ಪ್ರಾರ್ಥಿಸುವೆ ರಘುನಾಥತೀರ್ಥರ
ಪ್ರಾರ್ಥಿಸುವೆ ಪುರುಷಾರ್ಥಪ್ರದರ ಪ
ಸಾರ್ಥಕವಾಗಲು ಪಾರ್ಥಿವ ದೇಹವು
ಜಗದಲಿ ಕೀರ್ತಿಗಳಿಸಿದವರ ಅ.ಪ
ನೇದೃಶಂ ಸ್ಥಲಿಮಲಂ ಶಮಲಘ್ನಂ
ನಾಸ್ಯತೀರ್ಥಂ ಸಲಿಲಸ್ಯಸಮಂ ವಾಃ
ನಾಸ್ತಿ ವಿಷ್ಣುಂ ಸದೃಶಂ ನನುದೈವಂ
ಸತ್ಯ ವಚನಗಳಿವೆಂದು ಸೂಚಿಸುತ
ಆಸ್ತಿಕ ಜನಮನ ರಂಜಕ ತ್ರಿಮಕುಟ
ಕ್ಷೇತ್ರನಿವಾಸ ಪವಿತ್ರತಮ ಚರಿತರ 1
ವ್ಯಾಸರಾಜ ಗುರುವರ್ಯ ರಚಿತ ತಾ
ತ್ಪರ್ಯ ಚಂದ್ರಿಕಾ ಗ್ರಂಥವನು
ವಾಸುದೇವ ನರಹರ್ಯನುಗ್ರಹದಿ
ಉರ್ವರಿತವ ವಿರಚಿಸಿ ಮೆರೆದ
ಶೇಷಚಂದ್ರಿಕಾಚಾರ್ಯರೆಂಬೊ ಗುರು
ವ್ಯಾಸರಾಜರ ಪರಾವತಾರರ 2
ರಾಗ ದ್ವೇಷಗಳ ತೊರೆಯುತ ತ
ನ್ನನು ರಾಗದಿಂದ ಭಜಿಸುವ ಜನಕೆ
ಭೂಗಕಲ್ಪ ತರುವಂತೆ ಅರಿಷ್ಠವ ನೀಗಿ
ಸಾಧು ಭೋಗಗಳೀವ
ಯೋಗಿಜನ ಮನೋನಯನ ಪ್ರಸನ್ನ ಶ್ರೀ
ರಾಘವೇಂದ್ರರಪರಾವತಾರರ 3
***
ಶ್ರೀ ರಘುನಾಥತೀರ್ಥರು (ಶೇಷಚಂದ್ರಿಕಾಚಾರ್ಯರು)
ಶ್ರೀ ಶೇಷಚಂದ್ರಿಕಾಚಾರ್ಯರ ಕುರಿತಾದ
ಶ್ರೀ ವಿದ್ಯಾಪ್ರಸನ್ನ ತೀರ್ಥರ ರಚನೆ
ಪ್ರಾರ್ಥಿಸುವೆ ರಘುನಾಥತೀರ್ಥರ
ಪ್ರಾರ್ಥಿಸುವೆ ಪುರುಷಾರ್ಥಪ್ರದರ || ಪ||
ಸಾರ್ಥಕವಾಗಲು ಪಾರ್ಥಿವ ದೇಹವು
ಪಾರ್ಥಸಖನೆ ಸರ್ವೋತ್ತಮನೆಂದು ಸಮರ್ಥಿಸಿ
ಜಗದಲಿ ಕೀರ್ತಿಗಳಿಸಿದವರ ||ಅ ಪ||
ನೇದೃಶಂ ಸ್ಥಲಮಲಂ ಶಮಲಘ್ನಂ
ನಾಸ್ಯ ತೀರ್ಥಸಲಿಲಸ್ಯ ಸಮಂ ವಾಃ|
ನಾಸ್ತಿ ವಿಷ್ಣು ಸದೃಶಂ ನನು ದೈವಂ
ನಾಸ್ಮದುಕ್ತಿ ಸದೃಶಂ ಹಿತರೂಪಂ
ಸತ್ಯ ವಚನಗಳಿವೆಂದು ಸೂಚಿಸುತ
ಆಸ್ತಿಕ ಜನಮನ ರಂಜಕ ತ್ರಿಮಕುಟ
ಕ್ಷೇತ್ರನಿವಾಸ ಪವಿತ್ರತಮ ಚರಿತರ | 1 |
ವ್ಯಾಸರಾಜ ಗುರುವರ್ಯ ರಚಿತ ತಾ
ತ್ಪರ್ಯ ಚಂದ್ರಿಕಾ ಗ್ರಂಥವನು
ವಾಸುದೇವ ನರಹರ್ಯನುಗ್ರಹದಿ
ಉರ್ವರಿತವ ವಿರಚಿಸಿ ಮೆರೆದ
ಶೇಷಚಂದ್ರಿಕಾಚಾರ್ಯರೆಂಬೊ ಗುರು
ವ್ಯಾಸರಾಜರ ಅಪರಾವತಾರರ ||2||
ರಾಗ ದ್ವೇಷಗಳ ತೊರೆಯುತ ತನ್ನನು ರಾಗದಿಂದ ಭಜಿಸುವ ಜನಕೆ
ಭೂಗಕಲ್ಪ ತರುವಂತೆ ಅರಿಷ್ಠವ ನೀಗಿ
ಸಾಧು ಭೋಗಗಳೀವ
ಯೋಗಿಜನ ಮನೋನಯನ ಪ್ರಸನ್ನ ಶ್ರೀ
ರಾಘವೇಂದ್ರರಪರಾವತಾರರ ||3||
*****
No comments:
Post a Comment