by ಪ್ರಸನ್ನವೆಂಕಟದಾಸರು
ಎಲೆ ದುರಿತವೆ ನೀ ಎನ್ನಏಳಿಲ ಮಾಡದೆ ಸಾಗಿನ್ನ ಕಡುಛÀಲ ಮಾಡಲಿ ಬನ್ನಬಡುವೆ ನಮ್ಮನಳಿನಾಕ್ಷನಾಣೆ ನೀ ಕೆಡುವೆ ಪ.
ಪಾಪಿ ನಾನೆಂದು ಸೋಂಕ ಬಂದೆ ನಮ್ಮಶ್ರೀಪತಿ ಕರುಣಿಸಿದಿಂದೆ ಇನ್ನಾಪರೆ ನಿಲ್ಲು ಮುಂದೆ ನಿನ್ನಾಟೋಪವ ಮುರಿವೆನು ಇಂದೆ 1
ಪರುಸ ಮುಟ್ಟಿದ ಲೋಹಚಿನ್ನಸಿರಿಅರಸನ ಭಟನೆ ಮಾನ್ಯ ಇನ್ನೊರೆದೆ ನೋಡೆಲೆ ಬಲುವೆಡ್ಡೆ ನಮ್ಮಸರಸವ ಬಿಡು ಕೈಕಡ್ಡೆ 2
ಲೇಸು ಬೇಕಾದರಿನ್ನುಳಿಯೈಹರಿದಾಸರ ಸಂಗವ ಕಳೆಯೈ ಭೃತ್ಯಾವಾಸೆಯ ಬಿಡುವವನಲ್ಲ ಶ್ರೀಪ್ರಸನ್ವೆಂಕಟ ಚೆಲ್ವ 3
*******

No comments:
Post a Comment