Friday, 27 December 2019

ಜಯ ಶ್ರೀಧರಾರಮಣ ಜಯ ಕೌಸ್ತುಭಾಭರಣ ankita tulasi

by ತುಳಸೀರಾಮದಾಸರು
ಜಯ ಶ್ರೀಧರಾರಮಣ ಜಯ ಕೌಸ್ತುಭಾಭರಣ ಪ

ಜಯ ದುರಿತನಿಧಿತರಣಜಯ ಪದ್ಮಚರಣಾ ಜಯಜಯಾ ಅ.ಪ

ಜಯಪುಂಡರೀಕಾಕ್ಷಜಯ ತ್ರಿಭುವನಾಧ್ಯಕ್ಷಜಯ ಪಾಂಡುಸುತ ಪಕ್ಷ ಜಯ ಜಗದ್ರಕ್ಷಾ ಜಯಜಯಾ 1

ಜಯ ಲೋಕಭಯನಾಶ ಜಯ ದಳಿತಭವಪಾಶಜಯ ವೇಂಕಟಾದ್ರೀಶ ಜಯಸುಪ್ರಕಾಶ ಜಯಜಯಾ 2

ಜಯ ತುಲಸೀದಳದಾಮಜಯ ಶೇಷಗಿರಿಧಾಮಜಯದೈತ್ಯರಿಪುಭೀಮ ಜಯಕೃಷ್ಣರಾಮಾ ಜಯಜಯಾ 3

ಜಯ ಕೋಟಿರವಿಭಾಸ ಜಯ ಸಾತ್ವಿಕೋಲ್ಲಾಸಜಯ ಜಯ ಭವದ್ದಾಸ ಜಯ ಶ್ರೀನಿವಾಸಾ ಜಯ ಜಯಾ4
*******

No comments:

Post a Comment