by ಪ್ರಸನ್ನವೆಂಕಟದಾಸರು
ರಾಗ - : ತಾಳ -
ಯದುವೀರ ಒದಗೆನ್ನ ನಾಲಿಗೆಗೆ
ಉದಯಾದ್ರಿ ಅಸ್ತಾಂತ ಆವಾವಾಗೆ ll ಪ ll
ನಿನ್ನ ನಾಮದ ಸ್ಮರಣೆಯೆ ಶುಭಕರ್ಮವು
ಉನ್ನತ ಸಂಕೀರ್ತನೆ ಶತಕ್ರತುವು
ಪುಣ್ಯಗಂಗಾಸ್ನಾನದ ಫಲಕಧಿಕವು
ಘನ್ನ ಜಪದ ಬೀಜವೆ ನಾಮವು ll 1 ll
ಬಂಗಾರದಿಳೆಯಳೆದೊಲಿದೀವ ದಾನದಿ
ಹಿಂಗದೆ ಉಭಯಸ್ಯ ಗೋಶತದಿ
ಶೃಂಗಾರ ಕೋಟಿ ಕನ್ಯಾದಾನಕಧಿಕವು
ಮಂಗಳಮಹಿಮ ಮುಕುಂದನ ನಾಮವು ll 2 ll
ಧರ್ಮಾರ್ಥ ಕಾಮಮೋಕ್ಷಗಳ ಮೂಲವಿದೆಂದು
ನಿರ್ಮಲ ಶೃತಿ ಸಾರುತಾವೆಂದು
ಮರ್ಮವರಿತು ನಾಮ ನಂಬಿದೆ ಶೇಷಾದ್ರಿಯ
ಹರ್ಮ್ಯನಿಲಯ ಪ್ರಸನ್ವೆಂಕಟಯ್ಯ ll 3 ll
***
ನಿನ್ನ ನಾಮದ ಸ್ಮರಣೆಯೆ ಶುಭಕರ್ಮವುಉನ್ನತ ಸಂಕೀರ್ತನೆ ಶತಕ್ರತುವುಪುಣ್ಯಗಂಗಾಸ್ನಾನದ ಫಲಕಧಿಕವುಘನ್ನ ಜಪದ ಬೀಜವೆÉ ನಾಮವು 1
ಬಂಗಾರದಿಳೆಯಳೆದೊಲಿದೀವ ದಾನದಿಹಿಂಗದೆ ಉಭಯಸ್ಯ ಗೋಶತದಿಶೃಂಗಾರ ಕೋಟಿ ಕನ್ಯಾದಾನಕಧಿಕವುಮಂಗಳಮಹಿಮ ಮುಕುಂದನ ನಾಮವು 2
ಧರ್ಮಾರ್ಥ ಕಾಮಮೋಕ್ಷಗಳ ಮೂಲವಿದೆಂದುನಿರ್ಮಲಶ್ರುತಿಸಾರುತಾವೆಂದುಮರ್ಮವರಿತು ನಾಮ ನಂಬಿದೆ ಶೇಷಾದ್ರಿಯಹಮ್ರ್ಯನಿಲಯ ಪ್ರಸನ್ವೆಂಕಟಯ್ಯ 3
********
No comments:
Post a Comment