by ಪ್ರಸನ್ನವೆಂಕಟದಾಸರು
ನಾರದ ಕೊರವಂಜಿ1
ಜಯ ಜಯ ಜಯ ಜಯ ಜಯ ಜಯ ಪ.
ಶ್ರೀ ರಮಾರಮಣ ಜಯ ಶ್ರೀಕರ ಗುಣಾಬ್ಧಿ ಜಯಶ್ರೀ ರುಕ್ಮಿಣೀಶ ಜಯ ಶ್ರೀ ಶ್ರೀನಿವಾಸ ಜಯನೀರಚರಕಮಠಕಿಟಿನೃಹರಿವಟುಭೃಗುಜ ರಘುವೀರ ಯದುಪತೆಬುದ್ಧಕಲ್ಕಿ ಸ್ವರೂಪಾ ಜಯ ಜಯ1
ಶ್ರೀ ಮತ್ಕಪಿಲ ಋಷಭ ಯಜÕದತ್ತ ಕಂಸ್ತುಘ್ನ ?ಕೌಮಾರ ವ್ಯಾಸ ಹಯಗ್ರೀವ ಶ್ರೀಮದ್ದಜಿತ ಜಯಸ್ವಾಮಿ ಮಹಿದಾಸ ತಾಪಸ ಉರುಕ್ರಮಶೂಲಿವ್ಯಾಮೋಹ ಧನ್ವಂತರೆ ಹಂಸ ಶುಕ್ಲಾ ಜಯ ಜಯ 2
ಆನಂದ ಜ್ಞಾನ ಬಲಮಯ ಚಿತ್ಸ್ವರೂಪ ಜಯಅನಂತ ಮಹಿಮ ವೈರಾಜ ಪುರುಷೋತ್ತಮ ಜಯಅನಂತ ಬ್ರಹ್ಮ ರುದ್ರೇಂದ್ರಾದಿಸೇವ್ಯಜಯಅನಂತ ಜೀವಗ ಪ್ರಸನ್ವೆಂಕಟ ಕೃಷ್ಣಾ ಜಯ ಜಯ 3
ಶರಣು ಮಂಗಳ ದೇವತೇವರಶರಣು ಚಿತ್ಸುಖಸಾಗರಶರಣುಅಗಣಿತಗುಣಶುಭಾಕರಶÀರಣು ವೆಂಕಟ ಮಂದಿರ 4
ದುರುಳದೈತ್ಯರು ಸೊಕ್ಕಿ ವರದಲಿಧರೆಗೆ ಕಂಬನಿ ತರಿಸಲುತ್ವರದಿ ಸುರರಿಗೆ ಮೊರೆಯನಿಟ್ಟಳುಧರಿಸಲಾರೆನು ಎನುತಲಿ 5
ಸರಸಿಜೋದ್ಭವಭವಪುರುಹೂತರರಿದು ಚಿಂತಿಸಿ ಮನದಲಿವರಪಯೋನಿಧಿಗೈದಿ ಸ್ತುತಿಸಲುಕರುಣದಲಿ ಅವತರಿಸಿದೆ 6
ಬಂದು ಧರ್ಮದ ವೃಂದ ರಕ್ಷಿಪೆನೆಂದು ದೀಕ್ಷೆಯವಿಡಿದು ನೀಅಂದಗೆಡಿಸುತ ದನುಜನಿಕರವಹೊಂದಿ ದ್ವಾರಕ ನಗರವ 7
ಇಂದಿರೆಯು ನಿನ್ನಿಚ್ಛೆಯನುಸರದಿಂದ ಕ್ರೀಡಿಪಳನುದಿನÀಮಂದಜನರಿಗೆ ಮೋಹಿಸುತನರರಂದದಲಿ ತೋರಿದೆ ಹರೆ 8
ದೇವಋಷಿ ನಾರದನು ಶ್ರೀಪದಸೇವೆಗÉೂೀಸುಗ ಕೊರವಿಯಭಾವದಲಿ ಜಗದಂಬೆ ರುಕ್ಮಿಣಿದೇವಿಯಳ ಬಳಿಗೈದು ತಾ 9
ದೇವ ನಿನ್ನಯ ಬರವ ಬೆಸಸಿದಕೋವಿದತೆಯನು ಪೇಳುವೆಶ್ರೀವರ ಪ್ರಸನ್ವೆಂಕಟ ಕೃಷ್ಣಪಾವನ ಮತಿಯ ಕರುಣಿಸೊ 10
ಶ್ರೀ ರಂಭೆ ಭೀಷ್ಮಕನಭೂರಿಪುಣ್ಯದ ಗರ್ಭವಾರಿಧಿಯಲ್ಲಿ ಜನಿಸಿನಾರಿ ರುಕ್ಮಿಣಿಯೆಂಬ ಚಾರುನಾಮದಿಕಳೆಯೇರಿ ಬೆಳೆದಳಂದವ್ವೆ 11
ಜನನಿಜನಕರೆಲ್ಲ ತನುಜೆಯ ಹರಿಯಂಘ್ರಿವನಜಕೆ ಕೊಡಬೇಕೆನ್ನೆನೆನೆದು ತಾನೊಂದು ರುಕ್ಮನು ದಮಘೋಷನತನುಜಗೆ ತಂಗಿಯನು 12
ಕೈಗೂಡಿಸುವೆನೆಂಬ ವೈಭವದಲ್ಲಿರೆವೈಮನಸದೊಳು ಕನ್ಯೆಯುಸುಯ್ಗರಿಯುತ ಮುರವೈರಿ ಪ್ರಸನ್ವೆಂಕಟಕೃಷ್ಣಯ್ಯನೊಳ್ ಮನವಿಟ್ಟಿರೆ 13
ದನುಜಮಥನÀ ಹರಿಸೇವೆ ಇದೆಂದುಅನಿಮಿಷಮುನಿ ಧರೆಗಿಳಿದು ತಾ ಬಂದುವನಿತೆ ಕೊರವಂಜಿಯ ವೇಷವÀ ಧರಿಸಿಜನಪ ಭೀಷ್ಮಕನೋಪವನದಲ್ಲಿ ನೆಲಸಿ 14
ಹಲವು ಕೊರವಿಯರ ಕೂಡಿ ಸಿಂಗರದಿಬೆಲೆ ಇಲ್ಲದುಡಿಗೆ ತೊಡಿಗೆ ಇಟ್ಟು ಮುದದಿಇಳೆಯ ಜನರು ಮೋಹಿಸುವಪರಿಇಹಳುಕೆಳದೇರ ಗಡಣದಲಿ ಚೆಲುವೆ ಒಪ್ಪಿದಳು 15
ಮಂಜುಗಾವಿಯ ಸೀರೆ ನಿರಿತೆಗೆದುಟ್ಟುಕೆಂಜೆಡೆ ಬಿಟ್ಟೋರೆದುರುಬಿನ ಕಟ್ಟುಪಂಜಿನೋಲೆಯ ಮೂಗುತಿಯ ಬಲಿದಿಟ್ಟು ಗುಲಗಂಜಿ ಹೊಂದಾಳೆ ಸರಗಳಳವಟ್ಟು 16
ಕಂಚುಕಪುಟ ಬಿಗುಪೇರಿದ ಕಟ್ಟುಚಂಚಲನೇತ್ರಕಂಜನ ಕಾವಲಿಟ್ಟುಮಿಂಚುವಾಭರಣಿಟ್ಟು ಪ್ರಸನ್ವೆಂಕಟ ಕೃಷ್ಣನಂ ಚಿಂತಿಸಿ ಜಯ ಜಯಯೆಂದಳುಕೊರವಿ17
ಅಡಿಗಡಿಗೆ ಝಣ ಝಣರೆಂದು ನಡೆತಂದು ನಡೆತಂದುಮಡದಿ ರಾಜಬೀದಿಯಲಿನಿಂದು18
ಮೃಡಗಹಿತನ ಪಟ್ಟದಾನೆ ಮಂದಗಮನೆ ಮಂದಗಮನೆಕಡುಮೌನಿ ಜನರ ಮೋಹಿನೆ 19
ಚಪಲ ನೋಟಕೆ ನಾಗರಿಕರು ನೋಟಕರು ನೋಟಕರುಲಿಪಿಯ ಚಿತ್ರದೊಲು ನಿಂತಿಹರು 20
ನಿಪುಣೆಕೊರವಿಶ್ರೀಪ್ರಸನ್ವೆಂಕಟ ಕೃಷ್ಣನ್ನ ಕೃಷ್ಣನ್ನಶ್ರೀಪ್ರÀ್ರಸಾದವ ಬೇಡುತಿದ್ದಳಣ್ಣ 21
ಬೆಡಗಿನ ಗಮನದಿ ಎಡಬಲಕೊಲಿದುಕಡಗ ಶಂಖದ ಬಳೆ ನುಡಿಸುತ ನಡೆದುಅಡಿಗೊಮ್ಮೆ ತಿರುಮಲ ಒಡೆಯನ ನೆನೆದು ತಕ್ಕಡ ಧಿಗಿಧಿಮಿಕೆಂದುಜಡಿದುತಾಳ್ವಿಡಿದು22
ತಿಗುರಿದ ಗಂಧ ಸೆಳ್ಳುಗುರಿನ ನಾಮಮೃಗಮದದ ಬೊಟ್ಟಿನ ನಗೆಮೊಗದ ಪ್ರೇಮಮಗುವನುಡಿಯಲೆತ್ತಿ ಜಗಚ್ಚರಿಯಮ್ಮಹೆಗಲ ರನ್ನದ ಬುಟ್ಟಿ ಮುಳ್ಳುವಿಡಿದಮ್ಮ 23
ನಗರದ ಜನದ ಕಣ್ಣಿಗೆ ಕೌತುಕೆನಿಸಿಬಗೆ ಬಗೆ ಒಗಟು ಮಾತುಗಳನುಚ್ಚರಿಸಿನಗರಾಧಿಪತಿಯ ಮನೆಯಕೇಳಿನಡೆದುಮಿಗೆ ಪ್ರಸನ್ವೆಂಕಟ ಕೃಷ್ಣಗೆ ಕೈಮುಗಿದು 24
ಬ್ರಾಹ್ಮರ ಕೇರಿಗೆ ಬಂದಳಾಕೊರವಿಪರಬ್ರಹ್ಮನ ಗುರುತ ಕೇಳುತ್ತನಮ್ಮಮ್ಮ ನಮ್ಮವ್ವೆ ನಮ್ಮಜ್ಜಿ ನೀಡೆಂದುಸನ್ಮಾನದಾಲಯವ ಪೊಗುತಾ 25
ಇಂತಪ್ಪ ಸೊಬಗುಳ್ಳ ಕೊರವಿಯನು ಕಂಡುನೃಪನಂತಃಪುರದ ಸತಿಯರೈದಿಕಂತುವಿನ ಜನನಿಗೆ ಕರವೆರಡು ಮುಗಿದು ಏಕಾಂತ ಪೇಳಿದರು ಚೆನ್ನಾಗಿ 26
ಓರ್ವ ಕಾಲಜ್ಞಾನ ಪೇಳ್ವ ಕೊರವಮ್ಮ ನಮ್ಮೂರ್ವಳಗೆ ತಿರುಗುತಿಹಳಮ್ಮಸರ್ವೇಶ ಪ್ರಸನ್ವೆಂಕಟ ಕೃಷ್ಣನಾಗಮದನಿರ್ವಚನ ಕರೆಸಿ ಕೇಳಮ್ಮ 27
ಬಂದಳು ನೃಪನರಮನೆಗೆ ತಾನಿಂದಲ್ಲಿ ನಿಲ್ಲದೆ ಕಿಲಿಕಿಲಿ ನಗುತಾ ಕುಲು ಕುಲು ನಗುತಾ ಪ.ಬಂದ್ಹೇಳಿದ ನುಡಿಗೇಳ್ದು ಪೂರ್ಣೇಂದುವದನೆ ಮುದತಾಳ್ದುಮಂದಿರಕೆ ಕರೆಸಿದಳು ನಲವಿಂದಲಿ ಬಲು ಬೆಡಗಿನ ಕೊರವಂಜಿ 28
ತಳಪಿನ ಮುತ್ತಿನ ಕಟ್ಟುಶುಭತಿಲಕದ ಹಚ್ಚೆಯ ಬಟ್ಟುಅಲುಗುವ ಮೂಗುತಿಯಬಲೆ ಸಲೆಬಳುಕುತ ಬಡನಡುವಿನ ಚಪಲೆ 29
ಬಟುಗಲ್ಲದ ಮಕರಿಕಾಪತ್ರ ಪವಳದುಟಿ ದಾಡಿಮರದಗೋತ್ರವಿಟಮೃಗಸ್ಮರಶರ ನೇತ್ರ ಕೊರಳ್ದಟಿಸುವಮಣಿಮುತ್ತಿನ್ಹಾರಗಳೊಲಪಲಿ30
ಇಟ್ಟೆಡೆ ಮೊಲೆಯ ಪಟ್ಟಿಕೆಯು ಶ್ರೋಣಿಮುಟ್ಟುವ ಮುಡಿಯ ಮಾಲಿಕೆಯುಬಿಟ್ಟ ಮುಂಜೆರಗಮಲಿಕೆಯು ಕಣ್ಣಿಟ್ಟ ಮೃಗಕೆ ಭ್ರೂಸ್ಮರಕಾರ್ಮುಕೆಯು 31
ತೆಳ್ವೋದರದ ತ್ರಿವಳಿಯ ಜಗುಳಿಬೀಳ್ವ ಮಣಿಮುಕ್ತಾವಳಿಯಸಲ್ಲಲಿತ ಸಂಪಿಗೆ ಕಳೆಯ ಗೆಲ್ವಚೆಲ್ವೆಕೊರವಿಪುರವೀಥಿಯ ಬಳಿಯ32
ಕಿಣಿ ಕಿಣಿ ರವದ ಕಿಂಕಿಣಿಯುಝಣ ಝಣತ್ಕಾರಿಪಂದುಗೆ ಮಣಿಯುಕಣಿ ಕಣಿ ಒಯ್ಯೆಂಬೊಕ್ಕಣಿಯು ಕುಚಕುಣಿ ಕುಣಿಸಿ ನಟಿಪ ನಡೆವಾಂಗನೆಯು 33
ಸಿಂಗನ ಉಡಿಯಲ್ಲಿಕಟ್ಟಿಉತ್ಸಂಗದೊಳೊಲಪಿನ ದಿಟ್ಟಿರಂಗ ಶ್ರೀ ಪ್ರಸನ್ವೆಂಕಟ ಕೃಷ್ಣಾಂಗನೆಯನು ಕಾಂಬುವೆನೆಂಬ ತವಕದಿ 34
ವಚನಪದುಮನಾಭನ ರಾಣಿ ರಾಣಿವಾಸದಲಿಯದುಕುಲೇಂದ್ರನ ಚರಣೋಚ್ಚಾರಣೆಯಲ್ಲಿರಲುಒದಗಿ ಬಂದಳುಕೊರವಿಕರೆಯುತ್ತ ತಾನುಚದುರ ಪ್ರಸನ್ವೆಂಕಟ ಕೃಷ್ಣನರಸಿಯನು 35
ಎಲ್ಲಿಹಳೆಲ್ಲ್ಲಿಹಳಾ ರಾಯನ ಮಗಳೆಲ್ಲಿಹಳೆ ನೀಡೆಯವ್ವನಲ್ಲೆ ಬಾ ನಲ್ಲೆ ಬಾ ನಲ್ಲೆ ಬಾ ರುಕ್ಮಿಣಿನಲ್ಲೆ ಬಾರೆ ಮುಂದಕವ್ವ 36
ಬಲ್ಲೆ ನಾ ಬಲ್ಲೆ ನಿನ್ನಯ ಮನದೆಣಿಕೆಯಸೊಲ್ಲುವೆನೆ ನೀಡೆಯವ್ವನಿಲ್ಲದು ನಿಲ್ಲದಕ್ಕಿಯು ನಿನ್ನದ್ಹಸಿತ ಕೈಒಳ್ಳೆ ಕಜ್ಜಾಯ ನೀಡೆಯವ್ವ 37
ಕೆಟ್ಟೋಗರಕೆ ಚಿತ್ತವಿಟ್ಟ ಕೊರವಿಯಲ್ಲಮೃಷ್ಟಾನ್ನವ ನೀಡೆಯವ್ವಶ್ರೇಷ್ಠಾದ ಶಾವಿಗೆ ಬಟ್ಟುವಿ ಪಾಯಸಹೊಟ್ಟೆ ತುಂಬ ನೀಡೆಯವ್ವ 38
ಅಟ್ಟಿಟ್ಟ ಪಂಚವಿಧ ಭಕ್ಷ್ಯ ಎನಗಿಂದುಇಷ್ಟ ಕಾಣೆ ನೀಡೆಯವ್ವಇಷ್ಟುಣಲಿಕ್ಕೆನ್ನತುಷ್ಟಿಬಡಿಸಿ ಸತ್ಯಗೋಷ್ಠಿಕೇಳೆ ನೀಡೆಯವ್ವ39
ಮನ್ನಣೆ ಇಲ್ಲದ ಮನೆಯ ಹೊಗುವಳಲ್ಲಕನ್ನೆ ಬಾರೆ ಮುಂದಕವ್ವಮುನ್ನ ರಕ್ಕಸನೊಯ್ದ ಮಡದಿಗೆ ಒಳಿತವನೆಲ್ಲ ಹೇಳಿದ್ದೆನವ್ವ 40
ನಿನ್ನ ಪ್ರಾಣದ ಪ್ರಿಯನೊಬ್ಬನೆ ಪರದೈವಕನ್ನೆ ಕೇಳಜಕಾಮರವ್ವಕಣ್ಣಾರ ಕಾಂಬೆ ನಿನ್ನಣ್ಣನಪಾಟುಪ್ರಸನ್ನವೆಂಕಟ ಕೃಷ್ಣನಿಂದವ್ವ 41
ಚೂರ್ಣಿಕೆಈ ವಾಕ್ಯವಂಕೇಳಿತೀವಿ ತೋಷವ ತಾಳಿದೇವಿ ರುಕ್ಮಿಣಿಯಕ್ಕ ಪಾವನ ಹಾಸಂಗಿಯಿಕ್ಕಿಆವಲ್ಲಿಂ ಬಂದ್ಯವ್ವ ದೇವಲೋಕದ ಕೊರವೆಈ ಒಳ್ಳೆ ಮೆಚ್ಚು ಮಾತು ಆವಾಗನುಭವೆಂ ಮಾತೆಹೀಗೆಂದಾಸನ ಕೊಟ್ಟು ಬಾಗಿಲೊಳು ಕಾವಲಿಟ್ಟುಬೇಗ ಪ್ರಸನ್ವೆಂಕಟ ಕೃಷ್ಣನಾಗಮವ ಮನದಿ ಕೇಳ್ದಳವ್ವೆ 42
ಕುಳ್ಳಿರೆ ಕುಳ್ಳಿರೆ ಕುಳ್ಳಿರೆ ಕೊರವಂಜಿಫುಲ್ಲಬಾಣನಾನೆ ಕುಳ್ಳಿರೆಸೊಲ್ಲಮ್ಮ ಸೊಲ್ಲಮ್ಮ ಹಲವು ಮಾತಿನ ಜಾಣೆಎಲ್ಲ ಬಯಕೆಯನೆಲ್ಲ ಸೊಲ್ಲಮ್ಮ ಕೊರವಂಜಿ 43
ಆದರದಾ ಮಾತ ಕೇಳುತ ಕುಳಿತಳುಯಾದವರರಸ ಮುಕುಂದನಕೋದಂಡಪಾಣಿ ತಿರುವೆಂಗಳ ಮೂರ್ತಿಯಪಾದಕೆ ಮಾಡಿದಳೊಂದನೆ ಕೊರವಂಜಿ 44
ಮಣಿಮಯ ಬುಟ್ಟಿಯ ಎಡದಲಿಟ್ಟುಕೊಂಡುವನಿತೆ ಪದ್ಮಾಸನವಿಟ್ಟಳುಮಿನುಗುವ ಎಳೆನಗೆಯಣುಗನ್ನ ಮಲಗಿಸಿವನಿತೆ ರುಕ್ಮಿಣಿಯನ್ನು ಕರೆದಳು ಕೊರವಂಜಿ 45
ಜಾಣೆ ಬಾರೆ ಸುಗುಜಾಣೆ ಬಾರೆ ನಾರಿಮಾಣಿಕಳೆಕಟ್ಟಾಣಿಬಾರೆವಾಣಿಪತಿಪಿತ ಪ್ರಸನ್ವೆಂಕಟ ಕೃಷ್ಣನರಾಣಿ ಬಾರೆಸುಪ್ಪಾಣಿಬಾರೆ ಕಲ್ಯಾಣಿ ಬಾರೆ ಫಣಿವೇಣಿ ಬಾರೆಶುಭಶ್ರೋಣಿ ಬಾರೆ ಎಂದು ಕರೆದಳು ಕೊರವಂಜಿ 46
ವಚನಅಮ್ಮ ರುಕ್ಮಿಣಿಯಮ್ಮ ಉಮ್ಮ್ಮಯವಟ್ಟುಮುಮ್ಮೊರದ ರತುನ ಮುತ್ತಿನ ಕಾಣಿಕಿಟ್ಟುಪರಬೊಮ್ಮಪ್ರಸನ್ವೆಂಕಟಕೃಷ್ಣನ ಅಡಿಗಳನಮ್ಮಿಸುತ ಮನೋರಥವÀ ಮನದಿ ಬೆಸಗೊಳ್ಳಲು 47
ಉಂಡ ಊಟ ಕಂಡ ಕನಸು ಪುಂಡರೀಕಾಂಬಕಿಯೆತಂಡ ತಂಡದ ವಾರುತೆಗಳ ಪೇಳುವೆನು ಸಖಿಯೆಹಿಂಡುದೈವದಗಂಡಪ್ರಸನ್ವೆಂಕಟ ಕೃಷ್ಣನ ಕಣ್ಣಾರಕಂಡು ಸಾರುವಕೊರವಿಎಳ್ಳನಿತು ಸಟೆಯರಿಯೆ48
ಚೂರ್ಣಿಕೆಕಾಸಿನಾಸೆಯವಳು ನಾನಲ್ಲಭಾಷೆ ಹುಸಿದರೆ ಬಿರುದು ಬಿಸುಡುವೆನೆಲ್ಲಭಾಷೆ ಪಾಲಕರು ನಮ್ಮ ಸಿದ್ಧರೆಲ್ಲ ಲೇಸುಲೇಸೆಂದುಕೇಸಕ್ಕಿತಿಮ್ಮಯ್ಯನ ಬೆತ್ತವ ಮುಟ್ಟೆಲೆ ದುಂಡೆಎನ್ನ ಮನದ ದೈವ ಎನ್ನಕ್ಕ ಕೇಳೆಯವ್ವತಿರುಮಲೆ ತಿರುವೆಂಗಳಯ್ಯವರಅಹೋಬಲ ನರಸಿಂಗಯ್ಯಹರಿಕಂಚಿ ವರದರಾಜಯ್ಯಶಿರಿ ರಂಗದ ರಂಗರಾಯಯ್ಯಬದರಿಯ ನರನಾರಾಯಣಯ್ಯಪುಂಡರೀಕವರದ ಪಂಢರಿರಾಯ ಎಮ್ಮಉಡುಪ ಕುಲಜ ಮನ್ನಾರು ಕೃಷ್ಣಮ್ಮಒಡ್ಡಿಜಗನ್ನಾಥ ಅಲ್ಲಾಳನಾಥಯದುಗಿರಿನಾಥ ಶಿರಿಮುಷ್ಣನಾಥಕೃತಪುರದ ವೀರ ನಾರಾಯಣಕೊಲ್ಲಾಪುರದ ಕನ್ನೆ ವೇಲಾಪುರದ ಚೆನ್ನಅನಂತಶಯನ ಜನಾರ್ದನ್ನಅನವರತಪರಸನ್ನ ವೆಂಕಟ ಕೃಷ್ಣನ ಕನ್ನೆಇಂತಪ್ಪಾನೇಕ ದೈವ ಏಕವೆಂದು ಏಕಾನೇಕವೆಂದುನಂಬಿಪ್ಪೆನೆ ಕೇಳೆಯವ್ವ 49
ಇಂತಿಪ್ಪ ಎನ್ನ ಮನೆಯ ದೈವ ಅವರಂತವ ಬೊಮ್ಮರರಿಯರವ್ವ ವಿಶ್ರಾಂತಿಲಿ ಕೊಂಡಾಡುವೆನವ್ವ ನಾನುಕಂತುವಿನಣ್ಣನ ಮಗಳವ್ವ 50
ಇಪ್ಪಲ್ಲಿಪ್ಪಕೊರವಿನಾನಲ್ಲ ಹೋಗಿಬಪ್ಪೆ ಹದಿನಾಲ್ಕು ಲೋಕಕೆಲ್ಲಛಪ್ಪನ್ನದೇಶಗಳ ಸುದ್ದೀನೆಲ್ಲಕೇಳಿಬಪ್ಪುವ ಕಜ್ಜವ ಕೃಷ್ಣ ಬಲ್ಲ 51
ಆವಾವ ದೇಶದ ಸುದ್ದಿ ಕೇಳವ್ವ ನಿನ್ನಭಾವದ ಬಯಕೆಯನೆಲ್ಲ ಕೇಳವ್ವಶ್ರೀವರ ಪ್ರಸನ್ನವೆಂಕಟಾದ್ರಿ ಕೃಷ್ಣ ದ್ವಾರಕಿಂದಾವಾಗ ಬಪ್ಪನೆಂದು ಕೇಳವ್ವ 52
ಚೂರ್ಣಿಕೆಓಯಮ್ಮ ನಿನ್ನವರುಗಳು ಆ ಬಲಮಗು ಮದನಕಾಮಬುಡುಕ್ಕಾನೆ ಪರತಾನು ಚಿಂತಿಶೆ ಮಾಣಮ್ಮನಾ ತಿರುಕ್ಕಿ ವಂದ ದೇಶ ಐವತ್ತಾರು ಶೊಲ್ಲರೆಅಂಗ ವಂಗ ಕಳಿಂಗ ಕಾಂಬೋಜ ಭೋಟಕರ್ನಾಟಕ ಘೋಟ ಮಹಾಘೋಟಜಿನ್ನ ಮಹಾಜಿನ್ನ ಜೊನ್ನಗಕಾಶ್ಮೀರ ತುರುಷ್ಕಮಾಗಧಬಂಗಾಳ ಗೌಳ ಮಾಳವ ಮಲೆಯಾಳನೇಪಾಳ ಗೌಡ ಗುರ್ಜರ ಕೊಂಕಣದರ್ದುರಬರ್ಬರ ಸೌರಾಷ್ಟ್ರ ಮಹಾರಾಷ್ಟ್ರಸಂಬರ ಮುಂಗಿಳ ಘೋಟ ಮುಖಏಕಪಾದ ಸೌಳ ಸಂಸಾಳಕಆನರ್ತ ಹಮ್ಮೀರ ಕೊಮ್ಮೀರಮತ್ಸ್ಯಪಾಂಚಾಲರಾಜಶೇಖರ ವರಶೇಖರ ಯುಗಂಧರ ಮಧ್ಯದೇಶಲಂಬಕರ್ಣ ಸ್ತ್ರೀರಾಜ್ಯ ಆಂಧ್ರ ದ್ರವಿಡಅರವ ಕನ್ನಡ ತುಳುವ ತುಳಾಂಡಜಾಳೇಂದ್ರ ಕೈಕೇಯ ಕೌಸಲ ಕಂಚಿಕನೋಜ ಸವ್ವೀರಸಿಂಧುಕೇರಳವೈದರ್ಭ ದೇಶದೊಳ್ಕುಂಡಿನಾಪುರದೊಳ್ ನಿನ್ನಂ ಕಂಡುಮನದಂಡಲಿಕೆಗೆ ಸಾಗಿತ್ತೆನೆಲೆ ದುಂಡೆ 53
ಈ ನಾಡ ಚರಿಸಿ ನಿನ್ನರಸುತ ಬಂದೆನೆಜಾಣೆ ಬಂಗಾರವ್ವ ಕೈ ತೋರೆ 54
ನಿನ್ನ ಕಾಣುತ ಹಸಿವೆ ನೀರಡಿಕೆಲ್ಲ ಹೋಯಿತುಜಾಣೆ ಬಂಗಾರವ್ವ ಕೈ ತೋರೆ 55
ಸಂಧಾನಕ್ಹಾರುವನಟ್ಟಿದ್ದೆ ಮೊದಲಹುದೇನೆ ಮಂಗಳದೇವಿ ಕೈ ತೋರೆ 56
ನೀ ಬರೆದೊಕ್ಕಣೆ ಯದುರಾಯನರಿತಾನುಸೌಭಾಗ್ಯವಂತೆ ಕೈ ತೋರೆ 57
ರಥವನೇರಿಕೊಂಡು ಬರಹ ನೋಡಿಕೊಳ್ವಜಾಣೆ ಬಂಗಾರವ್ವ ಕೈ ತೋರೆ 58
ಧ್ಯಾನದ ಕಳವಳ ಮುಸುಡುಗಂಟಿನ ಚಿಂತೆಮಾಣು ಮಂಗಳದೇವಿ ಕೈತೋರೆ 59
ತ್ರಿಭುವನೇಶ ಪ್ರಸನ್ನವೆಂಕಟ ಕೃಷ್ಣತಾ ಬಹನೆಲೆ ದುಂಡಿ ಕೈ ತೋರೆ 60
ಚೂರ್ಣಿಕೆಎಲೆಲೆ ಎಳೆವೆಂಗಳೆ ಎಲೆ ಹುಲ್ಲೆಗಂಗಳೆಮಹಾಭೂಷಣದ ಮಾರುವೇಣಿ ಮಡದಿಯರಸುಪ್ಪಾಣಿಕೀರವಾಣಿ ಕಿಸಲಯಪಾಣಿಕಂಧಿಜ ಬಿಂಬವದನೆ ಕುಲಿಶಮಣಿರದನೆಮದನಕಾರ್ಮುಕೋಪಮ ಭ್ರೂಲತೆಯಳೆ ಮಹಾಲಕುಮಿಯಳೆಅರುಣವಿಧ್ರುಮಾಧರೆ ಅಬ್ಜಜಾ ಕಂಧರೆಅರ್ಧಚಂದ್ರನ ಪೋಲ್ವಡಿ ಪಣೆಯಳೆ ಅನಘ್ರ್ಯ ಚೂಡಾಮಣಿಯಳೆಸಿಂಧೂರಸೀಮಂತಿನಿಯೆಸಿರಿತಿಲಕದ ಶೋಭಿನಿಯೆನುಣ್ಗದಪುನಾಸಿಕಮಣಿಯಳೆ ನೂತನೊಜ್ರದೋಲೆಯಳೆನಿಷ್ಕ ಕಂಠಾಭರಣೆಯಳೆ ನಿತ್ಯಮಂಗಳ ಸೂತ್ರಿಯಳೆನಿಡುಜಾಲಕ ಮಾಲೆಯಳೆಬುಗುಡಿ ಚಳತುಂಬು ಕೊಪ್ಪಿನ ಕಿವಿಯಳೆಬಾವಲಿ ನಾಗೋತ್ರ ಪೊಂಬರಳೆಲೆ ಲಲಿತ ಬಾಹುಲತೆಯಳೆಲಸತ್ವನಜಕೋರಕ ಸ್ತನಿಯಳೆಕಡು ತೆಳ್ವೋದರಿ ನಿಮ್ನ ನಾಭಿಯಳೆಕಂಠೀರವಕಟಿಯಳೆ ಕರಭೋರು ಯುಗಳೆಯಳೆಅಪರಂಜಿಕಂಚುಕಾಂಬರ ಉತ್ತರೀಯಳೆಅಮೂಲ್ಯ ಕಾಂಚಿದಾಮಾಂಕಿತಳೆಬಟುಗನ್ನಡಿ ಜಾನುದ್ವಯಳೆ ಬ್ಞಣ ಪಂಚಕನ ಬತ್ತಳಿಕೆ ಜಂಘೆಯಳೆಕೋಮಲತರಾಂಘ್ರಿ ಸರಸಿಜಯುಗಳೆನೀಲಪಚ್ಚ ಪದ್ಮರಾಗ ಹೀರ ಮುತ್ತಿನ ಪೆಂಡೆಯಳೆಕಾಲಂದಿಗೆ ಮೆಂಟಿಕೆ ವೀರಮುದ್ರೆ ಕಿರಿ ಪಿಲ್ಲಿಯಳೆಮಣಿಮಯಾಂಗುಲ್ಯದ ವಲಯಾಭರಣೆ ಮದಗಜಗಮನೆಪ್ರತಿಯಿಲ್ಲದ ರನ್ನದ ಬೊಂಬೆ ಪರಬೊಮ್ಮನ ಪಟ್ಟದ ರಂಭೆಬಾಬಾ ತಾತಾ ಎಂದು ವಾಮಕರವಬೇಡಲಿತ್ತಳಾ ರುಕ್ಮಿಣಿ ತಾಯಿ 61
ಜಗದ ನಾರಿಯರ ಕೈಗಳ ಕಂಡೆನವ್ವಮೃಗಮದಗಂಧಿ ನಿನ್ಹೋಲ್ವರಿಲ್ಲವ್ವ 62
ಯುಗಯುಗಾಂತರ ದೇಶ ದೇಶದಲ್ಲವ್ವಅಗಲ್ಯಾಟವಿಲ್ಲ ನಿನ್ನರಸ ನಿನಗವ್ವ 63
ಸವತೇರು ಬಹಳುಂಟು ನೆಂಟರ ಜಾಣೆ ಎಲೆ ಬೀಗರ ಸುಗುಣೆಯುವತಿ ಪ್ರಸನ್ವೆಂಕಟ ಕೃಷ್ಣ ನಿನ್ನ ಪ್ರಾಣ 64
ಕಣಿ ಕೇಳೆ ಕಣಿ ಕೇಳೆ ಕಣಿ ಕೇಳೆ ಚೆಲ್ವೆಕಣಿ ಕೇಳೆ ನಿನ್ನ ಮನದಾ ಮಾತ್ಹೇಳ್ವೆಎಣಿಕೆಗೊಳ್ಳದಿರಮ್ಮಇಂದುನಾಳೆಂದುಗುಣನಿಧಿ ಗೋಪಾಲ ಬಹ ದಯಾಸಿಂಧು 65
ತ್ರುಟಿಯುಗವಾಗಿದೆ ನಿನಗೀಗ ಮುಗ್ಧೆಕುಟಿಲಮಾಗಧಸಾಲ್ವ ನೆನೆವ ದುರ್ಬುದ್ಧೆಘಟಿಸದೆಂದಿಗೆ ಖಳರ ಮನೋರಥ ಸಿದ್ಧೆದಿಟವೆನ್ನವಾಕುಸುರಲೋಕ ಪ್ರಸಿದ್ಧೆ66
ಹಿಂದೊಮ್ಮೆ ಖಳರು ಗೋವಿಂದ ಬಂದಾಗಮಂದಮತಿಯಲಿ ಮನ್ನಿಸದಿರಲಾಗಇಂದ್ರ ಸಿಂಹಾಸನವ ಹರಿಗೆ ಕಳುಹಿಸಿದವೃಂದ ದೈತ್ಯರಿಗೆಲ್ಲ ಭಯವ ಸೂಚಿಸಿದ 67
ಜಂಭಾರಿಕುಲಿಶಕಂಜುತ ಪೋಕರೆಲ್ಲಥಂಬಿಸಿದರು ವಾಗಾಡಂಬರವೆಲ್ಲಅಂಬುಜಾಕ್ಷಗೆ ನಿನ್ನತಾತಪೂಜಿಸಿದಅಂಬುಜನಾಭ ತನ್ನೊಳುವಿಶ್ವತೋರ್ದ68
ಅದನೆಲ್ಲ ಬಲ್ಲ್ಯವ್ವ ಹರಿಯ ನಿಜನಲ್ಲೆಬೆದರಿದೊಲ್ಲೋರ್ವ ನಿನ್ನ ಮಾಯವ ಬಲ್ಲೆಪದುಮಜ ಭವರ ಹೃದಯಾಬ್ಜ ನಿಯಂತ್ರೆಉದಧೀಶನಾಜÕದಿ ಸರ್ವಸ್ವತಂತ್ರೆ 69
ಕೇಳಮ್ಮ ನಿನ್ನ ಹೆತ್ತವರಿಗೆ ನಿನ್ನಮೇಲೆ ಹಂಬಲ ಬಹಳ ಪಾಪಿ ನಿಮ್ಮಣ್ಣಆಲೋಚನೆಯಿಲ್ಲದೆ ನಿಶ್ಚೈಸಿದ್ದಾನೆ ಶಿಶುಪಾಲಗೆ ನಿನ್ನ ಕೊಡುತೇನಂತೈದಾನೆ 70
ಆಗಲ್ಯಾಕವನಿಂದಲೀಕಜ್ಜ ಬುರ್ರಾಬೇಗ ಭೀಷ್ಮಕನಂತರ ಬಲ್ಲ ಶ್ರೀಧರ್ರಾಸಾಗರಶಯನ ತಾ ಸಮಯಕೈತರುವನೇಗಿಲಧರನು ಕೃಷ್ಣನ ಕೂಡ ಬರುವ 71
ಆ ಗೌರಿ ಮೌನಿಯೆಂಬುವಳ ಪೂಜೆಯಲಿಯೋಗವಾಗಿದ್ರ್ದಾ ಕಾಪುರುಷ ಸಭೆಯಲ್ಲಿಮೇಘಮುಸುಕಿರ್ದ ಚಂದಿರನಂತೆ ನಿನ್ನಯೋಗೇಶ ಪ್ರಸನ್ವೆಂಕಟ ಕೃಷ್ಣ ನೊಯ್ವ ಚೆನ್ನ 72
ಇನಿತೆಲ್ಲ ಕೊರವಂಜಿಕರವಪಿಡಿದು ಹೇಳಿಕ್ಷಣ ಕ್ಷಣಕೊಡೆಯನ ಹೊಗಳಿನೆನಪಿಗೆ ಬೆಸಗೊಂಬೆ ಕಾಲಜ್ಞಾನದ ವಾರ್ತೆಎನಗೆ ತಿಮ್ಮಯ್ಯ ಹೇಳೆಂದು 73
ಶ್ರೀ ರುಕ್ಮಿಣಿಯ ಮನದುಲ್ಲಾಸವನೆಲ್ಲಪೂರೈಸುವೆನೆಂಬ ನುಡಿಯತೋರು ಎನ್ನಯ ನಾಲಿಗೆಯಿಂದಲುಸುರುವೆವೀರ ದ್ರಾವಿಡ ವೆಂಕಟಯ್ಯ 74
ಶರಣ್ಯೆಲೆ ಸತ್ಯನೆ ಶರಣ್ಯೆಲೆ ನಿತ್ಯನೆಶರಣು ಶರಣು ನಿತ್ಯಮುಕ್ತಶರಣು ಪರೇಶನೆ ಶರಣು ಅವಿನಾಶನೆಶರಣು ಪ್ರಸನ್ವೆಂಕಟ ಕೃಷ್ಣ 75
ವಚನಓ ರುಕ್ಮಿಣಿ ತಾಯಾರೆಉನ್ನ ಮನಸಿಲೆ ನಿನೈಚ್ಚ ಕಾರ್ಯಂ ಕೈಕ್ಕೂಡಿನಾಲ್ಎನಕ್ಕೆ ಎನ್ನ ಸಂತೋಷಂ ಪಣ್ಣಿರಾಯ್ಓಯಮ್ಮ ಉನ್ ಪ್ರಾಣನಾಯಗನ್ ಶ್ರೀಕೃಷ್ಣನ್ ವಂದುಪೊಟ್ಟಣೆ ಕೈ ಪಿಡಿಚ್ಚಿ ಕಲ್ಯಾಣಂ ಪಣ್ಣಿಕೊಳ್ಳರಾಂಇಂದ ವಾರ್ತೆ ತಪ್ಪಿನಾಲ್ ನಾಂ ಕೊರ್ತಿಯೇ ಅಲ್ಲೆಉನ್ ತಮಯನ್ ರುಗ್ಮಂ ವೇಕ್ಕತ್ತೆ ಕೊಲ್ಲರಂ ವರಾನುಓಯಮ್ಮ ಇಂದ ವಾರ್ತೆಯೈ ಪಣ್ಣಿಕೋ ಅª, À್ಮು 76
ಮದ್ಯಪಾನಿತಾಮಸಯವನನ ಕೊಲಿಸಿದನೆನಿದ್ರೆಗೈವ ರಾಯನಿಂದಲಿಸದ್ದಿಲ್ಲದೆ ಮಧುರೆ ಜನರ ಸಾಗರದಮಧ್ಯ ದ್ವಾರಕೆಯಲ್ಲಿಟ್ಟನೆ 77
ಯವನ ಸೈನ್ಯಜಲಧಿಬತ್ತಿಸಿ ಸಾಲ್ವಾದ್ಯರಹವಣಮುರಿದು ನಿಜರ ಹೊರೆವನು ನಿನ್ನವಿವಹ ಮಾಳ್ಪೆನೆಂಬ ಮಾಗಧನು ಚೈದ್ಯ ತನ್ನಕುವರನೆಂದು ಮಾನವಿಡಿದಿಹ 78
ಇನಿತರೊಳು ರಂಗರಾಯನು ಮೋಹರದಿಮಣಿರಥವನೇರಿ ಬಹನುವನಿತೆ ನಿನ್ನಂದಣವ ನೋಡುತ ಜಿಗಿವನಲ್ಲಿಂದ ಘನತರ ಮೃಗೇಂದ್ರನಂದದಿ 79
ನರಿಯ ಹಿಂಡಿನೊಳಗಿನಾನೆಯ ಒಯ್ವ ತೆರದಿಹರಿನಿನ್ನಪ್ಪಿಕೊಂಡುಹಾರುವಗರುಡನಮೃತ ಕಲಶವ ಸುರರ ಗೆದ್ದುಹರುಷದಿಂದೊಯ್ಯುವಂತೆ ಒಯ್ವನು 80
ಸರಸಿಯಾಬ್ಜ ಹಂಸ ಒಯ್ವವೋಲ್ ಪರಮಪುರುಷತ್ವ, ರಿಯ ತನ್ನ ರಥಕೆ ಒಯ್ವನೆಬರಿಯ ದುಗುಡವ್ಯಾಕೆ ಬಾಲಕಿಪ್ರಸನ್ವೆಂಕಟ ಕೃಷ್ಣ ನಿನ್ನ ಮೆಚ್ಚುಗಾರನೆ 81
ಬಂದನೆಂಬ ನುಡಿಯು ಬರುತಿದೆಜವದಿಕೃಷ್ಣಬಹನೆಂಬ ನುಡಿಯು ಬರುತಿದೆ 82
ಚೂರ್ಣಿಕೆನೀಡೆಯವ್ವ ಎನ್ನ ಮನೆ ಗಂಡನ ಕಾಟ ಘನ್ನವವ್ವಕ್ಷಣಕೈದು ನಡೆಯವನವ್ವಒಮ್ಮಾನ ತಿರಿತಂದರೆ ಇಮ್ಮಾನ ಬೇಡುವನವ್ವಚೆಂಬಣ್ಣ ಕರಿಬಿಳಿಯಬಟ್ಟೆನಮ್ಮತ್ತೆಗಳವ್ವಆರು ಮಂದಿ ಗಂಡನ ಗೆಳೆಯರವ್ವಏಳು ಪದರು ಮೂರು ತ್ಯಾಪೆ ಗುಡಲುಂಟವ್ವಎಪ್ಪತ್ತೆರಡು ಸಾವಿರ ನುಲಿಯ ಸಿಂಬಿಗಳವ್ವಗುಡಲೊಳು ಮೂರು ಒಲೆಯುಂಟವ್ವಗುಡಲು ಬಿದ್ದರೆ ನುಲಿಗೆ ಮಾರ್ಯೆವ್ವಒಂಬತ್ತು ಗುದ್ದಿನೊಳಗೆ ಹತ್ತು ಹೆಗ್ಗಣದೋಡ್ಯಾಟವವ್ವಕೊರವನ ಕೈಯಿಚ್ಛೆ ಮೂರು ನಾಯಿಗಳವ್ವಎಣಿಕಿಲ್ಲದ ಕುತ್ತಗಳುಂಟವ್ವಕೊಬ್ಬಿನ ಸವತೇರೆಂಟು ಮಂದಿ ಕೊರವಗೆ ಮಚ್ಚೂಡುವರವ್ವಸಂಸಾರದಲೆಳ್ಳನಿತು ಸುಖವಿಲ್ಲವ್ವಅತ್ತೆಗಳಾಟ ಗಂಡನ ಬ್ಯಾಟ ಸವತಿಯರ ಕಾಟನೆರೆಹೊರೆಯವರ ನೋಟ ಮನೆಯ ಮಾಟಗತರಸದೂಟಕಂಜಿ ನಡುನಡುಗಿಮೂರೂರ ಹಾದಿ ಮೆಟ್ಟಿ ಬಂದುಆರೂರರಸಿನ ಮೊರೆ ಹೊಕ್ಕೆನೆಯವ್ವವಿದರ್ಭದೇಶದ ಕುಂಡಿನಾಪುರದೊಳು ನಿನ್ನ ಗುರುತಕೇಳಿಉಪವನದ ಪ್ರದ್ಯೋತನಾಳ್ವ ಎರಡು ಬಾವಿಯ ಮ್ಯಾಗಣಹೂವಿನ ತೋಟದ ನಡುವೆ ಬುತ್ತಿಯನುಂಡು ನಿನ್ನ ಕಂಡುಕುಂತಳಾಪುರದಲ್ಲಿ ಕುಳಿತುಂಬಬ್ರಹ್ಮಾನಂದದವರ ಭಾಗ್ಯವ ಬೇಡ ಬಂದೆನೆ ಅವ್ವಅಸುವಿಗೆ ಹಾಲನೆರೆಯವ್ವಶಿಶುವಿಗೆನವನೀತನೀಡೆಯವ್ವಬಂಗಾರೆವ್ವ ಸಿಂಗಾರೆವ್ವ ಸೋರ್ಮುಡಿಯವ್ವಮಲ್ಲಿಗೆದುರುಬು ಸಂಪಿಗೆದುರುಬುಪಚ್ಚೆ ಮರುಗ ಮುಡಿವಾಳ ಶಾವಂತಿಗೆ ತುರಬಿನವ್ವಪ್ರಸನ್ವೆಂಕಟಕೃಷ್ಣನ ತೋಳ್ತಲೆಗಿಂಬಿನವ್ವ ನೀಡೆಯವ್ವ 83
ವಚನಇಂತಾಧ್ಯಾತ್ಮವಂ ಪೇಳಿಕಂತುವಿನಯ್ಯನ ಕಾಂತೆಯಂ ಸಂತಸಪಡಿಸಿಅಂತರಂಗದಿ ಚಿಂತಾಯಕನಂ ನೆನೆನೆನೆದುಭ್ರಾಂತಿ ಪರವಶಾದಂತೆ ಕೆಂಜೆಡೆಯಂ ತೂಗಿ ತೂಗಿಅಂತದತ್ಯಂತ ತೂಳಂತುಂಬಿಇಂತೆಂದಳಾ ಕೊರವಂಜಿ 84
ಬರುತಾನೆ ಜಾಣೆ ಬರುತಾನೆಬರುತಾನೆ ಚೆಲ್ವೆ ಬರುತಾನೆ 85
ಹಿಂಡುಭಂಡರೆಲ್ಲ ಕೂಡಿ ನಿನ್ನ ಮುಚ್ಚಲು ಎತ್ತಿಕೊಂಡು ಒಯ್ವ ಜಾಣ ಬರುತಾನೆಪುಂಡರೀಕಸುರಗಿ ಖಡ್ಗ ಭಿಂಡಿವಾಲ ನುಗ್ಗುಮಾಡಿದಂಡಿಸುವ ಜಾಣ ಬರುತಾನೆ 86
ಕುಂಡಿನಾಪುರದಿ ನೆರೆದ ಕೊಂಡಿ ಕುಹಕರ ತಲೆಯಚಂಡನಾಡ್ವ ಜಾಣ ಬರುತಾನೆಮಂಡೆಯಲ್ಲಿ ಪಚ್ಚಚೂಡವಿಟ್ಟು ರುಕ್ಮನಭಿಮಾನಕೊಂಡೇನೆಂಬ ಜಾಣ ಬರುತಾನೆ 87
ತಂಡ ತಂಡದಲ್ಲಿ ನಿನ್ನಯ್ಯನ ಸದ್ವಾಸನನ್ನಉಂಡೇನೆಂಬ ಜಾಣ ಬರುತಾನೆಲೆಂಡದಾನವಾರಿ ಪ್ರಸನ್ನವೆಂಕಟಕೃಷ್ಣ ಬೊಮ್ಮಾಂಡಪತಿ ಜಾಣ ಬರುತಾನೆ 88
ಚೆನ್ನೆ ಕೊರವಂಜಿ ಮಾತು ಶ್ರೀಕನ್ಯೆಕೇಳಿನಲಿವಾಂತುಮನ್ನಿಸಿ ಗುಣವ ಕೊಂಡಾಡಿ ಮುಕ್ತಿರನ್ನಗಾಣಿಕೆಯನು ನೀಡಿ 89
ಎಲೆ ಸತ್ಯಲೋಕದ ಕೊರವೆ ನೀಬಲು ಸತ್ಯ ನುಡಿದೆ ನಾನರಿವೆಛಲದಂಕ ದೇವರದೇವ ಈಖಳರೊಳು ಒಯ್ವುದರಿದವ್ವ 90
ಹರಿರಥವೇರಿ ಬಾಹೋಣ ಕಾಪುರುಷರ ಮತ ಕೆಡಿಸೋಣಗುರುಪ್ರಸನ್ವೆಂಕಟ ಕೃಷ್ಣ ಬಂದುಹೊರೆವುದುಂಟೇನವ್ವ ರಮಣಿ 91
ನಂಬಲೇನೆ ನಿನ್ನ ಮಾತು ಕೆಳದಿ ಕೊರವಮ್ಮ ನಮ್ಮಂಬುಜಾಕ್ಷ ಬಾಹನೇನೆ ದೇವಿ ಕೊರವಮ್ಮ 92
ಉಡಿಯ ಕಂದನಾಣೆ ಇಡುವೆ ನಂಬೆ ರುಕ್ಮಿಣಿ ನಾನುಡಿವ ನಾಮದಾಣೆ ಇಡುವೆ ನಂಬು ರುಕ್ಮಿಣಿ 93
ಎಡದ ತೋಳು ತೊಡೆಕಂಗಳುಹಾರಲೊಳಿತೇನೆ ಚಿಲಿಪಿಲಿನುಡಿವಶಕುನಎಡದ ಗೌಳಿಯ ನುಡಿಯು ಒಳಿತೇನೆ94
ಕಡಲಶಯನ ನಿನ್ನ ಪ್ರಾಣದೊಡೆಯ ಬಪ್ಪನೌ ಎನ್ನಪಡೆದನಯ್ಯ ಪ್ರಸನ್ನವೆಂಕಟಕೃಷ್ಣ ತಪ್ಪನೌ 95
ನಿನ್ನಗಂಡಬೆಣ್ಣೆಗಳ್ಳ ಕನ್ನೆಗೊಲ್ಲತಿಯರ ನಲ್ಲಕಣ್ಣೆವೆ ಸನ್ನೆಗಾರ ನಂದಗೋಪ ಕುಮಾರ 96
ಚಿನ್ನತನದಿ ದಶಲಕ್ಷ ಚಿನ್ನರ ಪಡೆದನು ದಕ್ಷಪೊನ್ನ ಕೊಳಲನೂದಿ ಮೂಜಗವ ಮೋಹಿಸುವ 97
ಉನ್ಮತ್ತಮಾತುಳನ್ನ ತುಳಿದ ತನ್ನ ಪೆತ್ತವರೆಡರ್ಗಳೆದಮನ್ನಿಸಿ ಪಾಂಡವರÀ ಪೊರೆದ ಚಿನ್ಮಯ ಸುಖದ 98
ಪೆಣ್ಗಳ್ ಹದಿನಾರುಸಾವಿರದ ನೂರೆಂಟನಾಳ್ವ ಚದುರನಿನ್ನ ಪ್ರಾಣ ಪ್ರಿಯ ಬಂದ ಪ್ರಸನ್ನವೆಂಕಟ ಕೃಷ್ಣ ಮುಕುಂದ 99
ನುಡಿ ನುಡಿಯೆಲೆ ಬಡನಡುವಿನ ಮಡದಿ ನಿನ್ನುಡಿಗುಚಿತವಕೊಡುವೆನಡಿವಿಡಿವೆ ಮನವಿಡುವನೆ ಕಡಲೊಡೆಯ ಕೈವಿಡಿವನೆ ಎನ್ನ ಕಡೆಯ ನೋಡಿ ನುಡಿವನೆ ಸವಿನುಡಿಯಕಡು ಬಲಿಭುಜ ಗಡಣಂಗಳ ನಡುವ್ಹಂಸನಪಡಿಮಿಡುಕುವೆನುಡಿ ಬೇಗೆಂದು ಪಡೆಗೂಡಿ ಹಲಿಯೊಡನಾಗಮ ನುಡಿಯೇ ನಿನ್ನುಡಿಗಮೃತವ ಪಡೆಯೇ ಮತ್ತೀಜಡಜಡಿ ಲೋಕೊಡೆಯೆ ಪ್ರಸನ್ನವೆಂಕಟ ಕೃಷ್ಣರಾಯನನುಡಿಯೆಲೆ ನುಡಿನುಡಿಯೆ ನುಡಿನುಡಿಯೆ 100
ಹರಿಬರುತಾನೆ ಗುರುತು ಗಂಟ ಕಟ್ಟೆಪಕೇಳೆ ನರಸಿಂಗನಂಗನೆಯನೊಯಿದು ಕೆಟ್ಟನರಿಗಳಾಳಬಲ್ಲವೇನೆ ನಲಿದು ನೀನುದುರುಳರಿಗೆ ದಕ್ಕಬಲ್ಲ್ಯೇನಮ್ಮ ನಿನ್ನಾಚರಣೆಯೆಲ್ಲ ಜಗದ್ವಿಡಂಬನಮ್ಮ 101
ನನ್ನ ತರಳನಾಣೆ ಸಟೆಯನಾಡೆನಮ್ಮ ನಾನೊರೆದವಾಕುಸಾಕ್ಷಿ ಬರುತಾವಮ್ಮ ಮ್ಯಾಲರಕೆಯುಳ್ಳ ತಾಯಿಯಾದರೆ ನೀ ನನ್ನಕರೆಸಿ ಕೇಳೆ ನಿನ್ನ ಮನೆಗೆ ಜಾಣೆ 102
ನಿನ್ನ ಹೆಸರ ತಕ್ಕ ಊಟವ ನೀಡೀಗ ನಾಹಸಿದೆನೆಂದು ಉಂಡುಕೊರವಿಬೇಗಪ್ರಸನ್ನವೆಂಕಟ ಕೃಷ್ಣನ ರಾಣಿಗೆÉ ಹಾರೈಸಿದಳು ಬಸುರು ಬುಡುಕೆಂದು 103
ಚಕ್ಕನೆ ನಿಂತಳು ಕೊರವ್ಯಮ್ಮ ಕಂಡುಫಕ್ಕನೆ ನಿಂತಳು ರುಕ್ಮಿಣಮ್ಮ ಪ್ರಾಣದಕ್ಕರ ಬಿಡಲಾರೆ ನಿನ್ನ ಗೆಳತಿ ಪ್ರೇಮಉಕ್ಕುತಿದೆ ನೀ ಹೋಗುವುದೊಳಿತೆ ಎನಲು ನಕ್ಕು 104
ಶ್ರೀ ಗೋಪಾಲ ಬಾಹನಕ ನಿಲ್ಲೆ ವಿಯೋಗ ತಾಳಲಾರೆ ನೀ ಬಲ್ಲೆಹೀಗೆನೆÀ್ನ ಬೇಡಿಕೊಂಡಳು ಮರುಳೆ ನೆನೆದಾಗೆ ಬಹೆನೆಂದ್ಹೇಳಿ ತೆರಳೆ ಅನುರಾಗದಿಂದ 105
ಆವ ಪರಿಂದಾರೆ ಹರಿಸೇವೆ ಮಾಡಿದೇವಋಷಿ ನಿಜಾನಂದ ತೀವಿಶ್ರೀವರ ಪ್ರಸನ್ವೆಂಕಟ ಕೃಷ್ಣನ ಮಹತೇವಿಡಿದು ಹೊಗಳುತ ಮುನಿರನ್ನ ರಾಮೆಯಾಜÕದಿ 106
ಸುರಋಷಿಪೇಳ್ದ ಒಕ್ಕಣೆಯಹರುಷದಿ ಕೇಳ್ದ ರುಕ್ಮಿಣಿಯಅರಸ ಪ್ರಸನ್ನವೆಂಕಟ ಕೃಷ್ಣನಿರುತದಿ ಜಯ ನಮಗೀವ 107
ಜಯ ಜಯ ಚಿನ್ಮಯಮೂರ್ತಿಜಯ ಜಗನ್ಮಯ ಸ್ವಚ್ಛಕೀರ್ತಿಜಯ ಜಯ ಪ್ರಸನ್ವೆಂಕಟ ಕೃಷ್ಣಜಯಮೂರ್ತಿನಿನಗೆ ಶರಣು108
*********

No comments:
Post a Comment