Saturday, 16 November 2019

ರಂಗನ ತಂಗಿಯರ ಮಾನಭಂಗ ಮಾಡಿ ankita ramesha

by ಗಲಗಲಿಅವ್ವನವರು
ರಂಗನ ತಂಗಿಯರ ಮಾನಭಂಗ ಮಾಡಿಹರುಷದಿಂದ ತಂಗಿಯರುಕೋಲಹಾಕುತಾರೆ ಬಾರೆ ದ್ರೌಪತಿ ಪ.

ದೊರೆಯರ ಮಗಳೆಂದುಬಹಳೆ ಗರವಿಲಿಂದ ಆಣಿನಿಟ್ಟುಒಳಗೆ ಹೋಗಿಸೇರಿದ್ಯಾಕ ಬಾರೆ ದ್ರೌಪತಿ 1

ಒಳ್ಳೆಯವರ ಮಗಳು ನೀನುಭಾಳಮಾತನಾಡಿಗೈಯ್ಯಾಳಿ ತನವತೋರಿಕೊಂಡಿ ಬಾರೆ ದ್ರೌಪತಿ 2 

ಗುಡ್ಡದಷ್ಟು ರಾಗ ಮಾಡಿಅಡ್ಡಾದಿಡ್ಡಿ ಮಾತನಾಡಿಧಡ್ಡ ತನವ ತೋರಿಕೊಂಡೆಬಾರೆ ದ್ರೌಪತಿ 3

ಸರ್ಪನ ಎದುರಿಗೆ ಕಪ್ಪೆದರ್ಪತೋರುವದು ಉಂಟೇನಅರಿಪುರೆಲ್ಲ ನಿನ್ನ ಬುದ್ಧಿಬಾರೆ ದ್ರೌಪತಿ 4

ಬರಿಯ ಮಾತಿನ ಜಾಣೆನಿಮ್ಮನ ಕರೆಯ ಬರಲಿಲ್ಲವೆಂದುಕುರಿಯಂತೆ ಕೂಗಿದೆಲ್ಲಬಾರೆ ದ್ರೌಪತಿ 5

ನರಿಯ ಸಿಂಹನ ಮರಿಗೆನೀನು ಸರಿ ಗಟ್ಟಿದಂತೆಅದರ ಪರಿಯತಿಳಕೊಳ್ಳಬಾರೆ ದ್ರೌಪತಿ 6

ಅಕ್ಕ ರುಕ್ಮಿಣಿಗೆಭಾಳಸೊಕ್ಕಿಲಿಂದ ಆಣಿನಿಟ್ಟೆಬೆಕ್ಕಿನಾಂಗ ಸೇರಿದ್ಯಾಕಬಾರೆ ದ್ರೌಪತಿ 7

ನಳಿನಾಕ್ಷಿ ರಾಮೇಶ ನರಸಿಯರಿಗೆತಿಳಿಯದೆ ಆಣಿಯನಿಟ್ಟುಮಾನವಎಂತು ಕಳೆದು ಕೊಂಡೆಬಾರೆ ದ್ರೌಪತಿ 8
******

No comments:

Post a Comment