Saturday 28 December 2019

ಇಷ್ಟು ದಿನ ಇಂಥ ಸುಖ ಕಾಣಲಿಲ್ಲಕೃಷ್ಣ ಈ ದಿನ ankita indiresha

ಇಷ್ಟು ದಿನ ಇಂಥ ಸುಖ ಕಾಣಲಿಲ್ಲಕೃಷ್ಣ ಈ ದಿನ ನೋಡಿ ತುಷ್ಟನಾದೆನೊ ದೇವಾ ಪ

ಆಟಗಳು ಸುಖವಲ್ಲ ಕೃಷ್ಣ ನೋಟಗಳು ಸುಖವಲ್ಲಪಾಠಗಳು ಸುಖವಲ್ಲ ಕೂಟವಲ್ಲತೋಟದೊಳು ರವಿಸುತನ ಕೂಟದೊಳು ಗೋಪಿಯರಆಟಕದ ಕೊಳಲೂದೊ ನೋಟ ಸ್ಮರಣೆಗೆ ತರುವೆ 1

ಏನು ಸೌಂದರ್ಯವೊ ಕೃಷ್ಣ ಏನು ಸೌಭಾಗ್ಯವೊಧೇನುಪಾಲನ ನೋಟಕಾಶ್ಚರ್ಯವೊನಾನು ಒಲ್ಲೆನು ಸೀದಾ ಆಣೆ ಮಾಡುವೆನೀಗಧೇನು ಮುಖ ಸಮ ತೋರಿ ಧ್ಯಾನ ತಪ್ಪಿಸೋ ಜಗದಿ 2

ನಿಂದು ಕೊಳಲನು ಕರದಿ ಇಂದು ಬಾಯೊಳಗಿಟ್ಟುಮಂದಹಾಸವ ಮಾಡುತಿಂದಿರೇಶಕಂದರ್ಪಸಮರೂಪದಿಂದ ನೋಡುವೆನೀಗಸಿಂಧುನೊಳು ಮುಳುಗಿದೆನು ನಂದಬಾಲಕನೆ 3
*********

No comments:

Post a Comment