Saturday, 16 November 2019

ವ್ಯರ್ಥ ಆಯು ಕಳೆಯಬ್ಯಾಡಿರೊ ankita prasannavenkata

by ಪ್ರಸನ್ನವೆಂಕಟದಾಸರು
ವ್ಯರ್ಥ ಆಯು ಕಳೆಯಬ್ಯಾಡಿರೊ ಶ್ರೀಹರಿಯ ಸಂಕೀರ್ತನೆಯ ಮರೆಯಬ್ಯಾಡಿರೊಮೃತ್ಯು ಬಾರದಿರದು ಮುನ್ನೆ ಮನೋನೂರುವರ್ಷಕೆ ಪ.

ಹಿಂಡುಹೀನ ಯೋನಿಮುಖದಲಿ ತಾಬಂದು ಬಂದು ಕುಕರ್ಮ ಸವೆಯದಾಯಿತುಕಂಡ ಕುಹಕರ ಕೂಡ ಕೊಂಡಮಾತನಾಡಿ ಯಮದಂಡ ತೆರಬ್ಯಾಡಿ ಕೋದಂಡಕರನ ಹೊಗಳಿರೊ 1

ಬಾಲತ್ವವು ಆಟಕಾಯಿತು ಈ ಯೌವನವುಬಾಲೆಯರ ಬ್ಯಾಟಕಾಯಿತುಮ್ಯಾಲೆವಾರ್ಧಕ್ಯಕಂಗಬೀಳೆ ಸೊಪ್ಪಾಗಿ ಹೊಲಸಲದೀಗ ಎಚ್ಚರಿಕೆಯಲ್ಲಿ ಹರಿಯ ನೆನೆಯಿರೊ 2

ಹಗಲು ಹಸಿವೆ ತೃಷೆಗೆ ಪೋಯಿತು ಯಾಮಿನಿಯುಮಿಗಲು ಮೀರಿ ಮಧು ಮುಸುಕಿತುಸುಗುಣನಾಗಿ ಭವದ ನಂಬಿಕೆಯನೀಗಿಪ್ರಸನ್ವೆಂಕಟನಗಪತಿಯ ಪಾದಪದ್ಮಯುಗಳವನೆÀ ಕೊಂಡಾಡಿರೊ 3
*******

No comments:

Post a Comment