿಕಈ ಗುರುಗಳುಪಾಲಿಸುತಿಹರು ಎಮ್ಮಅನುಗಾಲದಯದಿ34

ವೃಂದಾವನ ದರ್ಶನ ತೀರ್ಥ ನಮಸ್ಕಾರಪ್ರದಕ್ಷಿಣೆ ಅರ್ಚನೆ ಹಸ್ತೋದಕವಂದನೆ ಸೇವಾದಿಗಳ ಮಾಳ್ಪ ಸಜ್ಜನರಕುಂದುಕೊರತೆಗಳಳಿವ ಇಷ್ಟಾರ್ಥ ಪ್ರದರು35

ಪಿಲ್ಲಿ ಶೂನ್ಯಾದಿ ವಾಮಾಚಾರ ಪೀಡೆಗಳುಗಾಳಿದುಷ್ಟಗ್ರಹ ಪೈಶಾಚಾದಿಗಳುಕಳವಳಿಕೆ ಬುದ್ದಿಭ್ರಮೆ ವ್ಯಾಧಿದಾರಿದ್ರ್ಯಾದಿಎಲ್ಲ ದೋಷಗಳನ್ನ ಪರಿಹರಿಸುವರು 36

ಸವೈರಾಗ್ಯ ಜ್ಞಾನವ ಭಕುತಿ ಅಪರೋಕ್ಷವಸೇವಿಪ ಯೋಗ್ಯರಿಗೆ ಒದಗಿಸಿ ಉದ್ಧರಿಸಿಸರ್ವವಿಧದಲು ಭಾಗ್ಯ ಆಯುಷ್ಯ ಆರೋಗ್ಯಈವರು ಭಕ್ತಯಲಿ ಸ್ಮರಿಸಿ ವಂದಿಪರ್ಗೆ 37

ಉತ್ತಮ ತರಗತಿ ದೇವತಾಂಶರು ಇವರುಮಧ್ವಮತದುಗಾಬ್ಧಿ ಪೂರ್ಣಚಂದ್ರಹತ್ತು ತಿಂಗಳು ಹೊತ್ತು ಹೆತ್ತ ಉತ್ತಮ ಸಾಧ್ವಿಮಾತೆಯ ಭಾಗ್ಯ ಏನೆಂಬೆ ಇಂಥವರ 38

ಸೂರಿಸುರವರ ಶ್ರೀ ರಘೂತ್ತಮರ ಚರಣದಲಿಶರಣಾದೆ ಎನ್ನಯ ಎನ್ನಸೇರಿದವರಪರಿಪರಿ ಪೀಡೆಗಳ ಪಾಪಗಳ ಅಳಿದುಕಾರುಣ್ಯ ಔದರ್ಯದಿ ಪಾಲಿಸುವರು 39

ಸರಿದ್ವರ ಪಿನಾಕಿನಿಯಲಿ ಕೇಶವ ಜಗವಈರಡಿಯಲಿ ಅಳೆವ ತ್ರಿವಿಕ್ರಮನು ಶಿರಿಯುಇರುತಿಹರು ಹನುಮ ಶಿವಸ್ಕಂಧ ತೀರಗಳಲಿಶರಣೆಂಬೆ ಇವರೆಲ್ಲರ್ಗು ಶ್ರೀ ರಘೂತ್ತಮರಿಗೂ 40

ಕಮಲಭವಪಿತ `ಶ್ರೀ ಪ್ರಸನ್ನ ಶ್ರೀನಿವಾಸ 'ಕಮಲಾಯುತವಿಶ್ವರೂಪತ್ರಿವಿಕ್ರಮಗೂಭೀಮ ಶಿವಸ್ಕಂಧರಿಗು ಪ್ರಿಯತಮ ರಘೂತ್ತಮರಈ ಮಂಗಳ ಚರಿತ ಶ್ರೀ ಕೃಷ್ಣಾರ್ಪಿತವು 41 
ಪ|| ಇತಿ ಶ್ರೀ ರಘೂತ್ತಮ ತೀರ್ಥ ಚರಿತ್ರೆ ಸಂಪೂರ್ಣಂ ||
********

No comments:

Post a Comment