Wednesday, 11 December 2019

ಎದ್ದಿರ್ಯಾ ನೀವಿನ್ನೆದ್ದಿರ್ಯಾ ಎದ್ದೆವು ನಾವಿನ್ನು ಸದ್ಗುರು ankita mahipati

by ಮಹಿಪತಿದಾಸರು
ರಾಗ ಭೂಪಾಲಿ ( ಜೋಗಿಯಾ) ದೀಪಚಂದಿ ತಾಳ

ಎದ್ದಿರ್ಯಾ ? ನೀವಿನ್ನೆದ್ದಿರ್ಯಾ ? 
ಎದ್ದೆವು ನಾವಿನ್ನು ಸದ್ಗುರು ಕೃಪೆಯಿಂದ ||ಧ್ರುವ ||

ಶುದ್ಧಿ ಮೆರೆದು ಭವನಿದ್ರಿಯಗಳದಿನ್ನೆದ್ದಿರ್ಯಾ ||೧||

ಕಾಯಮಂದಿರದೊಳು ಮಾಯಾಮುಸುಕು ತೆಗೆದಿನ್ನೆದ್ದಿರ್ಯಾ ||೨||

ಚೆನ್ನಾಗಿ ಮಲಗಿದ್ದ ಜನ್ಮಹಾಸಿಗಿ ಬಿಟ್ಟು ಇನ್ನೆದ್ದಿರ್ಯಾ ||೩||

ಮನದಲ್ಲಿ ಇನಕೋಟಿತೇಜನ ಕಾಣ್ವ್ಹಾಂಗೆ ಇನ್ನೆದ್ದಿರ್ಯಾ ||೪||

ಎದ್ದಿದ್ದರೆ ನೀವಿನ್ನು ಶುದ್ಧಬುದ್ಧರಾಗಿ ಇನ್ನೆದ್ದಿರ್ಯಾ ||೫||

ತನ್ನ ತಾ ತಿಳಿವ್ಹಾಂಗೆ ಕಣ್ದೆರೆದಿನ್ನು ಇನ್ನೆದ್ದಿರ್ಯಾ ||೬||

ದೀನ ಮಹಿಪತಿಸ್ವಾಮಿ ಮನೋಹರ ಮಾಡ್ವ್ಹಾಂಗ ||೭||
********

No comments:

Post a Comment