Friday 27 December 2019

ವರದೇಂದ್ರ ತೀರ್ಥಾರ್ಯ ಗುರುವರರ ಪದಯುಗ್ಮ ankita prasannashreenivasa varadendra teertha stutih

 .. ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಶ್ರೀ ವರದೇಂದ್ರ ವಿಜಯ


ವರದೇಂದ್ರ ತೀರ್ಥಾರ್ಯ ಗುರುವರರ ಪದಯುಗ್ಮ |

ಸರಸೀರುಹದಲ್ಲಿ ಸತತ ನಾ ಶರಣಾದೆನು |

ವರ ಸಮೀರಗ ಕೃಷ್ಣ ರಾಮ ಹಯ ಮುಖವ್ಯಾಸ |

ನರಹರಿ ಪ್ರಿಯರಿವರು ಸಾಧುವರಪ್ರದರು ಪ

ರಂಗನ ಪಾದೋದಕವು ಸುಪವಿತ್ರ ತಮವೆಂದು

ಗಂಗೆಯನು ಶಿರದ ಮೇಲಿಟ್ಟುಕೊಂಡಿಹ ಶಿವನು |

ಲಿಂಗ ಮೂರುತಿ ಶಿವಗೆ ಸುಪೂರ್ಣಮತಿ ಗುರುವು

ಶಂಕೆ ಇಲ್ಲ ಬ್ರಹ್ಮಗುರು ಶಿವ ಶಿಷ್ಯ ಕೇಳಿ ಕೇನ 1

ರಜತ ಜಾಂಬೂನವ ತಾಮ್ರವÀನು ಮರಗದವ |

ವಜ್ರ ಮಾಣಿಕ್ಯವನು ತನ್ನ ಗರ್ಭದಲಿ ನಿಲ್ಲಿರಿಸಿ |

ದುರ್ಜನರಿಗೆ ಸುಲಭದಿ ಕಾಣಿಸದೆ ಈ ಕ್ಷೇತ್ರ |

ರಾಜಿಸುತೆ ರವಿ ಸೋಮ ತಾರೆಗಳ ಜ್ಯೋತಿಯಿಂದ 2

ರಾಘವ ಯಾದವ ವೇಂಕಟಧಾಮ ಹನುಮ ಭೀಮ |

ಈ ಗ್ರಾಮ ರಕ್ಷಣೆ ಮಾಡುತಿರೆ ಶಿವ ಜಪಿಸುವ |

ಅಘದೂರ ಗುಣನಿಧಿ ಸಮೀರಗ ಮಹಿದಾಸ - |

ನಿಗೆ ಪ್ರಿಯ ಬೃಹತಿ ಋಕ್ ಶ್ರೀ ವಿಷ್ಣು ಸಾಸಿರ ನಾಮ 3

ಈ ರೀತಿ ಬಹಿರ್ ಮುಖರ್ಗೆ ಪ್ರಿಯ ಲಿಂಗಸುಗೂರಲ್ಲಿ

ಸುರವೃಂದದವರು ಮರುದ್ಗಣದವರು ತೋರಿ |

ಇರುತಿದ್ದ ಕಾಲದಲಿ ವಿಜ್ಞಾನ ಭಕ್ತಿ ಯೋಗೀಶ |

ವರದೇಂದ್ರ ತೀರ್ಥ ಗುರುರಾಜ್ ವಿಜಯ ಮಾಡಿದರು 4

ಜಗನ್ನಾಥದಾಸರ ಸಖ ಶಿಷ್ಯರಾಗಿಹ ನಮ್ಮ |

ಜಗಖ್ಯಾತ ಪ್ರಾಣೇಶದಾಸರು ಶ್ರೀ ಸ್ವಾಮಿಗಳಿಗೆ |

ಸ್ವಾಗತ ವಿನಯ ಪೂರ್ವಕ ನೀಡಲು ಮುದದಿಂದ |

ಶ್ರೀಗಳು ತಮ್ಮ ದಿಗ್ವಿಜಯ ತಾತ್ಪರ್ಯ ಹೇಳಿದರು 5


ತಮ್ಮ ದ್ವಿತೀಯ ಸವನ ಮಧ್ಯ ಬ್ಯಾಗವಟ್ಟಿ ನರ - |

ಸಿಂಹ ದಾಸರ ಯುವ ಆಟೋಪ ವಿದ್ಯಾವಾನ್ ಸುಗುಣಿ

ಶ್ರೀ ಮಾಧ್ವ ಬಾದರಾಯಣಿ ಪರ ವಿದ್ಯಾಗ್ರಂಥಗಳ |

ತಮ್ಮಲ್ಲಿ ಸಂಯಕ್ ಓದಿ ಈಗಲೂ ಬರುವ ಆಗಾಗ 6

ಈ ತಮ್ಮ ಪ್ರಿಯ ಶ್ರೀನಿವಾಸಾಚಾರ್ಯರ ಪ್ರೀತಿ ಪಾತ್ರ |

ಸಾತ್ವಿಕ ಶಿಷ್ಯರಲಿ ಶ್ರೀಮಠ ಬಂದದ್ದು ಸರಿಯೇ |

ಇಂದಿಲ್ಲಿ ರಾಮ ವೇದವ್ಯಾಸ ಪೂಜೆ ಚರಿಸುವುದು |

ಮುಂದಿಲ್ಲಿ ತತ್ತ ್ವವಾದ ಸಜ್ಞಾನ ವೃದ್ಧಿಯಾಗೆ ಹೇತು 7

ಪಾದಪೂಜೆ ಸಭ್ಯರಿಂದಲಿ ಗುರು ಮರ್ಯಾದೆಗಳು |

ಇಂಥ ಕಾರ್ಯಗಳ ನಿಮಿತ್ತ ವರದೇಂದ್ರ ಗುರುವು |

ಮತ್ತು ಪೇಳುವ ಮಾತು ಪೂಜಾನಂತರ ಎನ್ನುತಲೆ |

ಬಂದು ನೆರೆದ ಜನರಲಿ ಗಮನ ಬೀರಿದರು 8

ಲಿಂಗಸುಗೂರು ಮತ್ತು ಸುತ್ತ ಮುತ್ತ ಗ್ರಾಮ ಜನರ |

ಕಂಗಳಿಗೆ ಹಬ್ಬವು ಮನಸ್ಸಿಗಾನಂದಕರವು |

ಭಂಗಾರ ನವರತ್ನ ಮಂಟಪದಿ ಯತಿ ಕೃತ್ ಪೂಜೆ |

ಶೃಂಗಾರ ದೀಪಾವಳಿ ತೋರಣ ವಿಪ್ರಜನ ಗುಂಪು 9

ಮನೋದಾರ ವಾಕ್ಚತುರ ಶ್ರದ್ಧಾಳು ಭಕ್ತಿ ಭರಿತ |

ಪ್ರಾಣೇಶದಾಸಾರ್ಯರ ಸೇವೆ ಮೆಚ್ಚಿದರು ಶ್ರೀಗಳು |

ಅನಪೇಕ್ಷರು ಸ್ವಯಂ ತಾನೇ ವದಾನ್ಯರು ಕೇಳ್ದರು |

ಮನೆ ಸ್ಥಳ ತಮಗೆ ದಾನಮಾಡೆಂದು ದಾಸರನ್ನ 10

ಜ್ಞಾನಿವರ ಪ್ರಾಣೇಶದಾಸರಾಯರು ಎಂಥ ಭಾಗ್ಯ |

ಎನ್ನುತ ಅನವಶ್ಯ ಹೆಚ್ಚು ಸೊಲ್ಲು ವೆಚ್ಚ ಮಾಡದೇ |

ದಾನ ಮಾಡಿದರು ರಾಮಕೃಷ್ಣ ವ್ಯಾಸಾರ್ಪಣವೆಂದು |

ಕನಿಕರದಿ ಸ್ವೀಕರಿಸಬೇಕೆಂದು ಬೇಡಿದರು 11

ಜ್ಞಾನಿಕುಲ ತಿಲಕರು ದೇವ ಸ್ವಭಾವರು ನಮ್ಮ |

ಘೃಣಿ ಶ್ರೀ ವರದೇಂದ್ರ ತೀರ್ಥಾರ್ಯ ಗುರು ಮಹಂತರು |

ದಾನ ಸ್ವೀಕರಿಸಿ ಬಹ್ವನುಗ್ರಹಿಸಿ ಹೊರಟರು |

ಇನ್ನುಳಿದ ತಮ್ಮ ವಿಜಯ ಯಾತ್ರೆ ಕ್ಷೇತ್ರಗಳಿಗೆ 12

`ಶ್ರದ್ಧ ಯಾಧೇಯಂ' ಎಂಬ ಶೃತಿ ಶಾಸನ ಅನುಸಾರ |

ಈ ದಾನ ದಾಸರು ಮಾಡಿದ್ದು ಲೋಕ ಕೊಂಡಾಡುತಿದೆ |

ಅಂದಿನಾರಭ್ಯ ಲಿಂಗಸುಗೂರು ಪ್ರಾಣೇಶದಾಸರ |

ಮಂದಿರ ವ್ಯಾಸದಾಸ ತತ್ತ ್ವವಾದ ಪೋಷಕವಾಯ್ತು 13

ಶ್ರೀ ಮಠದ ಆಡಳಿತ ಪಾಠ ಪ್ರವಚನ ಇಂಥ |

ತಮ್ಮ ಸ್ಥಾನಾಶ್ರಮ ಕೆಲಸ ಮಾಡುತ ಬಹುದಿನ |

ತಮಗೆ ದತ್ತವಾದ ಲಿಂಗಸುಗೂರು ಭೂಮಿಯನ್ನು |

ಸುಮ್ಮನೆ ಖಾಲಿಯಾಗಿ ಇಟ್ಟು ಪುಣೆಯಲ್ಲಿ ಗುರು ನಿಂತರು 14

ನಿಯಮೇನ ಹರಿಪುರ ಯೈದಿ ಪುಣೆ ಮಠದಲ್ಲಿ |

ದಿವ್ಯ ವೃಂದಾವನಸ್ಥರಾಗಿ ದಾಸರಿಗೆ ಸ್ವಪ್ನದಿ |

ದಯಪಾಲಿಸಿದರು ತುಳಸಿ ವೃಕ್ಷ ಕುರುಹಲ್ಲಿ |

ಶ್ರೀಯಃ ಪತಿಯ ಧ್ಯಾನಿಸುತ ಬಂದಿಹೆವು ವಾಸಕ್ಕೆ 15

ಶ್ರೀ ಸ್ವಾಮಿಗಳ ಸ್ವಾಪ್ನ ಆಜ್ಞಾನುಸಾರವಾಗಿಯೇ | ವಿ

ಶ್ವಾಸ ಉಕ್ಕುತ ಪ್ರಾಣೇಶದಾಸರು ವೃಂದಾವನವ |

ಹಸನಾಗಿ ನಿರ್ಮಾಣ ಮಾಡಿ ಯೋಗ್ಯದಿನ ವಿಹಿತ |

ಸಂಸ್ಕಾರದಿಂದ ಆವಾಹನ ಪ್ರತಿಷ್ಠೆ ಮಾಡಿದರು 16

ಮಹಾನ್ ವರದೇಂದ್ರರು ಸ್ವಾಪ್ನ ಸಂದೇಶ ಪ್ರಕಾರವೇ |

ಮಹಾನುಗ್ರಹ ಮಾಡಿ ತಾವೇ ಒಂದಂಶದಿ ಕುಳಿತು |

ಅಹರಹ ಬಂದು ಸೇವಿಸುವರ್ಗೆ ವಾಂಛಿತವಿತ್ತು |

ಸಲಹುತಲಿಹರು ಅದ್ಯಾಪಿ ಲಿಂಗಸುಗೂರಲ್ಲಿ 17

ಈ ಪುಣ್ಯಶ್ಲೊಕ ವರದೇಂದ್ರ ತೀರ್ಥರಲಿ ತೀರ್ಥತ್ವ |

ಇಪ್ಪುದರಿಂ ಪವಿತ್ರಕರ ಇವರ ಪಾದಸೇವಾ |

ಪಾಪಹಾರಿಣಿ ಪುಣ್ಯದಾ ತುಳಸಿಯ ಮೂಲದಲಿ |

ಸುಪವಿತ್ರಕರ ಸರ್ವತೀರ್ಥಗಳಿಪ್ಪುದು ಸಿದ್ಧ 18

ಉರುಗಾಯ ಧನ್ವಂತರಿಯ ಆನಂದ ಬಾಷ್ಪಬಿಂದು |

ಆಪ್ರಾಕೃತವಾದ್ದು ಹಸ್ತಸ್ಥ ಪ್ರಾಕೃತ ಪೀಯೂಷದೋಳ್ |

ಪ್ರಕ್ಷಿಪ್ತವಾಗಿ ಧರೆಯಲ್ಲಿ ತುಳಸೀ ವೃಕ್ಷವಾಯ್ತು |

ಹರಿ ಕೊಟ್ಟ ವರದಿಂ ವೃಂದಾದೇವಿ ತುಳಸಿಕಟ್ಟೆ 19

ದೋಷೋಜ್ಜಿತ ಗುಣ ಪೂರ್ಣ ಶ್ರೀಹರಿ ತುಳಸೀನಾಮ |

ಲಕ್ಷ್ಮೀಸಮೇತ ಆ ವೃಕ್ಷ ಮಧ್ಯದಿ ಅಮೃತಾಂಧಸ್ |

ಶ್ರೇಷ್ಠರ ಸಹ ಇರುವಂತೆ ವರದೇಂದ್ರರೋಳ್ ಛಂದಸಾಂ |

ವೃಷಭ ಶ್ರೀಯಕ್ ಸಪರಿವಾರ ಜ್ವಲಿಸುತಿಹನು 20

ಉತ್ತಮ ಶ್ಲೋಕ ಪರಮೈಶ್ವರ್ಯ ರೂಪ ವಿಷ್ಣುವೇ ಅಧಿ |

ಅಂದರೆ ಸರ್ವೋತ್ತಮ ಇಂಥಾ ಗುಣಜ್ಞಾನ ಪುಂಜವು |

ವೇದಗಳು ತುಳಸ್ಯಾಗ್ರದಿ ಇರುವಂತೆ ಇವರೋಳ್ |

ಮೇಧಾ ಪ್ರೌಢಿಮೆ ಇಹುದು ಮಧ್ವಸ್ಥವ್ಯಾಸಾನುಗ್ರಹ 21

ಸುಮನಸ ವಂದಿತ ತುಳಸೀನಾಮಕ ಲಕ್ಷ್ಮಿಯು |

ಸನ್ಮಂತ್ರವು ದ್ವಾದಶಾಕ್ಷರದಿ ಇರುವುದು ಅದು |

ನಿರ್ಮಮ ನಿರ್ಮತ್ಸರ ಯೋಗ್ಯ ಅಧಿಕಾರಿಗಳಿಂದ |

ರಮಾಮಾಧವ ಪ್ರೀತಿಗೆ ಜಪ್ಯ ಇಹಪರೇಷ್ಟಲಾಭ 22

ಬಾದರಾಯಣ ತಾನೇ ನುಡಿಸಿದೀ ನುಡಿಗಳ್ ಭಕ್ತಿ | -

ಯಿಂದೋದಿ ಕೇಳ್ವ್‍ರ್ಗೆ ವರದೇಂದ್ರ ಮಧ್ವಸ್ಥ ಅಜನ - |

ಪಿತ `ಶ್ರೀ ಪ್ರಸನ್ನ ಶ್ರೀನಿವಾಸ' ಶ್ರೀಶ ತುಳಸೀಶ |

ವಿತ್ತ ವಿದ್ಯಾಯುರಾರೋಗ್ಯಜ್ಞಾನ ಭಕ್ತ್ಯಾದಿಗಳೀವ 23 ಪ


|| ಇತಿ ಶ್ರೀ ವರದೇಂದ್ರ ವಿಜಯ ಸಂಪೂರ್ಣಂ ||

***

ಪ್ರಸನ್ನ ಶ್ರೀನಿವಾಸದಾಸರು  ಶ್ರೀ ವರದೇಂದ್ರವಿಜಯ

ವರದೇಂದ್ರ ತೀರ್ಥಾರ್ಯ ಗುರುವರರ ಪದಯುಗ್ಮ |
ಸರಸೀರುಹದಲ್ಲಿ ಸತತ ನಾ ಶರಣಾದೆನು |
ವರಸಮೀರಗ ಕೃಷ್ಣ ರಾಮಹಯಮುಖವ್ಯಾಸ |
ನರಹರಿ ಪ್ರಿಯರಿವರು ಸಾಧುವರಪ್ರದರು ಪರಂಗನ ಪಾದೋದಕವು ಸುಪವಿತ್ರ ತಮವೆಂದುಗಂಗೆಯನು ಶಿರದ ಮೇಲಿಟ್ಟುಕೊಂಡಿಹ ಶಿವನು |
ಲಿಂಗ ಮೂರುತಿ ಶಿವಗೆ ಸುಪೂರ್ಣಮತಿ ಗುರುವುಶಂಕೆಇಲ್ಲ ಬ್ರಹ್ಮಗುರು ಶಿವ ಶಿಷ್ಯಕೇಳಿಕೇನ1

ರಜತ ಜಾಂಬೂನವ ತಾಮ್ರವÀನು ಮರಗದವ |
ವಜ್ರಮಾಣಿಕ್ಯವನು ತನ್ನ ಗರ್ಭದಲಿ ನಿಲ್ಲಿರಿಸಿ |
ದುರ್ಜನರಿಗೆ ಸುಲಭದಿ ಕಾಣಿಸದೆ ಈ ಕ್ಷೇತ್ರ |
ರಾಜಿಸುತೆರವಿಸೋಮತಾರೆಗಳ ಜ್ಯೋತಿಯಿಂದ2

ರಾಘವ ಯಾದವ ವೇಂಕಟಧಾಮ ಹನುಮ ಭೀಮ |
ಈ ಗ್ರಾಮ ರಕ್ಷಣೆ ಮಾಡುತಿರೆ ಶಿವ ಜಪಿಸುವ |
ಅಘದೂರ ಗುಣನಿಧಿ ಸಮೀರಗ ಮಹಿದಾಸ - |
ನಿಗೆ ಪ್ರಿಯಬೃಹತಿಋಕ್ ಶ್ರೀ ವಿಷ್ಣು ಸಾಸಿರ ನಾಮ3

ಈ ರೀತಿ ಬಹಿರ್ ಮುಖರ್ಗೆ ಪ್ರಿಯ ಲಿಂಗಸುಗೂರಲ್ಲಿ
ಸುರವೃಂದದವರು ಮರುದ್ಗಣದವರು ತೋರಿ |
ಇರುತಿದ್ದ ಕಾಲದಲಿವಿಜ್ಞಾನಭಕ್ತಿ ಯೋಗೀಶ |
ವರದೇಂದ್ರ ತೀರ್ಥ ಗುರುರಾಜ್ವಿಜಯಮಾಡಿದರು4

ಜಗನ್ನಾಥದಾಸರಸಖಶಿಷ್ಯರಾಗಿಹ ನಮ್ಮ |
ಜಗಖ್ಯಾತ ಪ್ರಾಣೇಶದಾಸರು ಶ್ರೀ ಸ್ವಾಮಿಗಳಿಗೆ |
ಸ್ವಾಗತ ವಿನಯ ಪೂರ್ವಕ ನೀಡಲು ಮುದದಿಂದ |
ಶ್ರೀಗಳು ತಮ್ಮ ದಿಗ್ವಿಜಯ ತಾತ್ಪರ್ಯ ಹೇಳಿದರು 5

ತಮ್ಮದ್ವಿತೀಯಸವನ ಮಧ್ಯ ಬ್ಯಾಗವಟ್ಟಿನರ- |
ಸಿಂಹ ದಾಸರ ಯುವ ಆಟೋಪ ವಿದ್ಯಾವಾನ್ 
ಸುಗುಣಿಶ್ರೀ ಮಾಧ್ವ ಬಾದರಾಯಣಿಪರವಿದ್ಯಾಗ್ರಂಥಗಳ |
ತಮ್ಮಲ್ಲಿ ಸಂಯಕ್ ಓದಿ ಈಗಲೂ ಬರುವ ಆಗಾಗ 6

ಈ ತಮ್ಮ ಪ್ರಿಯ ಶ್ರೀನಿವಾಸಾಚಾರ್ಯರ ಪ್ರೀತಿ ಪಾತ್ರ |
ಸಾತ್ವಿಕ ಶಿಷ್ಯರಲಿ ಶ್ರೀಮಠ ಬಂದದ್ದು ಸರಿಯೇ |
ಇಂದಿಲ್ಲಿ ರಾಮ ವೇದವ್ಯಾಸ ಪೂಜೆ ಚರಿಸುವುದು |
ಮುಂದಿಲ್ಲಿ ತತ್ತ ್ವವಾದ ಸಜ್ಞಾನ ವೃದ್ಧಿಯಾಗೆಹೇತು7

ಪಾದಪೂಜೆ ಸಭ್ಯರಿಂದಲಿಗುರುಮರ್ಯಾದೆಗಳು |
ಇಂಥ ಕಾರ್ಯಗಳ ನಿಮಿತ್ತ ವರದೇಂದ್ರ ಗುರುವು |
ಮತ್ತು ಪೇಳುವ ಮಾತು ಪೂಜಾನಂತರ ಎನ್ನುತಲೆ |
ಬಂದು ನೆರೆದ ಜನರಲಿಗಮನಬೀರಿದರು8

ಲಿಂಗಸುಗೂರು ಮತ್ತು ಸುತ್ತ ಮುತ್ತ ಗ್ರಾಮ ಜನರ |
ಕಂಗಳಿಗೆ ಹಬ್ಬವು ಮನಸ್ಸಿಗಾನಂದಕರವು |
ಭಂಗಾರ ನವರತ್ನ ಮಂಟಪದಿ ಯತಿ ಕೃತ್ ಪೂಜೆ |
ಶೃಂಗಾರ ದೀಪಾವಳಿ ತೋರಣ ವಿಪ್ರಜನ ಗುಂಪು 9

ಮನೋದಾರ ವಾಕ್ಚತುರ ಶ್ರದ್ಧಾಳು ಭಕ್ತಿ ಭರಿತ |
ಪ್ರಾಣೇಶದಾಸಾರ್ಯರ ಸೇವೆ ಮೆಚ್ಚಿದರು ಶ್ರೀಗಳು |
ಅನಪೇಕ್ಷರು ಸ್ವಯಂ ತಾನೇ ವದಾನ್ಯರು ಕೇಳ್ದರು |
ಮನೆ ಸ್ಥಳ ತಮಗೆ ದಾನಮಾಡೆಂದು ದಾಸರನ್ನ 10

ಜ್ಞಾನಿವರ ಪ್ರಾಣೇಶದಾಸರಾಯರು ಎಂಥ ಭಾಗ್ಯ |
ಎನ್ನುತ ಅನವಶ್ಯ ಹೆಚ್ಚುಸೊಲ್ಲುವೆಚ್ಚ ಮಾಡದೇ |
ದಾನ ಮಾಡಿದರು ರಾಮಕೃಷ್ಣ ವ್ಯಾಸಾರ್ಪಣವೆಂದು |
ಕನಿಕರದಿ ಸ್ವೀಕರಿಸಬೇಕೆಂದು ಬೇಡಿದರು 11

ಜ್ಞಾನಿಕುಲ ತಿಲಕರು ದೇವ ಸ್ವಭಾವರು ನಮ್ಮ |
ಘೃಣಿ ಶ್ರೀ ವರದೇಂದ್ರ ತೀರ್ಥಾರ್ಯಗುರುಮಹಂತರು |
ದಾನ ಸ್ವೀಕರಿಸಿ ಬಹ್ವನುಗ್ರಹಿಸಿ ಹೊರಟರು |
ಇನ್ನುಳಿದ ತಮ್ಮವಿಜಯಯಾತ್ರೆ ಕ್ಷೇತ್ರಗಳಿಗೆ12`

ಶ್ರದ್ಧ ಯಾಧೇಯಂ' ಎಂಬ ಶೃತಿ ಶಾಸನ ಅನುಸಾರ |
ಈ ದಾನ ದಾಸರು ಮಾಡಿದ್ದು ಲೋಕ ಕೊಂಡಾಡುತಿದೆ |
ಅಂದಿನಾರಭ್ಯ ಲಿಂಗಸುಗೂರು ಪ್ರಾಣೇಶದಾಸರ |
ಮಂದಿರ ವ್ಯಾಸದಾಸ ತತ್ತ ್ವವಾದ ಪೋಷಕವಾಯ್ತು 13

ಶ್ರೀ ಮಠದ ಆಡಳಿತ ಪಾಠ ಪ್ರವಚನ ಇಂಥ |
ತಮ್ಮ ಸ್ಥಾನಾಶ್ರಮ ಕೆಲಸ ಮಾಡುತ ಬಹುದಿನ |
ತಮಗೆ ದತ್ತವಾದ ಲಿಂಗಸುಗೂರು ಭೂಮಿಯನ್ನು |
ಸುಮ್ಮನೆ ಖಾಲಿಯಾಗಿ ಇಟ್ಟು ಪುಣೆಯಲ್ಲಿಗುರುನಿಂತರು14

ನಿಯಮೇನ ಹರಿಪುರ ಯೈದಿ ಪುಣೆ ಮಠದಲ್ಲಿ |
ದಿವ್ಯ ವೃಂದಾವನಸ್ಥರಾಗಿ ದಾಸರಿಗೆ ಸ್ವಪ್ನದಿ |
ದಯಪಾಲಿಸಿದರು ತುಳಸಿ ವೃಕ್ಷ ಕುರುಹಲ್ಲಿ |
ಶ್ರೀಯಃ ಪತಿಯ ಧ್ಯಾನಿಸುತ ಬಂದಿಹೆವು ವಾಸಕ್ಕೆ 15

ಶ್ರೀ ಸ್ವಾಮಿಗಳ ಸ್ವಾಪ್ನ ಆಜ್ಞಾನುಸಾರವಾಗಿಯೇ | 
ವಿಶ್ವಾಸಉಕ್ಕುತ ಪ್ರಾಣೇಶದಾಸರು ವೃಂದಾವನವ |
ಹಸನಾಗಿ ನಿರ್ಮಾಣ ಮಾಡಿ ಯೋಗ್ಯದಿನ ವಿಹಿತ |
ಸಂಸ್ಕಾರದಿಂದ ಆವಾಹನ ಪ್ರತಿಷ್ಠೆ ಮಾಡಿದರು 16

ಮಹಾನ್ ವರದೇಂದ್ರರು ಸ್ವಾಪ್ನ ಸಂದೇಶ ಪ್ರಕಾರವೇ |
ಮಹಾನುಗ್ರಹ ಮಾಡಿ ತಾವೇ ಒಂದಂಶದಿ ಕುಳಿತು |
ಅಹರಹ ಬಂದು ಸೇವಿಸುವರ್ಗೆ ವಾಂಛಿತವಿತ್ತು |
ಸಲಹುತಲಿಹರು ಅದ್ಯಾಪಿ ಲಿಂಗಸುಗೂರಲ್ಲಿ 17

ಈ ಪುಣ್ಯಶ್ಲೊಕ ವರದೇಂದ್ರ ತೀರ್ಥರಲಿ ತೀರ್ಥತ್ವ |
ಇಪ್ಪುದರಿಂ ಪವಿತ್ರಕರ ಇವರ ಪಾದಸೇವಾ |
ಪಾಪಹಾರಿಣಿ ಪುಣ್ಯದಾ ತುಳಸಿಯ ಮೂಲದಲಿ |
ಸುಪವಿತ್ರಕರ ಸರ್ವತೀರ್ಥಗಳಿಪ್ಪುದು ಸಿದ್ಧ 18

ಉರುಗಾಯ ಧನ್ವಂತರಿಯ ಆನಂದ ಬಾಷ್ಪಬಿಂದು |
ಆಪ್ರಾಕೃತವಾದ್ದು ಹಸ್ತಸ್ಥಪ್ರಾಕೃತಪೀಯೂಷದೋಳ್ |
ಪ್ರಕ್ಷಿಪ್ತವಾಗಿ ಧರೆಯಲ್ಲಿ ತುಳಸೀ ವೃಕ್ಷವಾಯ್ತು |
ಹರಿಕೊಟ್ಟ ವರದಿಂ ವೃಂದಾದೇವಿ ತುಳಸಿಕಟ್ಟೆ19

ದೋಷೋಜ್ಜಿತಗುಣಪೂರ್ಣ ಶ್ರೀಹರಿ ತುಳಸೀನಾಮ |
ಲಕ್ಷ್ಮೀಸಮೇತ ಆ ವೃಕ್ಷ ಮಧ್ಯದಿ ಅಮೃತಾಂಧಸ್ |
ಶ್ರೇಷ್ಠರ ಸಹ ಇರುವಂತೆ ವರದೇಂದ್ರರೋಳ್ ಛಂದಸಾಂ |
ವೃಷಭಶ್ರೀಯಕ್ ಸಪರಿವಾರ ಜ್ವಲಿಸುತಿಹನು20

ಉತ್ತಮ ಶ್ಲೋಕ ಪರಮೈಶ್ವರ್ಯರೂಪವಿಷ್ಣುವೇಅಧಿ|
ಅಂದರೆ ಸರ್ವೋತ್ತಮ ಇಂಥಾ ಗುಣಜ್ಞಾನ ಪುಂಜವು |
ವೇದಗಳು ತುಳಸ್ಯಾಗ್ರದಿ ಇರುವಂತೆ ಇವರೋಳ್ |
ಮೇಧಾ ಪ್ರೌಢಿಮೆ ಇಹುದು ಮಧ್ವಸ್ಥವ್ಯಾಸಾನುಗ್ರಹ 21

ಸುಮನಸವಂದಿತ ತುಳಸೀನಾಮಕ ಲಕ್ಷ್ಮಿಯು |
ಸನ್ಮಂತ್ರವು ದ್ವಾದಶಾಕ್ಷರದಿ ಇರುವುದು ಅದು |
ನಿರ್ಮಮ ನಿರ್ಮತ್ಸರ ಯೋಗ್ಯ ಅಧಿಕಾರಿಗಳಿಂದ |
ರಮಾಮಾಧವ ಪ್ರೀತಿಗೆ ಜಪ್ಯ ಇಹಪರೇಷ್ಟಲಾಭ 22

ಬಾದರಾಯಣತಾನೇ ನುಡಿಸಿದೀ ನುಡಿಗಳ್ ಭಕ್ತಿ |-
ಯಿಂದೋದಿ ಕೇಳ್ವ್‍ರ್ಗೆ ವರದೇಂದ್ರ ಮಧ್ವಸ್ಥ ಅಜನ - |
ಪಿತ `ಶ್ರೀ ಪ್ರಸನ್ನ ಶ್ರೀನಿವಾಸ' ಶ್ರೀಶ ತುಳಸೀಶ |
ವಿತ್ತವಿದ್ಯಾಯುರಾರೋಗ್ಯ ಜ್ಞಾನ ಭಕ್ತ್ಯಾದಿಗಳೀವ23 

ಪ|| ಇತಿ ಶ್ರೀ ವರದೇಂದ್ರವಿಜಯಸಂಪೂರ್ಣಂ ||
********

No comments:

Post a Comment