Monday 11 November 2019

ಜಾರಿ ಬಿದ್ದಳು ಕುಣಿಯೊಳು ಜಾರಿ ಬಿದ್ದಳು ankita prasannavenkata

by ಪ್ರಸನ್ನವೆಂಕಟದಾಸರು
ಜಾರಿ ಬಿದ್ದಳು ಕುಣಿಯೊಳು ಜಾರಿ ಬಿದ್ದಳು ಪ.

ಜಾರಿಬಿದ್ದಳು ಕೆಸರಿಲ್ಲದೆಊರೆಲ್ಲ ನಕ್ಕಿತು ತವರೂರು ಮಾವನ ಮನೆಯವರುಚೀರಿ ಅಳುವಸೋಜಿಗನೋಡಿ1

ಶುದ್ಧ ನಡೆಯದೆ ಅಡ್ಡಡ್ಡೊಲಿದುಬಿದ್ದ ಭರಕೆ ಮೂಗುತಿ ಕಳೆದುಚೋದ್ಯವ ನೋಡಿ ಕಂಡರ ಕೈಯಲಿಗುದ್ದಿಸಿಕೊಂಡಳು ವಾರಂವಾರ 2

ಈಪರಿಜಾರಿಬಿದ್ದರೆ ನೋಡ್ಯೆಲ್ಲಾ ಪತಿವ್ರತೆಯರೆಚ್ಚತ್ತು ನಮ್ಮಶ್ರೀಪತಿ ಪ್ರಸನ್ವೆಂಕಟರಮಣನಶ್ರೀಪಾದವ ನಂಬಿ ನಡೆವರು 3
********

No comments:

Post a Comment